ಪಾಳು ಕಟ್ಟಡದಲ್ಲಿ ಆಟ-ಪಾಠ!

ಇದನ್ನು ಏನೆಂದು ಹೇಳಬೇಕು? ಸರ್ಕಾರದ ನಿರ್ಲಕ್ಷಯವೋ? ಹೇಳಿಕೊಡುವುದೇ ಉಚಿತವಾಗಿ, ಇ್ನು ಸೂರಿದ್ದರೆಷ್ಟು ಬಿಟ್ಟರೆಷ್ಟು ಎಂಬ ಶಿಕ್ಷಣ ಇಲಾಖೆಯ ಅಸಡ್ಡೆಯೋ? ಇದು ಹೆಸರಿಗೆ...
ಪಾಳು ಕಟ್ಟಡದಲ್ಲಿರುವ ವಸಂತನಗರದ ಅಂಗನವಾಡಿ
ಪಾಳು ಕಟ್ಟಡದಲ್ಲಿರುವ ವಸಂತನಗರದ ಅಂಗನವಾಡಿ

ಬೆಂಗಳೂರು: ಇದನ್ನು ಏನೆಂದು ಹೇಳಬೇಕು? ಸರ್ಕಾರದ ನಿರ್ಲಕ್ಷಯವೋ? ಹೇಳಿಕೊಡುವುದೇ ಉಚಿತವಾಗಿ, ಇ್ನು ಸೂರಿದ್ದರೆಷ್ಟು ಬಿಟ್ಟರೆಷ್ಟು ಎಂಬ ಶಿಕ್ಷಣ ಇಲಾಖೆಯ ಅಸಡ್ಡೆಯೋ? ಇದು ಹೆಸರಿಗೆ ಅಂಗನವಾಡಿ ಕಟ್ಟಡವೇ?

ತಲೆ ಎತ್ತಿದರೆ ಆಕಾಶ ಮಕ್ಕಳಿಗೆ ಕಾಣುತ್ತದೆ. ಮಳೆ ಬಂದರೆ ನೀರು ನೇರಾ ಒಳಗೆ ಬರುತ್ತದೆ. ಚಳಿಗಾಲದಲ್ಲಿ ಶೀತ ಗಾಳಿ. ಹೀಗಾಗಿ ಇದನ್ನು 'ಸರ್ವಋತು ಕಟ್ಟಡ' ಎಂದು ಹೇಳಬಹುದು. ಪಾಳು ಸ್ಥಿತಿಯಲ್ಲಿರುವ ಈ ಕಟ್ಟಡ 25 ಮಕ್ಕಳಿಗೆ ಪಾಠ ಹೇಳುವ ಅಂಗನವಾಡಿ ಎಂದು ಹೇಳಿದರೆ ನೀವು ನಂಬಲೇಬೇಕು.

`ಶಿವಾಜಿನಗರ 2' ಎಂದು ಅರ್ಧ ಮುರಿದ ಬಾಗಿಲಲ್ಲಿ ಬರೆದಿರುವ ಈ ಅಂಗವಾಡಿ ಸಣ್ಣ ಕ
ಕೊಠಡಿಯಂತಿದೆ. 10 ಮಂದಿ ಒಟ್ಟಿಗೆ ನಿಂತರೆ ಕೊಠಡಿ ತುಂಬಿಹೋಗುತ್ತದೆ. ವಸಂತನಗರದ ದೇವರಾಜು ಅರಸು ಭವನದ ಪಕ್ಕದಲ್ಲಿರುವ ಈ ಕೊಠಡಿಯಲ್ಲಿ ಕೊಳಗೇರಿಯ ಮಕ್ಕಳು ಬೆ.9.30ರಿಂದ ಸಂಜೆ. 4 ರವರೆಗೆ ಕೂರುತ್ತಾರೆ. ಒಬ್ಬರೇ ಕಾರ್ಯಕರ್ತೆ ಈ ಮಕ್ಕಳನ್ನು ನೋಡಿ ಕೊಂಡು, ಪಾಠಹೇಳಿ, ಆಟವಾಡಿಸಿ, ಊಟ ಬಡಿಸುತ್ತಾರೆ. ಇವರಿಗೆ ಒಬ್ಬ ಸಹಾಯಕರನ್ನೂ ನೀಡಿಲ್ಲ.

