ಗ್ರಾಪಂ ಚುನಾವಣೆಗೆ ಗ್ರಾಮಾಂತರ ಜಿಲ್ಲೆ ಸಜ್ಜು

ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೆ ಬರುವ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲೂಕುಗಳಲ್ಲಿ ಜೂನ್ 2 ರಂದು ಒಟ್ಟು 96 ಗ್ರಾಪಂಗಳ 1758 ಸ್ಥಾನಗಳಿಗೆ 2ನೇ ಹಂತದ ಚುನಾವಣೆ ನೆಡೆಯಲಿದೆ...
ಗ್ರಾಪಂ ಚುನಾವಣೆಗೆ ಗ್ರಾಮಾಂತರ ಜಿಲ್ಲೆ ಸಜ್ಜು (ಸಾಂದರ್ಭಿಕ ಚಿತ್ರ)
ಗ್ರಾಪಂ ಚುನಾವಣೆಗೆ ಗ್ರಾಮಾಂತರ ಜಿಲ್ಲೆ ಸಜ್ಜು (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೆ ಬರುವ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ತಾಲೂಕುಗಳಲ್ಲಿ  ಜೂನ್ 2 ರಂದು ಒಟ್ಟು 96 ಗ್ರಾಪಂಗಳ 1758 ಸ್ಥಾನಗಳಿಗೆ 2ನೇ ಹಂತದ ಚುನಾವಣೆ ನೆಡೆಯಲಿದೆ.

ಈ ಪೈಕಿ 432 ಸ್ಥಾನಗಳು ಪರಿಶಿಷ್ಟ ಜಾತಿಗೆ, 135 ಸ್ಥಾನಗಳು ಪರಿಶಿಷ್ಟ ಪಂಗಡಕ್ಕೆ, ಬಿಸಿಎಗೆ 231 ಸ್ಥಾನಗಳು, ಬಿಸಿಬಿಗೆ 56 ಸ್ಥಾನಗಳು, ಸಾಮಾನ್ಯ 904, ಮಹಿಳಾ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ 238 ಸ್ಥಾನ, ಪರಿಶಿಷ್ಟ ಪಂಗಡ 105, ಬಿಸಿಎ 145, ಬಿಸಿಬಿಗೆ 19 ಸ್ಥಾನ, ಸಾಮಾನ್ಯ 397 ಸ್ಥಾನಗಳನ್ನು  ಮೀಸಲಿರಿಸಲಾಗಿದೆ. ಹೊಸಕೋಟೆ ತಾಲೂಕಿನಲ್ಲಿ 228, ದೇವನಹಳ್ಳಿ ತಾಲೂಕಿನಲ್ಲಿ 160, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 243, ನೆಲಮಂಗಲ ತಾಲ್ಲೂಕಿನಲ್ಲಿ 222 ಮತದಾನ ಕೇಂದ್ರಗಳಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 853 ಮತದಾನ ಕೇಂದ್ರಗಳಿವೆ. 520612 ಮತದಾರರು ಮತದಾನ ಮಾಡಲಿದ್ದಾರೆ.

853 ಮತಗಟ್ಟೆಗಳ ಪೈಕಿ ಅತಿಸೂಕ್ಷ್ಮ 231, ಸೂಕ್ಷ 339, ಸಾಮಾನ್ಯ 283 ಹಾಗೂ 81 ಸಂಚಾರಿ ಮತಗಟ್ಟೆಗಳನ್ನು ಮತದಾನ ಮಾಡಲು ಸ್ಥಾಪಿಸಲಾಗಿದೆ. ಸಿಬ್ಬಂದಿ ವ್ಯವಸ್ಥೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆಯಲ್ಲಿ 3752 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.  263 ವಾಹನಗಳನ್ನು ಚುನಾವಣೆ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಕಂಟ್ರೋಲ್ ರೂಂ: ಜಿಲ್ಲಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ  ಜಿಲ್ಲೆ-ದೂರವಾಣಿ ಸಂಖ್ಯೆ: 22867007, 22860851, ಹೊಸಕೋಟೆ ತಾಲೂಕು- 27931237, ದೇವನಹಳ್ಳಿ ತಾಲೂಕು- 27682232, ದೊಡ್ಡಬಳ್ಳಾಪುರ ತಾಲೂಕು 27622033, ನೆಲಮಂಗಲ ತಾಲೂಕು ದೂರವಾಣಿ ಸಂಖ್ಯೆ: 27722085 ಕರೆ ಮಾಡಬಹುದು.

ಚುನಾವಣಾ ವೀಕ್ಷಕರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚುನಾವಣಾ ವೀಕ್ಷಕರು: ಆರ್. ಶ್ರೀಧರ್, ರಿಜಿಸ್ಟರ್ ಆಫ್ ಕೋ ಅಪರೇಟಿವ್  ಸೊಸೈಟಿಸ್, ಮತ್ತು ಸೊಸೈಟಿ, ಕರ್ನಾಟಕ ಸ್ಟೇಟ್ ವೇರ್‍ಹೌಸಿಂಗ್ ಕಾರ್ಪೊರೇಷನ್, ಬೆಂಗಳೂರು, ಮೊಬೈಲ್ ಸಂಖ್ಯೆ: 9900748998/9980366360. ಇ-ಮೇಲ್- md@karnatakawarehousing.in ಸಮನ್ವಯ ಅಧಿಕಾರಿ: ಮಹೇಶ್ವರಪ್ಪ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಅಭಿವೃದ್ಧಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೊಬೈಲ್ ಸಂಖ್ಯೆ:9448102017. ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಲ್ಮಾ ಕೆ. ಫಹೀಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com