ರಕ್ತಚಂದನಕ್ಕೆ ಮರುಳಾದ ಚೀನಾ ವಿದ್ಯಾರ್ಥಿಗಳ ಸೆರೆ

ರಕ್ತ ಚಂದನ ಕಳ್ಳ ಸಾಗಣೆ ಪ್ರಕರಣದಲ್ಲಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಚೀನಾ ದೇಶದ ಬಿಇ ವಿದ್ಯಾರ್ಥಿನಿ ಸೇರಿ ನಾಲ್ವರನ್ನು ತಿರುಮಲಶೆಟ್ಟಿಹಳ್ಳಿ ಪೊಲೀಸರು ಬಂಧಿಸಿದ್ದಾರೆ...
ಬಂಧಿತ ಚೀನಾ ವಿದ್ಯಾರ್ಥಿಗಳು
ಬಂಧಿತ ಚೀನಾ ವಿದ್ಯಾರ್ಥಿಗಳು

ಬೆಂಗಳೂರು: ರಕ್ತ ಚಂದನ ಕಳ್ಳ ಸಾಗಣೆ ಪ್ರಕರಣದಲ್ಲಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಚೀನಾ ದೇಶದ ಬಿಇ ವಿದ್ಯಾರ್ಥಿನಿ ಸೇರಿ ನಾಲ್ವರನ್ನು ತಿರುಮಲಶೆಟ್ಟಿಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಚೀನಾದ ಚಾಂಗ್‍ಚುಂಗ್ ನಗರದ ಯುವತಿ ಲೂಂಗ್ ಕ್ಸಿಯಂಗ್, ಝಾಂಗ್ಗೂಅ(22), ಮೈಸೂರಿನ ಸಲೀಂ ಪಾಷಾ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕೋನಪ್ಪನ ಅಗ್ರಹಾರ ನಿವಾಸಿ ಶಿವಕುಮಾರ್ (25) ಬಂಧಿತರು. ಆರೋಪಿಗಳಿಂದ 16 ಕೆಜಿ ರಕ್ತದ ಚಂದನ ಹಾಗೂ 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಯುವತಿ ಲೂಂಗ್ ಕ್ಸಿಯಂಗ್ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಇ 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, 2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಳು. ಈಕೆಯ ಸ್ನೇಹಿತ ಝಾಂಗ್ ಗೂಅ ಜನವರಿಯಲ್ಲಿ ನಗರಕ್ಕೆ ಪ್ರವಾಸಿ ವಿಸಾ ಮೇಲೆ ಬಂದಿದ್ದ. ಚೀನಾದಲ್ಲಿ ರಕ್ತ ಚಂದನಕ್ಕೆ ಭಾರಿ ಬೇಡಿಕೆ ಇರುವುದರಿಂದ ಆರೋಪಿಗಳು ನಗರದಿಂದ ರಕ್ತ ಚಂದನ ಕಳ್ಳಸಾಗಣೆ ದಂಧೆಯತ್ತಾ ಆಕರ್ಷಿತರಾಗಿದ್ದರು. ಇವರಿಗೆ ಮೈಸೂರಿನಲ್ಲಿ ಟೂರಿಸ್ಟ್ ಗೈಡ್ ಆಗಿರುವ ಸಲೀಂ ಹಾಗೂ ಶಿವಕುಮಾರ್ ಬೆಂಗಳೂರು ಹೊರವಲಯ ದಲ್ಲಿ ರಕ್ತಚಂದನ ಮಾರಾಟದ ಬಗ್ಗೆ ಮಾಹಿತಿ ನೀಡಿದ್ದರು.

ನಗರದಲ್ಲಿ ಅಪರಿಚಿತ ವ್ಯಕ್ತಿಯ ಬಳಿ ಸ್ಯಾಂಪಲ್ ಗಾಗಿ 16 ಕೆಜಿ ರಕ್ತಚಂದನ ಖರೀದಿಸಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ತಿರುಮಲಶೆಟ್ಟಿಹಳ್ಳಿ ಪೊಲೀಸರು ಆರೋಪಿ ಗಳನ್ನ ಬಂಧಿಸಿದ್ದಾರೆ. ಬಂಧಿತ ಚೀನಾ ನಾಗರಿಕರ ಬಗ್ಗೆ ಚೀನಾ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ. ಇಬ್ಬರು ಅಧಿಕೃತ ಪಾಸ್ ಪೊರ್ಟ್ ಹೊಂದಿದ್ದು, ರಕ್ತಚಂದನ ಮಾರಾಟಗಾರರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಎಸ್ಪಿ ರಮೇಶ್ ಬಾನೋತ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com