ಯಾವುದೇ ಕ್ಷಣದಲ್ಲಿ ಕುಸಿಯಬಹುದು: ಕೊಳೆಗೇರಿಯಲ್ಲಿರುವ 120 ಕುಟುಂಬಗಳ ಮಕ್ಕಳು ಇಲ್ಲಿ ಆಡುತ್ತಾ ಸಂತೋಷವಾಗಿ ಕಾಲ ಕಳೆಯುತ್ತಾರೆ. ಕೊಳೆಗೇರಿಯ ಬಡಜನ  
ಮಕ್ಕಳನ್ನು ಪಾಲನೆ ಮಾಡುವ ಆಶ್ರಯತಾಣವೂ  ಇದೇ ಆಗಿದೆ. ಕೂಲಿ ಕೆಲಸಕ್ಕೆ ಹೋಗುವ ಇಲ್ಲಿನ ಮಂದಿಗೆ ಸಂಜೆಯವರೆಗೆ ಮಕ್ಕಳನ್ನು ಹೊರಗೆ ಬಿಡಲಾಗದೆ ಅಂಗನವಾಡಿಯಲ್ಲಿ ಬಿಟ್ಟುಹೋಗುತ್ತಾರೆ. ಇನ್ನೇನು ಕುಸಿಯುತ್ತದೆ ಎನ್ನಿಸುವಂತಹ ಕಟ್ಟಡದಲ್ಲಿ ಮಕ್ಕಳು ಕೂರುವುದಕ್ಕಿಂತ ತಂದೆ ತಾಯಿಯೊಂದಿಗೆ ಇರುವುದೇ ಉತ್ತಮ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಕಳೆದ ಶನಿವಾರ ನಗರದಲ್ಲಿ ಬಂದ ಮಳೆಗೆ ಕಟ್ಟಡಕ್ಕೆ ಹಾಕಿದ ಸಿಮೆಂಟು ಶೀಟುಗಳು ಹಾರಿಹೋಗಿವೆ. ಹೀಗಾಗಿ ಬಿಸಿಲು ನೇರವಾಗಿ ಮಕ್ಕಳ ಬೇಳೆ ಬೀಳುತ್ತಿದೆ. ಮಳೆ ಬಂದರೆ ಒದ್ದೆಯಾಗುವ ಭಯದಿಂದ ಕೊಳಗೇರಿಯಲ್ಲಿರುವ `ಟೆಂಟು ಮನೆ'ಗಳಿಗೆ ಮಕ್ಕಳು ಮರಳಬೇಕು.

ಮಳೆಯಿಂದ ಧಾನ್ಯ ಹಾಳು
2011ರಿಂದ ಆರಂಭವಾಗಿರುವ ಈ ಅಂಗನವಾಡಿಗೆ ಇತ್ತೀಚೆಗೆ ಕಾರ್ಯಕರ್ತೆ ರಾಜೇಶ್ವರಿ ಬಂದಿದ್ದಾರೆ. ಸಹಾಯಕರಿಲ್ಲದೆ ಒಬ್ಬರೇ ಎಲ್ಲವನ್ನೂ ಮಾಡಬೇಕಿರುವುದರಿಂದ ತಮ್ಮ ಕುಟುಂಬದ ಮಹಿಳೆಯೊಬ್ಬರ ಸಹಾಯ ಪಡೆಯುತ್ತಿದ್ದಾರೆ. ಸೋಮವಾರ, ಬುಧವಾರ ಹಾಗೂ ಶುಕ್ರವಾರ ಪಾಯಸ, ಕಿಚಡಿ, ಮಂಗಳವಾರ, ಗುರುವಾರ, ಶನಿವಾರ ಚಿತ್ರಾನ್ನ ನೀಡಲಾಗುತ್ತದೆ. ಮಕ್ಕಳನ್ನು ಸಲಹುವುದರೊಂದಿಗೆ ಈ ಕಾರ್ಯಕರ್ತೆ ಅಡುಗೆಯನ್ನೂ ಮಾಡಬೇಕು. ಕಸ ತುಂಬಿರುವ ಪ್ರದೇಶದಲ್ಲೇ ಇರುವುದರಿಂದ ಹೆಗ್ಗಣ, ಇಲಿಗಳ ಕಾಟವೂ ಹೆಚ್ಚಿದೆ.

ಪಕ್ಕದಲ್ಲೇ ನಿಗಮ:

ಅಂಗನವಾಡಿ ಪಕ್ಕದಲ್ಲೇ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಚೇರಿಯಿದೆ. ಇಷ್ಟಾದರೂ ಪ್ರತಿನಿಧಿಗಳು ಕೊಳಗೇರಿ ಕುಟುಂಬಗಳ ಮಕ್ಕಳ ಸಂಕಷ್ಟ ಕಂಡಿಲ್ಲ. ಹತ್ತಿರದಲ್ಲೇ ಬಿಬಿಎಂಪಿ ಕಟ್ಟಡವಿದ್ದು, ಅಂಗನವಾಡಿ ಸ್ಥಳಾಂತರಿಸಲು ಅಧಿಕಾರಿಗಳು ಸೂಚಿಸಿದ್ದಾರೆ. ಕಟ್ಟಡವನ್ನು ಅಭಿವೃದ್ಧಿಪಡಿಸುವಂತೆ ಸ್ಥಳೀಯರು ಮನವಿ ಮಾಡಿದ್ದರು. ಆದರೆ ಸ್ಥಳಾಂತರವೂ ಮಾಡದೆ, ಕಟ್ಟಡವನ್ನು ಅಭಿವೃದ್ಧಿ ಮಾಡದೆ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ. ಜೋರಾದ ಮಳೆ ಬಂದರೆ ಬೀಳುವ ಹಂತದಲ್ಲಿರುವ ಕಟ್ಟಡದಲ್ಲಿ ಮಕ್ಕಳನ್ನಿರಿಸಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com