ರಾಜ್ಯಕ್ಕೆ ಬರಲಿದೆ 4 ಸಂಚಾರಿ ತಾರಾಲಯ!

ರಾಜ್ಯ ಸರ್ಕಾರ ಸಂಚಾರಿ ತಾರಾಳಯಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ....
ತಾರಾಲಯ(ಸಂಗ್ರಹ ಚಿತ್ರ)
ತಾರಾಲಯ(ಸಂಗ್ರಹ ಚಿತ್ರ)
Updated on

ಬೆಂಗಳೂರು : ಬಾಹ್ಯಾಕಾಶ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳು ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯಕ್ಕೆ ಬರುವುದು ಶೀಘ್ರವೇ ತಪ್ಪಲಿದೆ. 

ಹೌದು ರಾಜ್ಯ ಸರ್ಕಾರ ಸಂಚಾರಿ ತಾರಾಳಯಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದು ಇನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಅಧ್ಯಯನ ಪ್ರವಾಸ ಕೈಗೊಳ್ಳುವ ಅವಶ್ಯಕತೆ ಇರುವುದಿಲ್ಲ.  ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರ್ಗಿಯಗಳಲ್ಲಿ ಸಂಚಾರಿ ತಾರಾಲಯಗಳು ಪ್ರಾರಂಭವಾಗಲಿವೆ.

ಪ್ರತಿ ಸಂಚಾರಿ ತಾರಾಲಯಗಳಿಗೂ ಅಂದಾಜು  ಒಂದು ಕೋಟಿಯೂಪಾಯಿ ವೆಚ್ಚವಾಗಲಿದ್ದು ಮಡಚಬಹುದಾದ ಬಲೂನ್ ರೂಪದಲ್ಲಿರಲಿದೆ, ಟ್ರಕ್ ಮಾದರಿಯ ವಾಹನದಲ್ಲಿ ಸಂಚಾರಿ ತಾರಾಯಲಯವನ್ನು ಪ್ರತಿ ಪ್ರದೇಶಕ್ಕೂ ಕೊಂಡೊಯ್ಯಲಾಗುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಡಾ.ಹೊನ್ನೇಗೌಡ ತಿಳಿಸಿದ್ದಾರೆ.  ಪ್ರತಿ ಸಂಚಾರಿ ತಾರಾಲಯದಲ್ಲೂ 40 ವಿದ್ಯಾರ್ಥಿಗಳಿಗಳು ಕುಳಿತುಕೊಳ್ಳಬಹುದಾಗಿದ್ದು ಆಧುನಿಕ  ಪೋರ್ಟಬಲ್  ಪ್ರೊಜೆಕ್ಟರ್ ನ್ನು  ಹೊಂದಿರಲಿದೆ ಎಂದು ಡಾ. ಹೊನ್ನೇಗೌಡ ಮಾಹಿತಿ ನೀಡಿದ್ದಾರೆ.  

ರಾಜ್ಯಾದ್ಯಂತ ಇರುವ ವಿದ್ಯಾರ್ಥಿಗಳು ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಹೆಚ್ಚಿನದ್ದನ್ನು ತಿಳಿದುಕೊಳ್ಳಲು, ಪ್ರಸ್ತುತ  ಬೆಂಗಳೂರಿಗೆ ಅಧ್ಯಯನ ಪ್ರವಾಸ ಕೈಗೊಳ್ಳಬೇಕಿದೆ. ದೂರದ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಹಾಗೂ ಗ್ರಾಮೀಣ ಭಾಗದಲ್ಲಿ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಬೋಧಿಸಲು ಸಂಚಾರಿ ತಾರಾಲಯ ಉಪಯುಕ್ತವಾಗಲಿದೆ ಎಂಬುದು ಡಾ.ಹೊನ್ನೇಗೌಡ ಅವರ ಅಭಿಪ್ರಾಯ.   

ಈ ಯೋಜನೆಗಾಗಿ ರಾಜ್ಯ ಸರ್ಕಾರ 5 ಕೋಟಿರೂಪಾಯಿಗಳನ್ನು ಮೀಸಲಿಟ್ಟಿದ್ದು, ಬಾಗಲ ಕೋಟೆಯಲ್ಲಿ ಮಿನಿ ತಾರಾಲಯವನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ  ಸುಸಜ್ಜಿತವಾದ ತಾರಾಲಯವಿದ್ದರೂ ಬೆಂಗಳೂರು  ಗ್ರಾಮಾಂತರ ಭಾಗದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಭಾಗಗಳಿಗೆ ಸಹಕಾರಿಯಾಗಲು ಬೆಂಗಳೂರಿಗೂ ಸಂಚಾರಿ ತಾರಾಲಯವನ್ನು ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com