ದಕ್ಷಿಣ ಕಾಶಿ ನಂಜನಗೂಡಿನಲ್ಲಿ ವಿಜೃಂಭಣೆಯ ರಥೋತ್ಸವ

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನಂಜನಗೂಡಿನಲ್ಲಿ ಇಂದು ಬೆಳಗ್ಗೆ ಶ್ರೀಕಂಠೇಶ್ವರ ಸ್ವಾಮಿ ಪಂಚಮಹಾ ರಥೋತ್ಸವ ಧಾರ್ಮಿಕ ಸಂಪ್ರದಾಯದೊಂದಿಗೆ ನೆರೆವೇರಿತು.
ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ರಥಗಳು. ಚಿತ್ರಕೃಪೆ: ಅರುಣೇಶ್
ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ರಥಗಳು. ಚಿತ್ರಕೃಪೆ: ಅರುಣೇಶ್

ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನಂಜನಗೂಡಿನಲ್ಲಿ ಇಂದು ಬೆಳಗ್ಗೆ ಶ್ರೀಕಂಠೇಶ್ವರ ಸ್ವಾಮಿ ಪಂಚಮಹಾ ರಥೋತ್ಸವ ಧಾರ್ಮಿಕ ಸಂಪ್ರದಾಯದೊಂದಿಗೆ ನೆರೆವೇರಿತು.

ನಂಜನಗೂಡು ಕ್ಷೇತ್ರ 5 ರಥಗಳನ್ನು ಎಳೆಯುವ ಏಕೈಕ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ವಿವಿಧ ಕಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ರಥವನ್ನು ಭಕ್ತಿ ಭಾವದಿಂದ ಎಳೆದರು. ಶ್ರೀ ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಹಾಗೂ ಚಂಡಿಕೇಶ್ವರ ರಥಗಳನ್ನು ಈ ಸಂದರ್ಭದಲ್ಲಿ ಎಳೆಯಲಾಯಿತು.



ನವರತ್ನಗಳಾದ ಕಂಠಿ ಹಾರ ಮತ್ತು ಹೂವಿನ ಅಲಂಕಾರದಿಂದ ಶ್ರೀಕಂಠೇಶ್ವರ ಸ್ವಾಮಿ ವಿಗ್ರಹಗಳನ್ನು ರಥದಲ್ಲಿ ಇರಿಸಲಾಯಿತು. ರಥೋತ್ಸವದ ಅಂಗವಾಗಿ ದೇವಲಾಯವನ್ನು ವಿಶೇಷವಾಗ ಅಲಂಕಾರಿಸಲಾಗಿತ್ತು. ಪಟ್ಟಣದ ಬೀದಿಗಳು, ವೃತ್ತಗಳನ್ನು, ಹೂ ಮತ್ತು ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com