ತಂಬಾಕು ನಿಷೇಧಕ್ಕೆ ಸುರೇಶಕುಮಾರ್ ಆಗ್ರಹ

ಜಗಿಯುವ ತಂಬಾಕಿನಿಂದಾಗುತ್ತಿರುವ ಅವಘಡವನ್ನು ಮನಗಂಡ 15ಕ್ಕೂ ಹೆಚ್ಚು ರಾಜ್ಯಗಳು ಜಗಿಯುವ ತಂಬಾಕು ನಿಷೇಧಿಸಿವೆ. ಕೇಂದ್ರ ಸರ್ಕಾರ ಸಹ ಜಗಿಯುವ ತಂಬಾಕು ನಿಷೇಧಿಸುವಂತೆ ಶಿಫಾರಸು ಮಾಡಿದ್ದರೂ ರಾಜ್ಯ ಸರ್ಕಾರ ಮಾತ್ರ ಈ ವಿಚಾರದಲ್ಲಿ ಉದಾಸೀನ ಮಾಡುತ್ತಿದೆ ಎಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಗಿಯುವ ತಂಬಾಕಿನಿಂದಾಗುತ್ತಿರುವ ಅವಘಡವನ್ನು ಮನಗಂಡ 15ಕ್ಕೂ ಹೆಚ್ಚು ರಾಜ್ಯಗಳು ಜಗಿಯುವ ತಂಬಾಕು ನಿಷೇಧಿಸಿವೆ. ಕೇಂದ್ರ ಸರ್ಕಾರ ಸಹ ಜಗಿಯುವ ತಂಬಾಕು ನಿಷೇಧಿಸುವಂತೆ ಶಿಫಾರಸು ಮಾಡಿದ್ದರೂ ರಾಜ್ಯ ಸರ್ಕಾರ ಮಾತ್ರ ಈ ವಿಚಾರದಲ್ಲಿ ಉದಾಸೀನ ಮಾಡುತ್ತಿದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಗಿಯುವ ತಂಬಾಕು ಬಳಕೆಯನ್ನು ನಿಷೇಧಿಸುವ ಕುರಿತ ಕಡತಕ್ಕೆ ಆರೋಗ್ಯ ಸಚಿವ ಖಾದರ ಸಹಿ ಹಾಕಿದ್ದಾರೆ. ಆದರೆ, ಕ್ಯಾಬಿನೆಟ್ ನಲ್ಲಿ ಈವರೆಗೆ ಈ ವಿಷಯಕ್ಕೆ ಒಪ್ಪಿಗೆ ಸಿಕ್ಕಿಲ್ಲ ಎಂದು ಹೇಳಿದರಲ್ಲದೇ, ಕ್ಯಾಬಿನೆಟ್ ಟಿಪ್ಪಣಿಯನ್ನು ಸುದ್ಧಿಗೋಷ್ಠಿಯಲ್ಲಿ ಪ್ರದರ್ಶಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಜಗಿಯುವ ತಂಬಾಕು, ಗುಟ್ಕಾ, ಪಾನ್‍ಪರಾಗ್, ಕಡ್ಡಿ ಪುಡಿ ಇವು ಗಳನ್ನು ನಿಷೇಧಿಸಬೇಕಿದೆ. ಆದರೆ ಇದು ಸಂಪುಟ ಸಭೆಯಲ್ಲಿ ಬಂದು ಚರ್ಚೆ ಕೂಡ ಆಗಿಲ್ಲ.ಬಿಪಿಎಲ್ ಕಾರ್ಡುದಾರರಿಗೆ ಉಚಿವಾಗಿ  ಅಕ್ಕಿ ಕೊಡುವುದಾಗಿ ಸರ್ಕಾರ ಹೇಳಿದೆ. ಇದಕ್ಕೂ ಮೊದಲು ಆರೋಗ್ಯ ಕಾಪಾಡುವುದು ಮುಖ್ಯವಾಗಬೇಕು. ಉಚಿತ ಪಡಿತರ ಕೊಟ್ಟರೂ ಇದನ್ನು ತಿನ್ನಲು ಆರೋಗ್ಯವಂತ ಬಾಯಿ ಬೇಡವೇ? ಹೀಗಾಗಿ ಮೊದಲು ತಂಬಾಕು ಸೇವನೆ ನಿಷೇಧಿಸಲಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com