ಆನೆ ದಂತ ವಿಗ್ರಹ ಮಾರಾಟ: ಇಬ್ಬರ ಸೆರೆ

ಆನೆ ದಂತದಿಂದ ತಯಾರಿಸಿದ ಬುದ್ಧನ ವಿಗ್ರಹಗಳ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಬಂಧಿಸಿರುವ ವರ್ತೂರು ಪೊಲೀಸರು 2 ವಿಗ್ರಹ ಹಾಗೂ 1 ಪಚ್ಚೆಕಲ್ಲು ವಶಪಡಿಸಿಕೊಂಡಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆನೆ ದಂತದಿಂದ ತಯಾರಿಸಿದ ಬುದ್ಧನ ವಿಗ್ರಹಗಳ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಬಂಧಿಸಿರುವ ವರ್ತೂರು ಪೊಲೀಸರು 2 ವಿಗ್ರಹ ಹಾಗೂ 1 ಪಚ್ಚೆಕಲ್ಲು ವಶಪಡಿಸಿಕೊಂಡಿದ್ದಾರೆ.

ಕನಕಪುರದ ಮಹದೇವಪ್ರಸಾದ್(46), ಪ್ರಶಾಂತ್ ಕುಮಾರ್(27) ಬಂಧಿತರು. ಸರ್ಜಾಪುರ ಸಮೀಪದ ಮುತ್ತಾನಲ್ಲೂರು ಕ್ರಾಸ್‍ನಲ್ಲಿ ವಿಗ್ರಹ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಮಹಾದೇವಪ್ರಸಾದ್‍ನನ್ನು ಬಂಧಿಸಿದ್ದಾರೆ. ಆತ ನೀಡಿದ ಮಾಹಿತಿ ಮೇಲೆ ಪ್ರಶಾಂತ ಮನೆ ಮೇಲೆ ದಾಳಿ ನಡೆಸಿ ಮತ್ತೊಂದು ವಿಗ್ರಹ ಹಾಗೂ ಸೈಜ್‍ಕಲ್ಲಿನ ಗಾತ್ರದ ಪೆಚ್ಚಕಲ್ಲು ವಶಪಡಿಸಿಕೊಂಡಿದ್ದಾರೆ. ಕಳ್ಳ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಸುಮಾರು ರು.12ರಿಂದ ರು.13 ಲಕ್ಷ ಇದೆ ಎಂದು ಆಗ್ನೇಯ ಡಿಸಿಪಿ ರೋಹಿಣಿ ಕಟೋಚ್ ತಿಳಿಸಿದ್ದಾರೆ.

ಐಪಿಎಲ್ ಬೆಟ್ಟಿಂಗ್: ಬಂಧನ
ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ ರು.1.5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಮೋಹನ್ ಕುಮಾರ್(38) ಹಾಗೂ ರಾಜು(34) ಬಂಧಿತರು. ಆರೋಪಿಗಳು ನಾಗರಬಾವಿ 12ನೇ ಬ್ಲಾಕ್‍ನಲ್ಲಿರುವ ಮನೆಯಲ್ಲಿ ಗುರುವಾರ(ಏ.30) ಕೊಲ್ಕತ್ತಾ ಹಾಗೂ ಚೆನ್ನೈ ನಡುವೆ ನಡುವಿನ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು. ರು.1.50 ಲಕ್ಷ ನಗದು, 8 ಮೊಬೈಲ್ ಫೋನ್‍ಗಳು, 1 ಲ್ಯಾಪ್‍ಟಾಪ್, 1 ಟಿವಿ ವಶಪಡಿಸಿಕೊಂಡಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com