ಲಾಲ್ ಬಾಗ್ ನಲ್ಲಿ ಮೇ 29ರಿಂದ ಮಾವು, ಹಲಸು ಮೇಳ

ನೈಸರ್ಗಿಕವಾಗಿ ಮಾಗಿದ ಮಾವು ಹಣ್ಣಿನ ತಡಕಾಟದಲ್ಲಿರುವ ಗ್ರಾಹಕರಿಗೆ ಸಂತಸದ ಸುದ್ದಿ. ಇದೇ ಮೇ 29 ರಿಂದ ಜೂನ್ 27ರವರೆಗೆ ಲಾಲ್ ಬಾಗ್...
ಸಂಗ್ರಹ ಮೇಳ
ಸಂಗ್ರಹ ಮೇಳ

ಬೆಂಗಳೂರು: ನೈಸರ್ಗಿಕವಾಗಿ ಮಾಗಿದ ಮಾವು ಹಣ್ಣಿನ ತಡಕಾಟದಲ್ಲಿರುವ ಗ್ರಾಹಕರಿಗೆ ಸಂತಸದ ಸುದ್ದಿ. ಇದೇ ಮೇ 29 ರಿಂದ ಜೂನ್ 27ರವರೆಗೆ ಲಾಲ್ ಬಾಗ್ ನಲ್ಲಿ ಮಾವು ಮತ್ತು ಹಲಸು ಮೇಳ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷೆ ಎಂ.ಕಮಲಾಕ್ಷಿ ರಾಜಣ್ಣ, ರೈತರಿಂದ ನೇರವಾಗಿ ಗ್ರಾಹಕರಿಗೆ ವೈವಿಧ್ಯ ತಳಿಯ ಮಾವಿನ ಹಣ್ಣುಗಳನ್ನು ತಲುಪಿಸುವ ಉದ್ದೇಶ­ದಿಂದ ಪ್ರತಿವರ್ಷದಂತೆ ಈ ವರ್ಷವೂ ಮಾವು ಮತ್ತು ಹಲಸು ಮೇಳ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಜಂಟಿಯಾಗಿ ಮೇಳ ಆಯೋಜಿಸುತ್ತಿದೆ. ಶ್ರೀನಿವಾಸಪುರ, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸುಮಾರು 100ಕ್ಕೂ ಹೆಚ್ಚು ಮಾವು ಬೆಳೆಗಾರರು ಮೇಳದಲ್ಲಿ ಭಾಗವಹಿಸದ್ದು, ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 7 ಗಂಟೆಯವರೆಗೆ ಮಾವು ಮತ್ತು ಹಲಸಿನ ಹಣ್ಣಿನ ಮಾರಾಟವಾಗುವುದು ಎಂದ ಅವರು 100 ಮಳಿಗೆ ತೆರೆಯಲಾಗಿದ್ದು, ಸುಮಾರು 105 ರೈತರು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ. ಮೇಳದಲ್ಲಿ ವಿವಿಧ ತಳಿಗಳ ಪ್ರತಿದಿನದ ಮಾರಾಟ ಬೆಲೆಯನ್ನು ನಿಗಧಿಪಡಿಸಲು ಸಮತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಎಂದು ಹೇಳಿದರು.

