
ಬೆಂಗಳೂರು: ಟಿಪ್ಪುಸುಲ್ತಾನ್ ಮರಣ ಹೊಂದಿದ ದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್
ಆಗ್ರಹಿಸಿದರು. ಟಿಪ್ಪು ಸುಲ್ತಾನ್ 216ನೇ ಹುತಾತ್ಮ ದಿನಾಚರಣೆ ಅಂಗವಾಗಿ ಸೋಮವಾರ ಅಖಿಲ ಕರ್ನಾಟಕ ಸೂಫಿ ಸಂತರ ಸಂಘ, ಕೆಪಿಸಿಸಿ, ದಿ ಬೆಂಗಳೂರು ಆಟೋ ರಿಕ್ಷಾ
ಡೀಲರ್ಸ್ ಮತ್ತು ಡ್ರೈವರ್ಸ್ ಸಂಘ ಟಿಪ್ಪು ಸುಲ್ತಾನ್ ಅರಮನೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಡಿನ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಹುತಾತ್ಮ ದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು.
ಸರ್ಕಾರ ಮೇ 4ರಂದು ಸರ್ಕಾರಿ ರಜೆ ಘೋಷಿಸಿ, ಅದ್ದೂರಿ ಆಚರಣೆ ಮಾಡಬೇಕು. ಟಿಪ್ಪು ಸುಲ್ತಾನ್ ನೆನಪಿಗಾಗಿ ದೆಹಲಿ ಸಂಸತ್ತಿನ ಮುಂಭಾಗದಲ್ಲಿ ಪ್ರತಿಮೆ ಸ್ಥಾಪಿಸಬೇಕು. ಈ
ಬಗ್ಗೆ ಮನವಿ ಸಲ್ಲಿಸಲು ಮುಂದಿನ ತಿಂಗಳು ದೆಹಲಿಗೆ ತೆರಳಿ ಲೋಕಸಭೆ ಸ್ಪೀಕರ್ ಭೇಟಿ ಮಾಡಲಾಗುವುದು. ರಾಜ್ಯ ಸರ್ಕಾರದಿಂದ ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇಗುಲ ಹಾಗೂ ಟಿಪ್ಪು ಸಮಾಧಿ„ ಅಭಿವೃದ್ಧಿಪಡಿಸಬೇಕು. ಇಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವ ಮೂಲಕ ಹಿಂದನ ವೈಭವ ಮತ್ತೆ ಮರಳುವಂತೆ
ಮಾಡಬೇಕು. ಬೆಂಗಳೂರಿನಲ್ಲಿ ಟಿಪ್ಪು ಭವನ ನಿರ್ಮಿಸಿ ಇತಿಹಾಸ ತಿಳಿಸುವ ಮಾಹಿತಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
ಕೆ.ಆರ್.ಮಾರುಕಟ್ಟೆಯ ಟಿಪ್ಪು ಅರಮನೆಯಿಂದ ಶ್ರೀರಂಗಪಟ್ಟಣದವರೆಗೆ `ಟಿಪ್ಪು ಜ್ಯೋತಿ' ಹಿಡಿದು ಮೆರವಣಿಗೆ ನಡೆಸಲಾಯಿತು. ಸೂಪಿs ಸಂತರ ಸಂಘದ
ಅಧ್ಯಕ್ಷ ಸೂಫಿ ವಲಿಬಾ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಡಾ.ಗುಲ್ಷಾದ ಅಹ್ಮದ್ ಹಾಜರಿದ್ದರು.
Advertisement