ಇಂದು ಸಿಇಟಿ ಫಲಿತಾಂಶ

ವೃತ್ತಿ ಶಿಕ್ಷಣ ಸೀಟುಗಳ ಆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಸೋಮವಾರ ಮಧ್ಯಾಹ್ನ...
ಸಿಇಟಿ ಫಲಿತಾಂಶ
ಸಿಇಟಿ ಫಲಿತಾಂಶ

ಬೆಂಗಳೂರು: ವೃತ್ತಿ ಶಿಕ್ಷಣ ಸೀಟುಗಳ ಆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಸೋಮವಾರ ಮಧ್ಯಾಹ್ನ 12.30ಕ್ಕೆ
ಪ್ರಕಟಗೊಳ್ಳಲಿದೆ. http://kea.kar.nic.in, http://cet.kar.nic.in ಮತ್ತು http://karresults.nic.in ಈವೆಬ್‍ಸೈಟ್‍ಗಳಲ್ಲಿ ಮಾತ್ರ ಫಲಿತಾಂಶ ದೊರೆಯುತ್ತದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ದ್ವಿತೀಯ ಪಿಯು ಫಲಿತಾಂಶ ಪ್ರಕಟಣೆಯಲ್ಲಾದ ಗೊಂದಲದಿಂದಾಗಿ ಅನೇಕ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾರೆ. ಇಂಥ ಸಂದರ್ಭದಲ್ಲಿ ರ್ಯಾಂಕ್ ಪ್ರಕಟಗೊಳ್ಳದೇ ಇದ್ದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಖಾಸಗಿ ಸಂಸ್ಥೆಗಳ ವೆಬ್‍ಸೈಟ್‍ಗಳಲ್ಲಿ ಫಲಿತಾಂಶ ಪ್ರಕಟಣೆಗೆ ಅನುವು  ಮಾಡಿ
ಕೊಟ್ಟಿಲ್ಲ. ಸಿಇಟಿ ಜೂ.1ರಂದು ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳಿಗೆ ರ್ಯಾಂಕ್ ಸಿಗಲಿಲ್ಲವಾದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕೆಇಎ ತಿಳಿಸಿದೆ. ಅರ್ಹತಾ ಪರೀಕ್ಷೆಯ ಅಂಕಪಟ್ಟಿಯನ್ನು ಸಲ್ಲಿಸದಿರುವುದು ,ಓಎಂಆರ್ ಉತ್ತರ ಪತ್ರಿಕೆಯಲ್ಲಿ
ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಅನ್ನು ನಮೂದಿಸದಿರುವುದು ಅಥವಾ ಅರ್ಹತಾ ಪರೀಕ್ಷೆಯ ಮರು ಮೌಲ್ಯಮಾಪನದಿಂದ ಬದಲಾಗಬಹುದಾದ ಅಂಕಗಳ ಕಾರಣದಿಂದಾಗಿ ಅಭ್ಯರ್ಥಿಗಳಿಗೆ ರ್ಯಾಂಕ್ ನೀಡದಿರಬಹುದು. ಆದರೆ, ಇಂಥ ಕಾರಣಗಳಿಗೆ ಹೊಸದಾಗಿ
ರ್ಯಾಂಕ್ ನೀಡಲಾಗುತ್ತದೆ ಎಂದು ಕೆಇಎ ಸ್ಪಷ್ಟಪಡಿಸಿದೆ. ಹೊಸದಾಗಿ ರ್ಯಾಂಕ್ ನೀಡಬೇಕಾಗಿದ್ದಲ್ಲಿ ಈ ಮೊದಲೇ ನೀಡಿರುವ ರ್ಯಾಂಕನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡದೇ ಹೊಸದಾಗಿ ರ್ಯಾಂಕ್ ನೀಡುವ ಕಂಪ್ಯೂಟರ್ ತಂತ್ರಜ್ಞಾನವನ್ನು
ಪ್ರಾಧಿಕಾರ ಅಳವಡಿಸಿಕೊಂಡಿದೆ. ಆದ್ದರಿಂದ ಯಾವುದೇ ಅಭ್ಯರ್ಥಿಯು ಅಥವಾ ಪೋಷಕರು ರ್ಯಾಂಕ್ ಬಂದಿಲ್ಲವೆಂಬ ಕಾರಣಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಅಗತ್ಯ ಮಾಹಿತಿಗಳನ್ನು
ನಿಗದಿತ ದಿನಾಂಕದೊಳಗೆ ಪ್ರಾಧಿಕಾರಕ್ಕೆ ಒದಗಿಸಿದಲ್ಲಿ ಅಂತಹ ಅಭ್ಯರ್ಥಿಗಳಿಗೆ ಅರ್ಹತೆಯನ್ನು ಪರಿಶೀಲಿಸಿ ಸ್ಪಾಟ್ ರ್ಯಾಂಕ್ ನೀಡಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ. ಹಾಗೆಯೇ ಸೀಟು ಹಂಚಿಕೆ ಪ್ರಕ್ರಿಯೆಯ ವೇಳಾಪಟ್ಟಿ ಪರಿಷ್ಕರಣೆಗೊಂಡಿದ್ದು, ಮೊದಲ ಸುತ್ತಿನ ವೇಳಾಪಟ್ಟಿ ಬದಲಾಗಿದೆ. ಜೂ.5ರಿಂದ 20ರವರೆಗೆ ದಾಖಲಾತಿಗಳ ಪರಿಶೀಲನೆ ಕಾರ್ಯ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com