ಚಾಕು ಬೀಸಿದ ರೌಡಿಗಳಿಗೆ ಪೊಲೀಸರ ಗುಂಡು

ಕುಖ್ಯಾತ ರೌಡಿಶೀಟರ್‍ಗಳಿಬ್ಬರು ತಮ್ಮನ್ನು ಬಂಧಿಸುವುದಕ್ಕಾಗಿ ದಾಳಿ ನಡೆಸಿದ್ದ ಪೊಲೀಸರ ಮೇಲೆಯೇ ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಇದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ...
ಸೆರೆಸಿಕ್ಕ ಆರೋಪಿಗಳು
ಸೆರೆಸಿಕ್ಕ ಆರೋಪಿಗಳು

ಬೆಂಗಳೂರು: ಕುಖ್ಯಾತ ರೌಡಿಶೀಟರ್‍ಗಳಿಬ್ಬರು ತಮ್ಮನ್ನು ಬಂಧಿಸುವುದಕ್ಕಾಗಿ ದಾಳಿ ನಡೆಸಿದ್ದ ಪೊಲೀಸರ ಮೇಲೆಯೇ ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಇದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.

ವಿವೇಕನಗರ ಪೊಲೀಸರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಜಾರ್ಜ್ ಮತ್ತು ದೇವ್ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಆರೋಪಿಗಳಿಬ್ಬರು ಚಾಕುವಿನಿಂದ ನಡೆಸಿದ್ದ ದಾಳಿಯಲ್ಲಿ ಪೊಲೀಸರಾದ ಹಜ್ರೀಶ್ ಮತ್ತು ರಾಘವೇಂದ್ರ ಅವರಿಗೂ ಕೂಡ ಗಾಯಗಳಾಗಿವೆ. ನಾಲ್ವರೂ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಗಳಾದ ಜಾರ್ಜ್ ಮತ್ತು ದೇವಾ ಐದಾರು ದಿನಗಳ ಹಿಂದಷ್ಟೇ, ತಮ್ಮ ಗ್ಯಾಂಗ್ ಮೂಲಕ ವಿವೇಕನಗರ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಇವರ ಬಂಧನಕ್ಕಾಗಿ ನಗರ ಪೊಲೀಸ್ ಇಲಾಖೆ ಮೂರು ತಂಡ ರಚಿಸಿತ್ತು. ಸೋಮವಾರ ಅಶೋಕ ನಗರ ಇನ್ಸ್ ಪೆಕ್ಟರ್ ರಂಗಣ್ಣ ನೇತೃತ್ವದ ತಂಡಕ್ಕೆ ಆರೋಪಿಗಳ ಚಲನವಲನದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು.

ಮೊದಲಿಗೆ ಪೊಲೀಸರ ಮೇಲೆ ಹಲ್ಲೆ
ಆರೋಪಿಗಳು ಕಿಂಗ್ಸ್ ಕೋರ್ಟ್ ಒಳಗಡೆ ಓಮ್ನಿ ಕಾರಿನಲ್ಲಿದ್ದಾಗ ಮೊದಲು ಪೇದೆಗಳಾದ ಹಜ್ರೀಶ್, ರಾಘವೇಂದ್ರ ಅವರನ್ನು ಬಂ„ಸಲು ಮುಂದಾಗಿದ್ದಾರೆ. ತಕ್ಷಣವೇ ಆತಂಕಕ್ಕೊಳಗಾದ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಅಲ್ಲದೆ, ತಮ್ಮ ಬಳಿಯಿದ್ದ ಚಾಕು ಸೇರಿದಂತೆ ಮತ್ತಿತ್ತರ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಹಂತದಲ್ಲಿ ಹಜ್ರೀಶ್ ಎಡಗೈ, ರಾಘವೇಂದ್ರ ಅವರ ಹೊಟ್ಟೆ ಭಾಗಕ್ಕೆ ಆರೋಪಿಗಳು ಝಳಪಿಸಿದ್ದ ಚಾಕುತಾಗಿ, ರಕ್ತ ಹೊರ ಚಿಮ್ಮಿತು. ಇನ್ನೇನು ಆರೋಪಿಗಳ ಅಟ್ಟಹಾಸ ಕೈ ಮೇಲಾಗುವ ಪರಿಸ್ಥಿತಿ ಅರಿತುಕೊಂಡ ಇನ್ಸ್ ಪೆಕ್ಟರ್ ರಂಗಣ್ಣ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆಗ ಇಬ್ಬರೂ ಸಿಕ್ಕಿ ಬಿದ್ದಿದ್ದು, ಒಬ್ಬ ಪರಾರಿಯಾಗಿದ್ದಾನೆ. ಗಾಯಗೊಂಡಿರುವವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮೂವರು ರೌಡಿಗಳ ಸೆರೆ
ವಿವೇಕ್‍ನಗರ ಠಾಣೆಯ ಪೊಲೀಸರ ಮೇಲೆ ಹಲ್ಲೆ ನಡೆಸಿ ಇನ್ಸ್ ಪೆಕ್ಟರ್ ವಿಜಯ್ ಹಡಗಲಿ ಅವರ ಅಮಾನತಿಗೆ ಕಾರಣವಾಗಿದ್ದ ಮೂವರು ರೌಡಿಗಳನ್ನು ಬಂಧಿಸಲಾಗಿದೆ.

ಉಮೇಶ್, ಪ್ರಭು ಮತ್ತು ರಘುವರನ್ ಬಂಧಿತರು. ಗ್ಯಾಂಗ್ ಕಟ್ಟಿಕೊಂಡು ಕರ್ತವ್ಯನಿರತರಾಗಿದ್ದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದರು. ಇವರುಗಳನ್ನು ತಕ್ಷಣ ಬಂಧಿಸದೆ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಇನ್ಸ್ ಪೆಕ್ಟರ್ ವಿಜಯ್  ಹಡಗಲಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಮೂರು ದಿನಗಳ ಹಿಂದಷ್ಟೆ ಆದೇಶಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com