ಸ್ಟೀಲ್ ಸೇತುವೆ ಯೋಜನೆಗೆ ಶೀಘ್ರ ಚಾಲನೆ

ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಟೀಲ್ ಸೇತುವೆ ಯೋಜನೆಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಟೀಲ್ ಸೇತುವೆ ಯೋಜನೆಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಸ್ಟೀಲ್ ಸೇತುವೆ ನಿರ್ಮಿಸುವುದಾಗಿ ಬಿಬಿಎಂಪಿ ಆಡಳಿತ ಬಹಳ ಹಿಂದಿನಿಂದಲೂ ಹೇಳಿಕೊಂಡು ಬರುತ್ತಿತ್ತು. ಆದರೆ, ಹಣಕಾಸಿನ ತೊಂದರೆಯಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಸರ್ಕಾರ ಬಿಬಿಎಂಪಿಗೆ ನೀಡುತ್ತಿರುವ ಅನುದಾನ ಬಳಸಿಕೊಂಡು ಬಾಕಿ ಇರುವ ಅನೇಕ ಯೋಜನೆಗಳ ಜತೆ ಸ್ಟೀಲ್ ಸೇತುವೆಗಳ ನಿರ್ಮಾಣವನ್ನೂ ಆರಂಭಿಸಲಾಗುತ್ತಿದೆ ಎಂದು ಅವರು ಸೋಮವಾರ ಸುದ್ದಿಗಾರರಿಗೆ ಹೇಳಿದರು.

ನಗರದ ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗೂ 3 ಕಿಮೀ ಉದ್ದದ ಸ್ಟೀಲ್ ಸೇತುವೆಯನ್ನು ಸುಮಾರು ರು.139 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಅದೇ ರೀತಿ ಶಿವಾನಂದ ಸರ್ಕಲ್‍ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 700 ಮೀಟರ್ ಉದ್ದದ ಸ್ಟೀಲ್ ಸೇತುವೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ರು.57 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಇದಲ್ಲದೆ ಕೋರಮಂಗಲ ಈಜಿಪುರದಲ್ಲಿ ಕೇಂದ್ರಿಯ ವಿದ್ಯಾಲಯ ಬಳಿ 2.4 ಕಿಮೀ ಉದ್ದದ ಕಾಂಕ್ರೀಟ್ ಮೇಲು ಸೇತುವೆ ನಿರ್ಮಿಸಲಾಗುತ್ತಿದ್ದು, ಇದಕ್ಕೆಂದು ರು.214ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಎಲ್ಲಾ ಯೋಜನೆಗಳನ್ನು ಬಜೆಟ್‍ನಲ್ಲಿ ಅಳವಡಿಸಲಾಗುತ್ತಿದ್ದು, ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ವಿವರಿಸಿದರು.
 
ರು.2500 ಕೋಟಿ ಕಾಮಗಾರಿಗೆ ಚಾಲನೆ

ಬಿಬಿಎಂಪಿ ಮೂಲಕ ರಾಜ್ಯ ಸರ್ಕಾರ ವೆಚ್ಚ ಮಾಡಲು ನಿಗದಿಪಡಿಸಿರುವ ರು.2500 ಕೋಟಿಗಳಲ್ಲಿ ನಾನಾ ಕಾಮಗಾರಿ ಕೈಗೊಳ್ಳಲು ಸಿದಟಛಿತೆ ನಡೆಸಲಾಗಿದೆ. 2014-15ರ ಅವಧಿಯ ರು.1000 ಕೋಟಿ ಹಾಗೂ 2015-16ರ ಸಾಲಿನ ರು.1500 ಕೋಟಿಯನ್ನು ಸರ್ಕಾರ 13ನೇ ಹಣಕಾಸು ಆಯೋಗ, ನರ್ಮ್ ಹಾಗೂ ನಗರೋತ್ಥಾನ ಯೋಜನೆಗಳ ಮೂಲಕ ಬಿಬಿಎಂಪಿಗೆ ನೀಡುತ್ತಿದೆ. ಈ ಅನುದಾನದಲ್ಲಿ ಬಾಕಿ ಉಳಿದಿದ್ದ ಕಾಮಗಾರಿಗಳು ಹಾಗೂ ಹೊಸ ಕಾಮಗಾರಿಗಳನ್ನು ಸೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ರಾಮಲಿಂಗಾ ರೆಡ್ಡಿ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com