ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

171 ನಾಣ್ಯಗಳನ್ನು ನುಂಗಿ ಬದುಕುಳಿದ ಭೂಪ!

ಹೊಟ್ಟೆಯನ್ನು ನಾಣ್ಯಹಾಕುವ ಹುಂಡಿ ಮಾಡಿಕೊಂಡಿದ್ದ ಮಾನಸಿಕ ಅಸ್ವಸ್ಥನೊಬ್ಬ ಬರೋಬ್ಬರಿ 170ಕ್ಕೂ ಹೆಚ್ಚು ನಾಣ್ಯ ನುಂಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ...

ಬಳ್ಳಾರಿ: ಹೊಟ್ಟೆಯನ್ನು ನಾಣ್ಯಹಾಕುವ ಹುಂಡಿ ಮಾಡಿಕೊಂಡಿದ್ದ ಮಾನಸಿಕ ಅಸ್ವಸ್ಥನೊಬ್ಬ ಬರೋಬ್ಬರಿ 170ಕ್ಕೂ ಹೆಚ್ಚು ನಾಣ್ಯ ನುಂಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.

ಬಸಪ್ಪ (50) (ಹೆಸರು ಬದಲಿಸಲಾಗಿದೆ) ರಾಯಚೂರಿನ ನಿವಾಸಿಯಾಗಿದ್ದು, ಹಲವು ತಿಂಗಳಿಂದ ಕಾರಣವಿಲ್ಲದೆಯೇ ಕೈಗೆ ಸಿಕ್ಕ ರು.1, 2 ಹಾಗೂ 5ಗಳ ನಾಣ್ಯಗಳನ್ನು ನುಂಗಿದ್ದಾನೆ. ಇದರ ಪರಿಣಾಮ ಕೆಲವು ದಿನಗಳ ಹಿಂದೆ ಆಹಾರ ಸೇವಿಸಲಾಗದೆ, ವಾಂತಿಯಾಗಿದೆ. ನಂತರ ಮೂತ್ರ ವಿಸರ್ಜಸಲು ಸಾಧ್ಯವಾಗದೆ ತೀವ್ರರೀತಿಯಲ್ಲಿ ಅಸ್ವಸ್ಥನಾಗಿದ್ದಾನೆ.

ಬಸಪ್ಪ ಅವರ ಈ ಸ್ಥಿತಿಯನ್ನು ಕಂಡ ಕುಟುಂಬಸ್ಥರು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸಪ್ಪ ಅವರಿಗೆ ಚಿಕಿತ್ಸೆ ನೀಡಲು ಮುಂದಾಗ ವೈದ್ಯರು ಎಕ್ಸ್ ರೇ ಮಾಡಿಸುವಂತೆ ಹೇಳಿದ್ದಾರೆ. ವೈದ್ಯರ ಸಲಹೆಯಂತೆ ಕುಟುಂಬಸ್ಥರು ಬಸಪ್ಪ ಅವರಿಗೆ ಎಕ್ಸ್ ರೇ ಮಾಡಿಸಿದ್ದಾರೆ. ಎಕ್ಸ್ ರೇ ವರದಿಯಲ್ಲಿ ರೋಗಿಯ ಹೊಟ್ಟೆಯಲ್ಲಿ ಬರೋಬ್ಬರಿ 170 ಕ್ಕೂ ಹೆಚ್ಚು ನಾಣ್ಯಗಳಿರುವುದು ಕಂಡುಬಂದಿದೆ. ಇದನ್ನು ಕಂಡ ವೈದ್ಯರು ಆಶ್ಚರ್ಯ ವ್ಯಕ್ತಪಡಿಸಿ, ರೋಗಿಯನ್ನು ಕಾರಣ ಕೇಳಿದ್ದಾರೆ. ಆದರೆ ರೋಗಿ ಇದಾವುದಕ್ಕೂ ಉತ್ತರಿಸಿಲ್ಲ.

ಬಸಪ್ಪ ಅವರಿಗೆ ಇದೀಗ ವೈದ್ಯರು ಶಸ್ತ್ರಸ್ತ್ರ ಚಿಕಿತ್ಸೆ ಮಾಡಿದ್ದು, ಹೊಟ್ಟೆಯಲ್ಲಿದ್ದ ನಾಣ್ಯಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಬಸಪ್ಪ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ನಾಣ್ಯಗಳ ನುಂಗುವಿಕೆಗೆ ಕಾರಣ ಕೇಳಿದಾಗ ರೋಗಿಯು ಯಾವುದೇ ಕಾರಣಗಳನ್ನು ನೀಡಲಿಲ್ಲ. ಶಸ್ತ್ರಚಿಕಿತ್ಸೆ ವೇಳೆ ರೋಗಿಯ ಹೊಟ್ಟೆಯಲ್ಲಿ 1, 2 ಹಾಗೂ 5 ರುಪಾಯಿಗಳು ಹಾಗೂ ಅಯ್ಯಪ್ಪ ದೇವರ ಡಾಲರ್ ದೊರಕಿತ್ತು. ಇದೀಗ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ರೋಗಿಯನ್ನು ಅವಲೋಕನದಲ್ಲಿರಿಸಲಾಗಿದ್ದು, ಮನೋವೈದ್ಯರನ್ನು ಭೇಟಿ ಮಾಡುವಂತೆ ತಿಳಿಸಲಾಗಿದೆ ಎಂದು ಡಾ.ಧರ್ಮರೆಡ್ಡಿ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com