ಅಕ್ಕರೆಯ ಕರೆ ದೂಡಿತು ಅಪಹರಣಕಾರರ ಬಲೆಗೆ

ಹಿಂದು ಮುಂದು ನೋಡದೆ ಯುವತಿಯೊಬ್ಬಳ ಆಹ್ವಾನದ ಮೇರೆಗೆ ಸ್ಥಳಕ್ಕೆ ಬಂದು ನಿಂತ ವಾಸಿಂಗೆ ಅಲ್ಲಿ ಆಘಾತ ಕಾದಿತ್ತು.
ಅಪಹರಣ(ಸಾಂಕೇತಿಕ ಚಿತ್ರ)
ಅಪಹರಣ(ಸಾಂಕೇತಿಕ ಚಿತ್ರ)

ಬೆಂಗಳೂರು: ಆತ ಅಕ್ಕಿ ವ್ಯಾಪರಿಯೊಬ್ಬರ ಪುತ್ರ ವಾಸಿಂ. ಕೋಲಾರದ ಕೆಜಿಎಫ್ ನವನಾದ ವಾಸಿಂ ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದ. ಮೊನ್ನೆ, ನ.5ರಂದು ಸಂಜೆ 5.30ರ ಹೊತ್ತಿಗೆ ಆತನ ಮೊಬೈಲ್‍ಗೆ  ಮಿಸ್ಡ್ ಕಾಲ್ ಬಂದಿತ್ತು. ಅದಕ್ಕೆ ಕೆರೆ ಮಾಡಿದ ವಾಸಿಂಗೆ ಅತ್ತ ಕಡೆಯಿಂದ ಹೆಣ್ಣಿನ ದನಿಯೊಂದು ಕೇಳಿಸಿತ್ತು. ಅತನಿಗೆ ಆಕೆಯ ಪರಿಚವೇನೂ ಇರಲಿಲ್ಲವಾದರೂ, ಆ ಹೆಣ್ಣು ಸ್ವಲ್ಪ ಸಲುಗೆಯಿಂದಲೇ ಮಾತನಾಡಿದ್ದಳು. ಅಲ್ಲದೆ, ತನ್ನನ್ನು ಭೇಟಿಯಾಗಬೇಕಿದ್ದರೆ ಬಿಟಿಎಂ ಲೇಔಟ್ ಬರುವಂತೆ ತಿಳಿಸಿದ್ದಳು.
ಹಿಂದು ಮುಂದು ನೋಡದೆ ಆಕೆ ಹೇಳಿದ್ದ ಸ್ಥಳಕ್ಕೆ ಬಂದು ನಿಂತ ವಾಸಿಂಗೆ ಅಲ್ಲಿ ಆಘಾತ ಕಾದಿತ್ತು. ಅದೇನೆಂದರೆ, ತಾನೇ ಅಪಹರಣಕಾರರ ಜಾಲಕ್ಕೆ ಸಿಲುಕಿದ್ದೇನೆ ಎಂಬುದು. ಹೌದು... ನಗರದಲ್ಲಿ ಈ ರೀತಿ ಏಮಾರಿಸಿ ಯುವಕನನ್ನು ಹಣಕ್ಕಾಗಿ ಅಪಹರಿಸಲಾಗಿದೆ. ಆದರೆ, ಎಷ್ಟು ಸುಲಭವಾಗಿ ಯುವಕನನ್ನು ಅಪಹರಿಸಲಾಗಿತ್ತೋ ಅಷ್ಟೇ ಸುಲಭವಾಗಿ ಅಪಹರಣಕಾರರ ಜಾಡನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಮೂವರನ್ನು ಬಂ„ಸಿರುವ ಪೊಲೀಸರು, ಅವರನ್ನೆಲ್ಲ ಜೈಲಿಗಟ್ಟಿದ್ದಾರೆ. ಬಂಧಿತರಿವರು ದೊಡ್ಡಮಾವಳ್ಳಿಯ ಶಾಹಿದ್ ಅಲಿ(23), ಲಕ್ಕಸಂದ್ರದ ನವಾಜ್‍ವುಲ್ಲಾಖಾನ್(27) ಮತ್ತು ಸೋಮೇಶ್ವರನಗರದ ಅಬ್ದುಲ್
ಜಾಫರ್ (20).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com