ಕಟ್ಟಡ ತ್ಯಾಜ್ಯ ವಾರದೊಳಗೆ ತೆಗೆಯದಿದ್ದರೆ ಕ್ರಮ

ಪಾದಚಾರಿ ಮಾರ್ಗ ಹಾಗೂ ರಸ್ತೆಗಳಲ್ಲಿ ಬಿದ್ದಿರುವ ಕಟ್ಟಡ ತ್ಯಾಜ್ಯ ಹಾಗೂ ಅನಧಿಕೃತ ಜಾಹೀರಾತು ಮೂಲಕ ತೆರವುಗೊಳಿಸಲು ಬಿಬಿಎಂಪಿ...
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಪಾದಚಾರಿ ಮಾರ್ಗ ಹಾಗೂ ರಸ್ತೆಗಳಲ್ಲಿ ಬಿದ್ದಿರುವ ಕಟ್ಟಡ ತ್ಯಾಜ್ಯ ಹಾಗೂ ಅನಧಿಕೃತ ಜಾಹೀರಾತು ಮೂಲಕ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಒಂದು ವಾರದ ಗಡವು ನೀಡಲಾಗಿದೆ. ಆಡಳಿತಾಧಿಕಾರಿಯಾದ ಟಿ.ಎಂ. ವಿಜಯಭಾಸ್ಕರ್ ಹಾಗೂ ಆಯುಕ್ತ ಜಿ.ಕುಮಾರ್ ನಾಯಕ್ ಶನಿವಾರ ನಡೆಸಿದ ಸಭೆಯಲ್ಲಿ ಒಂದು ವಾರದ ಗಡವು ನೀಡಿದ್ದಾರೆ. ವಲಯ ಮಟ್ಟದಲ್ಲಿ  ಕಾರ್ಯಪಾಲಕ ಎಂಜಿನಿಯರ್ ನೇತೃತ್ವದಲ್ಲಿ
ತಂಡಗಳನ್ನು ರಚಿಸಿ ಕಾರ್ಯನಿರ್ವಹಣೆ ಹಾಗೂ ಮೇಲ್ವಿಚಾರಣೆ ಜವಾಬ್ದಾರಿ ವಹಿಸಬೇಕು.
ಕಟ್ಟಡ ತ್ಯಾಜ್ಯ ತೆಗೆಯಲು ಪ್ರತಿ ವಾಡ್ರ್ ಗೆ ಒಂದು ಟ್ರ್ಯಾಕ್ಟರ್ ಹಾಗೂ ಗ್ಯಾಂಗ್ ಮನ್ ನೀಡಲಾಗುವುದು. ತ್ಯಾಜ್ಯ ಹೆಚ್ಚಿದ್ದು, ಅಧಿಕ ಕಾರ್ಮಿಕರ ಅಗತ್ಯ ವಿದ್ದರೆ ಅನುಮೋದನೆ ಪಡೆದು ಕೊಂಡು ಕಾರ್ಯ ನಿರ್ವಹಿಸಬೇಕು. ರಾತ್ರಿ ವೇಳೆ ಸಾರ್ವ ಜನಿಕರು ಕಟ್ಟಡ ತ್ಯಾಜ್ಯವ್ನು ರಸ್ತೆ ಮೇಲೆ ಹಾಕುತ್ತಿದ್ದಾರೆ. ನಿಯಂತ್ರಣ ಕೊಠಡಿಯ ವಾಹನದ  ಸಿಬ್ಬಂದಿ ಹಾಗೂ ಪೊಲೀಸರ ಸಹಾಯದಗಿಂದ  ತಪ್ಪಿತಸ್ಥರನ್ನು ಗುರುತಿಸಿ ದಂಡ ವಿಧಿಸಬೇಕು ಎಂದು ಜಂಟಿ ಆಯುಕ್ತರಿಗೆ ಆಡಳಿತಾಧಿಕಾರಿಗೆ ಸೂಚಿಸಿದರು.

ಬಿಲ್ಡರ್ಸ್‍ಗಳ ಸಭೆ: ರಸ್ತೆ ಬದಿಯಲ್ಲಿ ಕಟ್ಟಡ ತ್ಯಾಜ್ಯ ರಾಶಿ ಹಾಕದಂತೆ ಬಿಲ್ಡರ್ಸ್‍ಗಳಿಗೆ ಹಾಗೂ ಕ್ರೆಡಾಯ್ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಧಿಕಾರಿಗಳಿಗೆಸಹಕಾರ ನೀಡಲು ಸೂಚಿಸಲಾ ಗುವುದು. ಪ್ರತಿ ವಾರ್ಡ್‍ಗಳಲ್ಲಿ ನಡೆಯುವ ಕಟ್ಟಡ ನಿರ್ಮಾಣ ಸ್ಥಳಗಳಿಗೆ ಎಂಜಿನಿ ಯರ್‍ಗಳು ಭೇಟಿ ನೀಡಿ ತಿಳಿವಳಿಕೆ ನೀಡಬೇಕು. ಸಾಮಾಜಿಕ ಕಾರ್ಯಕರ್ತರು ಅಥವಾ ಸ್ಥಳೀಯ ಪ್ರತಿನಿಧಿಗಳ ದೂರವಾಣಿ ಸಂಖ್ಯೆ ಪಡೆದುಕೊಂಡು ನಿರಂತರ ಸಂಪರ್ಕದ ಲ್ಲಿದ್ದು, ಕಟ್ಟಡ ತ್ಯಾಜ್ಯ ಹಾಕುವುದನ್ನು ತಪ್ಪಿಸಬೇಕು. ಕಟ್ಟಡ ತ್ಯಾಜಕ್ಯ ಹಾಕಲು ಬಿಬಿಎಂಪಿ ಯಿಂದ ಗುರುತಿಸಿದ ಸ್ಥಳಗಳ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಫಲಕ ತೆರವಿಗೆ ಸೂಚನೆ: ಒಂದು ವಾರದಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು. ಫಲಕ ತೆರವು ಜವಾಬ್ದಾರಿಯನ್ನು ವಲಯ ಮುಖ್ಯ ಎಂಜಿನಿಯರ್ ವಹಿಸಿಕೊಂಡು, ಅಗತ್ಯ ಸಿಬ್ಬಂದಿ ನೇಮಿಸಿ 3 ದಿನಗಳಲ್ಲಿ ಮಾಹಿತಿ ನೀಡಬೇಕು. ನಗರದಲ್ಲಿ 1,940 ಕಿ.ಮೀ. ಉದ್ದದ ಆರ್ಟಿರಿ ಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಯಿದ್ದು, ಗುಂಡಿಗಳನ್ನು ಮುಚ್ಚುವ ಕಾರ್ಯ ಸೋಮ ವಾರದಿಂದ ಆರಂಭವಾಗಬೇಕು ಎಂದು ಆಯುಕ್ತ ಕುಮಾರ್ ನಾಯಕ್ ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com