ಕಬ್ಬನ್‍ನಲ್ಲಿ ಮಹಿಳೆ ರೇಪ್ ಪ್ರಕರಣ ಸೆಕ್ಯುರಿಟಿ ಏಜೆನ್ಸಿ ಮುಖ್ಯಸ್ಥನ ಬಂಧನ

ಕಬ್ಬನ್‍ಪಾರ್ಕ್ ನಲ್ಲಿ ತುಮಕೂರು ಮೂಲದ ಮಹಿಳೆ ಮೇಲೆ ಸೆಕ್ಯುರಿಟಿ ಗಾರ್ಡ್‍ಗಳಿಂದ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಬ್ಬನ್‍ಪಾರ್ಕ್ ನಲ್ಲಿ ತುಮಕೂರು ಮೂಲದ ಮಹಿಳೆ ಮೇಲೆ ಸೆಕ್ಯುರಿಟಿ ಗಾರ್ಡ್‍ಗಳಿಂದ ನಡೆದ ಅತ್ಯಾಚಾರ ಪ್ರಕರಣಕ್ಕೆ  ಸಬಂಧಿಸಿದಂತೆ ಸೆಕ್ಯುರಿಟಿ ಏಜೆನ್ಸಿ ಮುಖ್ಯಸ್ಥ ಕೇಶವಮೂರ್ತಿ (65)  ಬುವವರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

`ಖಾಸಗಿ ಸೆಕ್ಯುರಿಟಿ ಸಂಸ್ಥೆಗಳ ನಿಯಂತ್ರಣ ಕಾಯ್ದೆ' ಸೆಕ್ಷನ್ 20ರ ಉಲ್ಲಂಘನೆ ಆರೋಪದ  ಅಡಿಯಲ್ಲಿ  ಕೇಶವಮೂರ್ತಿ ಅವರನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಬಂಧಿತರಾಗಿರುವ ಅಸ್ಸಾಂ ಮೂಲದ ರಾಜುಮೇಟಿ ಮತ್ತು ಬೋಲಿನ್‍ದಾಸ್ `ಪವನ್  ಸೆಕ್ಯುರಿಟಿ ಆ್ಯಂಡ್ ಡಿಟೆಕ್ಟಿವ್ ಸರ್ವೀಸ್ ಏಜೆನ್ಸಿ' ಸೆಕ್ಯುರಿಟಿ ಗಾಡ್ರ್ ಗಳಾಗಿದ್ದರು. ಹೀಗಾಗಿ  ಆರೋಪಿಗಳ ಪೂರ್ವಾಪರ ನೀಡುವಂತೆ ಕಂಪನಿಗೆ ಪೊಲೀಸರು ನೋಟಿಸ್ ನೀಡಿದ್ದರು. ಆದರೆ, ಅವರ ಹಿನ್ನೆಲೆ ಮಾಹಿತಿ ನೀಡಲು ಕೇಶವಮೂರ್ತಿ ವಿಫಲರಾಗಿದ್ದರು.

ಇಬ್ಬರು ಆರೋಪಿಗಳ ಹಿನ್ನೆಲೆ ಪರಿಶೀಲಿಸದೆ ಕೆಲಸ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಈ  ಹಿನ್ನೆಲೆಯಲ್ಲಿ ಕೇಶವಮೂರ್ತಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.  ಕಬ್ಬನ್‍ಪಾರ್ಕ್ ಆವರಣದಲ್ಲಿರುವ ರಾಜ್ಯ ಲಾನ್ ಟೆನ್ನಿಸ್ ಸಂಸ್ಥೆಯಲ್ಲಿ ಟೆನಿಸ್  ತರಬೇತಿ ಪ್ರವೇಶ ಪಡೆಯಲು (ನ.11ಕ್ಕೆ) ಬಂದಿದ್ದ 30 ವರ್ಷದ ಮಹಿಳೆ ಮೇಲೆ ರಾಜು ಮತ್ತು ಬೋಲಿನ್‍ದಾಸ್ ಅತ್ಯಾಚಾರ ಎಸಗಿದ್ದರು. ಮಹಿಳೆ ನೀಡಿದ ದೂರಿನ ಆಧಾರದ  ಮೇರೆಗೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com