ನಾಯಕತ್ವ ಕೊರತೆಯಿಂದ ನನಸಾಗದ ಕನಸುಗಳು: ಪ್ರೊ.ಚಂದ್ರಶೇಖರ ಪಾಟೀಲ

ಸ್ವಾತಂತ್ರ್ಯಪೂರ್ವದಲ್ಲಿ ದೇಶದ ಅಭಿವೃದ್ಧಿ ಕುರಿತು ಕಂಡಿದ್ದ ಕನಸುಗಳು ನಾಯಕತ್ವದ ಕೊರತೆಯಿಂದಾಗಿ ನನಸಾಗಿಲ್ಲ ಎಂದು ಪ್ರೊ.ಚಂದ್ರಶೇಖರ ಪಾಟೀಲ ಬೇಸರ ವ್ಯಕ್ತಪಡಿಸಿದರು...
ಉದಯಭಾನು ಕಲಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಬೆಂಗಳೂರು ರತ್ನ ಕನ್ನಡ ಮಾಸ ಪತ್ರಿಕೆಯ 11ನೇ ವಾರ್ಷಿಕೋತ್ಸವ ಹಾಗೂ ಬೆಂಗಳೂರು ರತ್ನ 2015 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್
ಉದಯಭಾನು ಕಲಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಬೆಂಗಳೂರು ರತ್ನ ಕನ್ನಡ ಮಾಸ ಪತ್ರಿಕೆಯ 11ನೇ ವಾರ್ಷಿಕೋತ್ಸವ ಹಾಗೂ ಬೆಂಗಳೂರು ರತ್ನ 2015 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್
Updated on

ಬೆಂಗಳೂರು: ಸ್ವಾತಂತ್ರ್ಯಪೂರ್ವದಲ್ಲಿ ದೇಶದ ಅಭಿವೃದ್ಧಿ ಕುರಿತು ಕಂಡಿದ್ದ ಕನಸುಗಳು ನಾಯಕತ್ವದ ಕೊರತೆಯಿಂದಾಗಿ ನನಸಾಗಿಲ್ಲ ಎಂದು ಪ್ರೊ.ಚಂದ್ರಶೇಖರ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಉದಯಭಾನು ಸಾಂಸ್ಕೃತಿಕ ಕಲಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ `ಬೆಂಗಳೂರು ರತ್ನ - 2015' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು  ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ ಅಭಿವೃದ್ಧಿ ಕುರಿತು ಸಾಕಷ್ಟು ನಿರೀಕ್ಷೆ, ಕನಸುಗಳಿದ್ದವು. ಆದರೆ, ನಾಯಕತ್ವದ  ಕೊರತೆಯಿಂದಾಗಿ ಅವು ಕನಸಾಗಿಯೇ ಉಳಿದುಬಿಟ್ಟಿವೆ. ಜನ ಇನ್ನಾದರೂ ತಮ್ಮನ್ನಾಳುವ ನಾಯಕರ ಆಯ್ಕೆಯಲ್ಲಿ ಜಾಗ್ರತೆ ವಹಿಸಬೇಕು. ಆ  ಹೊಣೆಗಾರಿಕೆ ಅವರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಅರಿವಿನ ಮೂಲಕ ಕ್ರಾಂತಿಯಾಗಬೇಕು ಎಂದ ಅವರು, ಸಾಹಿತಿಗಳು ಮತ್ತು ಪತ್ರಕರ್ತರು ಸಮಾಜದ ಎಲ್ಲಾ ವಿಚಾರಗಳ ಬಗ್ಗೆ ಜಾಗೃತಿ  ಮೂಡಿಸಬೇಕು. ನ್ಯಾಯಾಂಗ, ಕಾರ್ಯಾಂಗಗಳು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವುದರಿಂದ ಅವು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ  ಸಮಾಜ, ದೇಶ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ, ಸರ್ಕಾರ, ನಾಯಕರು ತಪ್ಪು ಮಾಡಿದಾಗ ಅದನ್ನು ಎತ್ತಿಹಿಡಿದು ಅವರನ್ನು ಸರಿದಾರಿಗೆ ತರುವ  ಕೆಲಸ ಮಾಡಬೇಕು ಎಂದರು.

ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, `ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕನ್ನಡಿಗರೇ  ಪರಕೀಯರಂತಾಗಿದ್ದಾರೆ. ಕನ್ನಡದ ಬಗ್ಗೆ ಯೋಚಿಸುವಂಥ ಸ್ಥಿತಿ ಬಂದೊದಗಿದ್ದು, ನಗರದಲ್ಲಿ ಕನ್ನಡ ಮಾತನಾಡುವವರ ಪ್ರಮಾಣ ಶೇ.50ರಷ್ಟು  ಸಹ ಇಲ್ಲವಾಗಿದೆ. ಇತರ ಭಾಷಿಕರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಾಗ ಮಾತ್ರ ಕನ್ನಡದ ಉಳಿವು, ಬೆಳವಣಿಗೆ ಸಾಧ್ಯ ಎಂದು  ಅಭಿಪ್ರಾಯಪಟ್ಟರು. ಅಲ್ಲದೇ, ಸಮಾಜದಲ್ಲಿ ದೊಡ್ಡ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಕೆಲಸಗಳಾಗುತ್ತವೆ. ಆದರೆ, ಸಣ್ಣ  ಸಾಧನೆಗಳನ್ನು ಸಹ ಗುರುತಿಸಿ ಪ್ರೋತ್ಸಾಹಿಸಿದಾಗ ಸಮಾಜಕ್ಕೆ ಮತ್ತಷ್ಟು ಸೇವೆ ಸಿಗುತ್ತದೆ. ಇಂತಹ ಕಾರ್ಯವನ್ನು ಸಂಸ್ಥೆ ಮಾಡಿರುವುದು  ಶ್ಲಾಘನೀಯ' ಎಂದರು.

ಸಮಾರಂಭದಲ್ಲಿ ನಾನಾ ಕ್ಷೇತ್ರದ 11 ಮಂದಿ ಗಣ್ಯರಿಗೆ `ರಾಜ್ಯ ಪ್ರಜಾ ರತ್ನ' ಪ್ರಶಸ್ತಿ ಹಾಗೂ 30 ಮಂದಿಗೆ `ಬೆಂಗಳೂರು ಪ್ರಜಾ ರತ್ನ' ಪ್ರಶಸ್ತಿ  ನೀಡಿ ಗೌರವಿಸಲಾಯಿತು. ಕಸಾಪ ಮಾಜಿ ಅಧ್ಯಕ್ಷ ಡಾ. ಆರ್.ಕೆ.ನಲ್ಲೂರುಪ್ರಸಾದ್, ಪಾಲಿಕೆ ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಲಲಿತಾ  ಶ್ರೀನಿವಾಸಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com