ಅಪಾರ್ಟ್ ಮೆಂಟ್ ತೆರವು ತಡೆಗೆ ಹೈಕೋರ್ಟ್ ಆದೇಶ

ಸಾರಕ್ಕಿ ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ನಂದಿನಿ ಲೇಕ್‍ವ್ಯೂ ಅಪಾರ್ಟ್‍ಮೆಂಟ್ ಅನ್ನು ತೆರವುಗೊಳಿಸಲು ಬೆಂಗಳೂರು ದಕ್ಷಿಣ ತಹಸೀಲ್ದಾರ್ ಮುಂದಾಗಬಾರದು ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ...
ಕರ್ನಾಟಕ ಹೈ ಕೋರ್ಟ್
ಕರ್ನಾಟಕ ಹೈ ಕೋರ್ಟ್

ಬೆಂಗಳೂರು: ಸಾರಕ್ಕಿ ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ನಂದಿನಿ ಲೇಕ್‍ವ್ಯೂ ಅಪಾರ್ಟ್‍ಮೆಂಟ್ ಅನ್ನು ತೆರವುಗೊಳಿಸಲು ಬೆಂಗಳೂರು ದಕ್ಷಿಣ ತಹಸೀಲ್ದಾರ್ ಮುಂದಾಗಬಾರದು ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ನಂದಿನಿ ಲೇಕ್ ವ್ಯೂ ಅಪಾರ್ಟ್‍ಮೆಂಟ್ ಸಾರಕ್ಕಿ ಕೆರೆ ಒತ್ತುವರಿ ಮಾಡಿರುವುದಾಗಿ ಆರೋಪಿಸಿ ತಹಸೀಲ್ದಾರ್ ನೋಟಿಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಅಪಾರ್ಟ್ ಮೆಂಟ್‍ನವರು ಈ ಹಿಂದೆ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ತಹಸೀಲ್ದಾರ್‍ಗೆ ಅರ್ಜಿದಾರರ ವಾದ ಆಲಿಸಿ ಸೂಕ್ತ ಆದೇಶ ಹೊರಡಿಸುವಂತೆ ಸೂಚಿಸಿತ್ತು. ಆದೇಶದಂತೆ ವಾರದೊಳಗೆ ಅಪಾರ್ಟ್‍ಮೆಂಟ್ ತೆರವುಗೊಳಿಸುವಂತೆ ತಹಸೀಲ್ದಾರ್ ಏ.27ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ತಹಸೀಲ್ದಾರ್ ಹೊರಡಿಸಿರುವ ಆದೇಶ ಜಾರಿಗೊಳಿಸುವ ಅಗತ್ಯವಿಲ್ಲವೆಂದು ಹೇಳಿ ಅರ್ಜಿ ಇತ್ಯರ್ಥಪಡಿಸಿದ ಸುಪ್ರೀಂಕೋರ್ಟ್, ತಕರಾರಿದ್ದರೆ ಹೈ ಕೋರ್ಟ್‍ನಲ್ಲಿ ಅರ್ಜಿ ದಾಖಲಿಸುವಂತೆ ಸೂಚಿಸಿತ್ತು. ಅದರಂತೆ ಹೈಕೋರ್ಟ್‍ನಲ್ಲಿ ಅಪಾರ್ಟ್‍ಮೆಂಟ್ ಮಾಲೀಕರು ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಆನಂದ ಭೈರಾರೆಡ್ಡಿ ಅವರಿದ್ದ ರಜಾ ಕಾಲದ ಏಕಸದಸ್ಯ ಪೀಠ, ಕಟ್ಟಡ ನೆಲಸಮಗೊಳಿಸಬಾರದೆಂದು ಮಧ್ಯಂತರ ಆದೇಶ ನೀಡಿದೆ.

ಅಸಮಾಧಾನ: ವಿಚಾರಣೆ ವೇಳೆ ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ, ಕಟ್ಟಡ ತೆರವುಗೊಳಿಸುವ ಕುರಿತಂತೆ ಸರ್ಕಾರ ಪಾಲಿಸುತ್ತಿರುವ ವಿಧಾನ ಹಾಗೂ ಅಧಿಕಾರದ ವ್ಯಾಪ್ತಿಯೇನು? ಈಗಿರುವ ಮಾರ್ಗಸೂಚಿಗಳೇನೆಂದು ಪ್ರಶ್ನೆ
ಗಳ ಸುರಿಮಳೆ ಹರಿಸಿತು. ಕಟ್ಟಡ ನೆಲಸಮಗೊಳಿಸುವಾಗ ಪ್ರತಿ ಒಂದು ಇಂಚು ಜಾಗದ ಬಗ್ಗೆಯೂ ಎಚ್ಚರವಹಿಸಬೇಕು. ಸುಖಾ ಸುಮ್ಮನೆ ಜೆಸಿಬಿ ಯಂತ್ರದೊಂದಿಗೆ ತೆರಳಿ ನೆಲಸಮಗೊಳಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತು. ಈ ಹಿಂದೆ ವಿಚಾರಣೆ ವೇಳೆ ಹಾಜರಾಗಿದ್ದ ಸರ್ಕಾರಿ ವಕೀಲರೊಬ್ಬರಿಗೆ ಕೆರೆಗಳ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದ್ದೆ. ಆದರೆ ಇಂದು ಆ ವಕೀಲರು ಕಣ್ಮರೆಯಾಗಿದ್ದಾರೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com