ವ್ಯಾಪಾರೀಕರಣವಾಗಿದೆ ರಾಜಕಾರಣ

ಇಂದಿನ ರಾಜಕಾರಣ ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಆರ್.ರಮೇಶ್ ಕುಮಾರ್ ವಿಷಾದಿಸಿದರು...
ವಿಧಾನ ಪರಿಷತ್ ಸದಸ್ಯ ಕೆ.ಆರ್.ರಮೇಶ್ ಕುಮಾರ್
ವಿಧಾನ ಪರಿಷತ್ ಸದಸ್ಯ ಕೆ.ಆರ್.ರಮೇಶ್ ಕುಮಾರ್
Updated on

ಬೆಂಗಳೂರು: ಇಂದಿನ ರಾಜಕಾರಣ ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಆರ್.ರಮೇಶ್ ಕುಮಾರ್ ವಿಷಾದಿಸಿದರು.

ಬೆಂಗಳೂರು ವಿವಿ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ `ಜ್ಞಾನಾಕ್ಷಿ' ಮಾಧ್ಯಮ ಸಂವಾದ ವೇದಿಕೆಯ 2015-16ನೇ ಸಾಲಿನ ಪಠ್ಯೇತರ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ರಾಜಕಾರಣ ವ್ಯಾಪಾರೀಕರಣವಾಗಿ ಮಾರ್ಪಟ್ಟಿದ್ದು, ಪ್ರಜಾಪ್ರಭುತ್ವ ಸತ್ತು ಹೋಗಿದೆ. ಸರ್ಕಾರಗಳು ಜನಪರ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿವೆ. ರಾಜಕೀಯ ಪಕ್ಷಗಳು ಪಕ್ಷದ ಟಿಕೆಟ್‍ಗಳನ್ನು ಜಾತಿ ಮತ್ತು ಹಣದ ಮಾನದಂಡದ ಮೇಲೆ ನೀಡುತ್ತಿವೆ. ಇಂತಹ
ಪಕ್ಷಗಳಿಂದ ಯಾವ ರೀತಿಯ ಅಭಿವೃದ್ಧಿ ಸಾಧ್ಯ. ಜನ ಈಗಲೂ ಜಾಗೃತರಾಗದಿದ್ದರೆ ವ್ಯವಸ್ಥೆಯಲ್ಲಿ ಬದಲಾವಣೆ ಕಷ್ಟ ಸಾಧ್ಯಎಂದರು.

ಅನ್ನದಾತರು ಆತ್ಮಹತ್ಯೆಗೆ ಶರಣಾಗುತ್ತಿರುವು ದು ನೋವಿನ ವಿಚಾರ. ರೈತರ ಆತ್ಮಹತ್ಯೆ ನಿಯಂತ್ರಿಸಲು ಸರ್ಕಾರ ಪ್ರತ್ಯೇಕ ಸಾಲ ನೀತಿ ರೂಪಿಸಲು ಮುಂದಾಗ ಬೇಕೆಂದು ಸಲಹೆ ನೀಡಿದರು. ಶ್ರೀಮಂತರ ಒಡೆತನದಲ್ಲಿ ಮಾಧ್ಯಮಗಳು: ಸಾರ್ವಜನಿಕ ಹಿತಾಸಕ್ತಿ ಬಿಂಬಿಸಬೇಕಾದ ಮಾಧ್ಯಮಗಳು ಇಂದು ಶ್ರೀಮಂತರ ಒಡೆತನದಲ್ಲಿವೆ. ಮಾಲೀಕನ ಮಾತು ಕೇಳಿದ ಬಳಿಕ ಬರೆಯುವ ಸ್ಥಿತಿ ನಿರ್ಮಾಣವಾಗಿದೆ. ಸಂಪಾದಕರು ಸ್ವಾತಂತ್ರ ಕಳೆದುಕೊಂಡಿ ದ್ದಾರೆ. ಈ ಸಮಾಜದ ಸವಾಲುಗಳ ನ್ನು ಎದುರಿಸಿ ನಿಲ್ಲುವ ಮಾಧ್ಯಮಗಳು ಹಾಗೂ ಪತ್ರಕರ್ತರ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಬೆಂಗಳೂರು ವಿವಿ ಕುಲಸಚಿವ (ಮೌಲ್ಯಮಾಪನ) ಪ್ರೊ. ಕೆ.ಎನ್.ನಿಂಗೇಗೌಡ, ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಪೊ್ರ.ನರಸಿಂಹಮೂತಿರ್  ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com