ರಾಯಚೂರಿನಲ್ಲೊಂದು ಮರ್ಯಾದ ಹತ್ಯೆ

ಬೇರೆ ಜಾತಿ ಯುವತಿಯನ್ನು ಪ್ರೀತಿಸಿ ಮದುವೆಯಾದ ಎಂಬ ಕಾರಣಕ್ಕೆ ಯುವಕನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಮರ್ಯಾದಾ ಹತ್ಯೆ (ಸಾಂದರ್ಭಿಕ ಚಿತ್ರ)
ಮರ್ಯಾದಾ ಹತ್ಯೆ (ಸಾಂದರ್ಭಿಕ ಚಿತ್ರ)
Updated on: 

ರಾಯಚೂರು: ಬೇರೆ ಜಾತಿ ಯುವತಿಯನ್ನು ಪ್ರೀತಿಸಿ ಮದುವೆಯಾದ ಎಂಬ ಕಾರಣಕ್ಕೆ ಯುವಕನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರಿನ ಹೊರವಲಯದಲ್ಲಿ ಆನಂದ ಸಾಗರ್‌ ಎಂಬ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈಯಲಾಗಿದೆ. 2014ರಲ್ಲಿ ಬಸವರಾಜೇಶ್ವರಿ ಎಂಬ ಹುಡುಗಿಯನ್ನ ಮದುವೆಯಾಗಿದ್ದ ಅನ್ನುವ ಕಾರಣಕ್ಕೆ ಈ ಎರಡೂ ಕುಟುಂಬಗಳ ನಡುವೆ ವೈಮನಸ್ಸುಂಟಾಗಿತ್ತು.

ಪರಸ್ಪರ ಪ್ರೀತಿಸಿದ್ದ ಜೋಡಿ ಆರ್ಯ ಸಮಾಜದಲ್ಲಿ ಸರಳ ವಿವಾಹವಾಗಿ, ಮದುವೆಯನ್ನು ರಿಜಿಸ್ಟ್ರಾರ್ ಮಾಡಿಸಿದ್ದರು. ಅಲ್ಲದೇ ದಂಪತಿ ಮದುವೆಯಾದ ನಂತರ ಬಳ್ಳಾರಿಯಲ್ಲಿ ನೆಲೆಸಿದ್ದರು. ಆದ್ರೆ ನಿನ್ನೆ ಗೆಳೆಯರು ಕರೆದಿದ್ದಾರೆ ಅನ್ನೋ ಕಾರಣಕ್ಕೆ ಊರಿಗೆ ಬಂದ ಆನಂದ ಸಾಗರ್‌ ನನ್ನ ಬರ್ಬರವಾಗಿ ಹತ್ಯೆಗೈಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com