

ಧಾರವಾಡ: ಪ್ರವರ್ಗ 3ಬಿ ದಲ್ಲಿ ವೀರಶೈವ-ಲಿಂಗಾಯತ ಎಂದು ಜಾತಿ ಪ್ರಮಾಣ ಪತ್ರ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ರಾಜ್ಯ ಸರ್ಕಾರಕ್ಕೆ ಧಾರವಾಡ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಗೋಕಾಕ ವಿದ್ಯಾನಗರದ ಉದಯ ಕರ್ಜಿಗಿಮಠ ಅವರು ತಹಸೀಲ್ದಾರ್ ಜಾತಿ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು. ಅವರು ವೀರಶೈವ-ಲಿಂಗಾಯತಎಂದುಪ್ರಮಾಣಪತ್ರ ನೀಡಿದ್ದರು. ಇದಕ್ಕೆ ಪ್ರತಿಯಾಗಿ ತಾವು ಲಿಂಗಾಯತರೇ ವಿನಃ ವೀರೈಶವ- ಲಿಂಗಾ ಯತ ಅಲ್ಲ, ಶಾಲಾ ದಾಖಲಾತಿಯಲ್ಲಿ ಕೇವಲ ಲಿಂಗಾಯತ ಎಂದು ಮಾತ್ರ ಇದೆ ಎಂದು ಅರ್ಜಿ ಸಲ್ಲಿಸಿದ್ದ ಅವರನ್ನು ಸೋಮ ವಾರ ಏಕಸದಸ್ಯ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.