ಕಡ್ಡಾಯ ಕನ್ನಡ

ಭಾಷಾ ಮಾಧ್ಯಮ ಗೊಂದಲ ನಿವಾರಣೆಗೆ ಸಂವಿಧಾನ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಬೇಕೆಂಬ ಒಕ್ಕೊರಲ ನಿರ್ಣಯದೊಂದಿಗೆ ಕನ್ನಡ...
ಕಿಮ್ಮನೆ ರತ್ನಾಕರ  ಮತ್ತು ಹೋರಟ್ಟಿ  ಸಮಾಲೋಚನೆ  (ಕೃಪೆ : ಕೆ ಪಿ ಎನ್)
ಕಿಮ್ಮನೆ ರತ್ನಾಕರ ಮತ್ತು ಹೋರಟ್ಟಿ ಸಮಾಲೋಚನೆ (ಕೃಪೆ : ಕೆ ಪಿ ಎನ್)

ವಿಧಾನಸಭೆ: ಭಾಷಾ ಮಾಧ್ಯಮ ಗೊಂದಲ ನಿವಾರಣೆಗೆ ಸಂವಿಧಾನ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಬೇಕೆಂಬ ಒಕ್ಕೊರಲ ನಿರ್ಣಯದೊಂದಿಗೆ ಕನ್ನಡ ಭಾಷಾ ಕಲಿಕಾ ವಿಧೇಯಕ ಹಾಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕುಗಳ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಮಂಗಳವಾರ ಅಂಗೀಕಾರ ನೀಡಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಂಡಿಸಿದ ಈ ಎರಡು ವಿಧೇಯಕಗಳು ರಾಜ್ಯಭಾಷಾ ಕಲಿಕಾ ವಿಚಾರದಲ್ಲಿ ಮಹತ್ವ ಪೂರ್ಣವಾದುದಾದರೂ
ನ್ಯಾಯಾಲಯದಲ್ಲಿ ಬಿದ್ದು ಹೋಗುವ ಅಪಾಯವಿದೆ ಎಂಬ ಆತಂಕ ವಿಧೇಯಕದ ಪರ್ಯಾಲೋಚನೆ ಸಂದರ್ಭದಲ್ಲಿ ವ್ಯಕ್ತವಾಗಿದೆ. ಹೀಗಾಗಿ ಸಂವಿಧಾನ ತಿದ್ದುಪಡಿಗೆ ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಪಕ್ಷಭೇದ ಮರೆತು ಶಾಸಕರು ಒತ್ತಾಯಿಸಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿದ್ದರಾಮಯ್ಯ, ಸದ್ಯದಲ್ಲೇ ನಡೆಯುವ ರಾಷ್ಟ್ರೀಯ ಅಭಿವೃದ್ಧಿ ಪರಿಷತ್ (ಎನ್‍ಡಿಸಿ) ಸಭೆಯಲ್ಲಿ ನಾನು ಈ ಪ್ರಸ್ತಾಪ ಮಾಡುವುದರ ಜತೆಗೆ ಸರ್ವಪಕ್ಷಗಳು ಮತ್ತು
ಸದನ ಪ್ರಮುಖರ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡುತ್ತೇನೆ ಎಂದು ಸದನಕ್ಕೆ ಭರವಸೆ ನೀಡಿದ್ದಾರೆ.

ಕನ್ನಡ ಭಾಷಾ ಕಲಿಕಾ ವಿಧೇಯಕ ವಿಧೇಯಕಕ್ಕೆ ಕಾನೂನು ತೊಡಕು ತಾರ್ಕಿಕವಾಗಿ ಎದುರಾಗುವ ಸಾಧ್ಯತೆ ಕಡಿಮೆ. ಎಲ್ಲ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ
ಕನ್ನಡವನ್ನು ಕಲಿಸಲೇಬೇಕು 2015-16ನೇ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದಲೇ ಕಡ್ಡಾಯ. ಬಳಿಕ ಹಂತಹಂತವಾಗಿ ಇದು ಜಾರಿಗೆ ಸರ್ಕಾರಿ, ಅನುದಾನಿತ, ಅನುದಾನ ರಹಿತ,ಅಲ್ಪಸಂಖ್ಯಾತರ ಶಾಲೆಗಳಲ್ಲಿ ಪ್ರಥಮ, ದ್ವಿತೀಯ,ತೃತೀಯ ಭಾಷೆಯಲ್ಲಿ ಕಲಿಸಲೇಬೇಕು ಸದ್ಯ ಕನ್ನಡ ಕಲಿಸದ ಶಾಲೆಗಳು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು. 2016-17ನೇ ಶೈಕ್ಷಣಿಕ ವರ್ಷದಿಂದ 1 ಮತ್ತು 2ನೇ ತರಗತಿಗೆ ವಿಸ್ತರಣೆಯಾಗಬೇಕು. ಹಂತಹಂತವಾಗಿ ಹತ್ತನೇ ತರಗತಿವರೆಗೂ ಕಲಿಕೆ ಜಾರಿಗೆ ಬರಬೇಕು. ಎಲ್ಲ ಶಾಲೆಗಳಲ್ಲೂ ರಾಜ್ಯ ಸರ್ಕಾರ ಅಧಿಕೃತ ಮಾಡಿದ ಪಠ್ಯವನ್ನೇ ಅನುಸರಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನು ಸಕ್ಷಮ ಅಧಿಕಾರಿಯಾಗಿ ನೇಮಕ ಮಾಡಬೇಕು.