ಮಾವು ಮೇಳದ ವಿಶೇಷತೆ
ಮೇಳದಲ್ಲಿ ಕಾರ್ಬೈಡ್ ಮೂಲಕ ಮಾಗಿಸಿದ ಹಣ್ಣುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ರಾಸಾಯನಿಕ ಮುಕ್ತ ಹಾಗೂ ನೈಸರ್ಗಿಕವಾಗಿ ಮಾಗಿದ ಹಣ್ಣುಗಳ ಮಾರಾಟ ಮಾಡಲಾಗುತ್ತದೆ. ಅಲ್ಲದೇ, ಸಹಜವಾಗಿ ಮಾಗಿದ ಅಥವಾ ಇಥಲೀನ್ ಮೂಲಕ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಮಾವಿನ ಹಣ್ಣುಗಳನ್ನು ಆಕರ್ಷಕ ರಟ್ಟಿನ ಡಬ್ಬಗಳಲ್ಲಿ ಹಾಗೂ ಜೈವಿಕ ವಿಘಟನೆ ಚೀಲಗಳಲ್ಲಿ ಮಾತ್ರ ಮಾರಾಟ ಮಾಡಲಾಗುವುದು.
ರಾಜ್ಯದಲ್ಲಿ ಮಾವು ಮೇಳದಲ್ಲಿ ಪ್ರದರ್ಶನದಲ್ಲಿ 20 ಕ್ಕಿಂತ ಹೆಚ್ಚು ವೈವಿಧ್ಯ ತಳಿಯ ಮಾವಿನ ಹಣ್ಣುಗಳು ಮಾರಾ­ಟಕ್ಕೆ ಲಭ್ಯವಾಗಲಿವೆ. ಅಲ್ಪಾನೋ, ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೆಂದೂರಾ, ಮಲಗೋವಾ, ತೋತಾಪುರಿ, ನೀಲಂ, ಆರ್ಮಪಾಲ, ಕೇಸರಿ ಸೇರಿದಂತೆ ಇತರೆ ತಳಿಗಳ ಮಾವು ಮಾರಾಟವಾಗಲಿದೆ. ಹಾಗೇ, ಮಾವು ಮತ್ತು ಹಲಸಿನ ಹಣ್ಣುಗಳ ಸಂಸ್ಕರಿಸಿದ ವಿವಿಧ ಪದಾರ್ಥಗಳನ್ನು ಸಹ ಈ ಮೇಳದಲ್ಲಿ ಗ್ರಾಹಕರಿಗೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟಾರೆ 3.50 ಲಕ್ಷ ಉತ್ಪಾದನೆಯಾಗಿದೆ. ಕಳೆದ ವರ್ಷ ಮೇಳದಲ್ಲಿ 800 ಟನ್ ಮಾರಾಟ ಮಾಡಿದ್ದರು.

ಏರು ಹಂಗಾಮಿನಲ್ಲಿ ಕನಿಷ್ಠ 10 ಲಕ್ಷ ಟನ್ ಉತ್ಪಾದನೆಯಾಗುತ್ತೆ. ಇಳಿ ಹಂಗಾಮಿನಲ್ಲಿ ಸುಮಾರು 3 ರಿಂದ 4 ಲಕ್ಷ ಟನ್ ಉತ್ಪಾದನೆಯಾಗುತ್ತೆ. ವಿಪರ್ಯಾಸವೆಂದರೆ ಏರು ಹಂಗಾಮ ಆದರೂನು ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾಗಿದ್ದು 3.50 ಲಕ್ಷ ಟನ್ ಉತ್ಪಾದನೆಯಾಗಿದೆ.


ಹಲಸು ಮೇಳ
ಮಾವು ಮೇಳದ ಜೊತೆಗೆ ಹಲಸು ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ತಳಿಗಳ ಆವಿಷ್ಕಾರವಾಗಿದ್ದು, ಹಲಸು ಬೆಲೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಶ್ಯಾಮಲಾ ತಿಳಿಸಿದ್ದಾರೆ.
ಮೇಳದಲ್ಲಿ ಸ್ವರ್ಣ, ಲಾಲ್ ಬಾಗ್- ಮಧರಾ, ಭೈರಚಂದ್ರ, ತೂಬುಗೆರೆ, ಜಾಣಗೆರೆ ಇತ್ಯಾದಿ ಹಲಸುಗಳು ಲಭ್ಯವಾಗಲಿದೆ. ಬಿಡಿಸಿದ ಹಲಸಿನ ಹಣ್ಣಿನ ತೊಳೆಗಳನ್ನು ಕೂಡ ಮಾರಾಟ ಮಾಡಲಾಗುವುದು. 12 ತೊಳೆಗಳಿಗೆ ಸುಮಾರು ರು.20 ರಿಂದ ಮೂವತ್ತು ಬೆಲೆ ನಿಗದಿ ಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

- ಮೈನಾಶ್ರೀ. ಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com