ಗೋಮಾಂಸ ಭಕ್ಷಣೆ: ಸಿಎಂ ಹೇಳಿಕೆಗೆ ಆಕ್ಷೇಪ

ಆಹಾರ ಅವರವರ ಪದ್ಧತಿ. ಆದರೆ, ರಾಜ್ಯದ ಮುಖ್ಯಮಂತ್ರಿಯೊಬ್ಬರು ಬಹು ಸಂಖ್ಯಾತರ ಭಾವನೆಗೆ ಘಾಸಿಮಾಡುವಂತೆ ಹೇಳಿಕೆ ನೀಡಿದ್ದು...ಸರಿಯಲ್ಲ. ಅದೇ ರೀತಿ
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಆಹಾರ ಅವರವರ ಪದ್ಧತಿ. ಆದರೆ, ರಾಜ್ಯದ ಮುಖ್ಯಮಂತ್ರಿಯೊಬ್ಬರು ಬಹು ಸಂಖ್ಯಾತರ ಭಾವನೆಗೆ ಘಾಸಿ ಮಾಡುವಂತೆ ಹೇಳಿಕೆ ನೀಡಿದ್ದು ಸರಿಯಲ್ಲ. ಅದೇ ರೀತಿ ಆಹಾರ ಪದ್ಧತಿ ವಿಚಾರದಲ್ಲಿ ದೌರ್ಜನ್ಯ ಎಸಗುವುದೂ ಸಹ ಸರ್ವಥಾ ಸರಿಯಲ್ಲ ಎಂದು ಆರ್ ಎಸ್‍ಎಸ್‍ನ ಕ್ಷೇತ್ರೀಯ ಸಂಘ ಚಾಲಕ ನಾಗರಾಜ್ ತಿಳಿಸಿದರು.

ಸಿದ್ಧರಾಮಯ್ಯ ಸಾಮಾನ್ಯ ನಾಗರಿಕನಾಗಿ ಗೋಮಾಂಸ ತಿನ್ನುತ್ತೇನೆ ಎಂದಿದ್ದರೆ ಅದು ಅಭಾಸವಾಗುತ್ತಿರಲಿಲ್ಲ. ಆದರೆ ಎಲ್ಲಾ ಜನರನ್ನು ಪ್ರತಿನಿಧಿಸಬೇಕಾದ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಇಂತಹ ಹೇಳಿಕೆ ನೀಡುವ ಮೊದಲು ಯೋಚನೆ ಮಾಡಬೇಕು. ಆದರೆ ಇಂತಹ ಹೇಳಿಕೆ ಆ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲ. ಆಹಾರ ಸಂಸ್ಕೃತಿಯ ನೆಪದಲ್ಲಿ ಗೋ ಮಾಂಸ ಭಕ್ಷಣೆ ಮಾಡುತ್ತಾರೆ ಎಂದು ಆಕ್ರಮಣ ಮಾಡಿದರೆ ಅದು ತಪ್ಪು ಎಂದರು.

ದೇಶದಲ್ಲಿ ಅಸಹಿಷ್ಣುತೆ ಎಲ್ಲಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಮರು ಪ್ರಶ್ನೆ ಹಾಕಿದ ಅವರು, ರಾಜಕೀಯ ಉದ್ದೇಶದಿಂದ ಬೌದ್ಧಿಕ ಸಹನೆ ಕಳೆದುಕೊಂಡ ಅನೇಕರು ಪ್ರಶಸ್ತಿ ವಾಪಸು ಮಾಡುತ್ತಿದ್ದಾರೆ. ಈ ವಾದದಲ್ಲಿ ಅರ್ಥವಿಲ್ಲ ಎಂದರು.ಕೇಂದ್ರ ಸಾಹಿತ್ಯ ಅಕಾಡೆಮಿಯಂತಹ ಸ್ವಾಯತ್ತ ಸಂಸ್ಥೆ ನೀಡಿದಂತಹ ಪ್ರಶಸ್ತಿಯನ್ನು ಕೇವಲ ಒಂದು ಸಿದ್ಧಾಂತವನ್ನಿರಿಸಿಕೊಂಡು ಪ್ರಶಸ್ತಿ ಹಿಂದಕ್ಕೆ ನೀಡುವುದರ ಹಿಂದಿರುವ ಮರ್ಮ ಜನತೆ ತಿಳಿದುಕೊಂಡಿದ್ದಾರೆ ಎಂದರು.

ಹೋರಾಟಕ್ಕೆ ಬೆಂಬಲ
ಟಿಪ್ಪುವಿನಿಂದ ದೌರ್ಜನ್ಯ, ಶೋಷಣೆಗೆ ಒಳಗಾದ ಪ್ರದೇಶದ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ನಾಗರಾಜ್ ತಿಳಿಸಿದರು.ಟಿಪ್ಪುವಿನ ಕೃತ್ಯಗಳ ಕುರಿತು ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದು, ಕರಾವಳಿ, ಚಿತ್ರದುರ್ಗ, ಕೊಡಗು, ಹೊಳೆನರಸಿಪುರದಂತಹ ಅನೇಕ ಕಡೆಗಳಲ್ಲಿ ಕ್ರೌರ್ಯ, ದೌರ್ಜನ್ಯಗಳು ನಡೆಸಿದ್ದ. ಅಲ್ಲಿ ಟಿಪ್ಪು ಜಯಂತಿ ಆಚರಿಸುವುದಕ್ಕೆ ವಿರೋಧಿಸುತ್ತಿದ್ದಾರೆ.ಜನತೆಯ ಹೋರಾಟಕ್ಕೆ ಸಂಘದ ಬೆಂಬಲದೆ ಎಂದರು.

ಬದಲಾಗುತ್ತಾ ಗಣವೇಷ?

ಆರ್‍ಎಸ್‍ಎಸ್‍ನ ಗಣವೇಷ ಬದಲಾವಣೆ ಕುರಿತು 4 ವರ್ಷಗಳಿಂದಲೂ ಚರ್ಚೆ ನಡೆದಿದ್ದು, ಹಲವು ಅಭಿಪ್ರಾಯಗಳು ಬಂದಿವೆ. ಪ್ಯಾಂಟ್ ಅಥವಾ ಚಡ್ಡಿ, ಬಣ್ಣಗಳ ಕುರಿತು ಸಲಹೆಗಳನ್ನು ಸ್ವೀಕರಿಸಿದ್ದು, ಚಡ್ಡಿ ಬದಲಾಗಬೇಕು ಮತ್ತು ಈಗಿರುವ ಸಮವಸ್ತ್ರವೇ ಮುಂದುವರಿಯಬೇಕೆನ್ನುವವರ ಸಂಖ್ಯೆ ಸಮಾನವಾಗಿದೆ. ಸಂಘದ ಕೇಂದ್ರ ಸಮಿತಿ ತೀರ್ಮಾನ ಕೈಗೊಂಡು, ಅಖಿಲ ಭಾರತ ಪ್ರತಿನಿಧಿ ಸಭಾದಲ್ಲಿ ಒಪ್ಪಿಗೆಯಾದಲ್ಲಿ ಗಣವೇಷ ಬದಲಾವಣೆಯಾಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com