 ವಿಧೇಯಕದಲ್ಲಿ ಏನಿದೆ?
ಈ ಎರಡೂ ವಿಧೇಯಕಗಳು ಭಾಷಾ ಮಾಧ್ಯಮ ದೃಷ್ಟಿಯಿಂದ ಮಹತ್ವದ್ದು. ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕುಗಳ ತಿದ್ದುಪಡಿ ವಿಧೇಯಕದ ಪ್ರಕಾರ, ಸಂವಿಧಾನದ 350 ಎ ವಿಧಿಯ ಪ್ರಕಾರ ಮಕ್ಕಳಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಒದಗಿಸುವುದು ಸಂಬಂಧಪಟ್ಟ ರಾಜ್ಯದ ಕರ್ತವ್ಯ. ಶಿಕ್ಷಣ ತಜ್ಞರು, ಬುದಿಟಛಿಜೀವಿಗಳು ಮಾತೃಭಾಷಾ ಶಿಕ್ಷಣದ ಅವಶ್ಯಕತೆಯನ್ನು ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತೃಭಾಷೆ (ಕನ್ನಡ)ಯಲ್ಲಿ 1ರಿಂದ 5ನೇ ತರಗತಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡುವುದನ್ನು ಈ ವಿಧೇಯಕದ ಮೂಲಕ ಕಡ್ಡಾಯಗೊಳಿಸಲಾಗುತ್ತಿದೆ. ಆದರೆ ಮಾತೃಭಾಷೆ ಶಿಕ್ಷಣ ವಿಚಾರದಲ್ಲಿ ಸುಪ್ರೀಂ ಕೋರ್ಟ್‍ನ ಸಂವಿಧಾನ ಪೀಠ ಈಗಾಗಲೇ ತನ್ನ ತೀರ್ಪನ್ನು ನೀಡಿರುವುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ವಿಧೇಯಕವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ದಟ್ಟವಾಗಿದೆ.

ಪ್ರಧಾನಿ ಬಳಿಗೆ ನಿಯೋ ಗ
ಭಾಷಾ ನೀತಿ ವಿಚಾರದಲ್ಲಿ ಸಂವಿಧಾನ ತಿದ್ದುಪಡಿ ತರುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ತರಲು ಸರ್ವಪಕ್ಷ ಮತ್ತು ಸದನ ಪ್ರಮುಖರ ನಿಯೋಗವನ್ನು ಕರೆದೊಯ್ಯಲು ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದ್ದಾರೆ. ಈ ಸಂಬಂಧ ಪ್ರಧಾನಿಯವರನ್ನು ನಾನು ಈಗಾಗಲೇ ಭೇಟಿ  ಮಾಡಿದ್ದೇನೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದೇನೆ. ಸದ್ಯದಲ್ಲೇ ನಡೆಯುವ ರಾಷ್ಟ್ರೀಯ ಅಭಿವೃದ್ಧಿ  ಪರಿಷತ್ ಸಭೆಯಲ್ಲಿ ವಿಷಯಪ್ರಸ್ತಾಪಿಸುತ್ತೇನೆ. ಅಗತ್ಯ ಬಿದ್ದರೆ ಮತ್ತೊಮ್ಮೆ ನಿಯೋಗ ಕರೆದೊಯ್ಯುತ್ತೇನೆ ಎಂದರು.



ಮಾತೃಭಾಷೆ ಶಿಕ್ಷಣ ವಿಚಾರದಲ್ಲಿ ಹಿನ್ನಡೆಯಾಗಲು ರಾಜ್ಯದ ಅಡ್ವೋಕೇಟ್ ಜನರಲ್ ಅವರ ನಿರ್ಲಕ್ಷ್ಯ ಕಾರಣ. ಸುಪ್ರೀಂನಲ್ಲಿ ವಾದ ಮಂಡಿಸಲು ನಿಯೋಜಿಸಲಾಗಿದ್ದ
ಹಿರಿಯ ನ್ಯಾಯವಾದಿಗಳನ್ನು ಕಿತ್ತುಹಾಕಿ ತಾವೇ ವಾದ ಮಂಡಿಸಿದ್ದಾರೆ. ಈ ವಿಚಾರ ದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಉದಾಸೀನತೆ ತೋರಿದೆ. ವಿಧೇಯಕ ತಂದಿರುವುದು
ಸ್ವಾಗತಾರ್ಹವಾದರೂ ಜಾರಿ ಕಷ್ಟ.
 ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಿಕ್ಷಣ ಸಚಿವ

ಈ ವಿಚಾರ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಮಟ್ಟದ ಮುಂದಾಳತ್ವ ವಹಿಸಿ ಸಂವಿಧಾನ ತಿದ್ದುಪಡಿ ಹೋರಾಟ ನಡೆಸಬೇಕು. ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸುವುದಕ್ಕೆ ಸಿದಟಛಿತೆ ನಡೆಸಬೇಕು.
 ವೈ.ಎಸ್.ವಿ.ದತ್ತ, ಜೆಡಿಎಸ್ ಶಾಸಕ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com