ಕುಡಿದು ಚಾಲನೆ; 2 ದಿನ ಜೈಲು!

ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದ ಆಟೋ ಚಾಲಕ ಸೇರಿ ಇಬ್ಬರಿಗೆ 2 ದಿನಗಳ ಜೈಲು ಶಿಕ್ಷೆ ವಿಧಿಸಿರುವ ಮೆಟ್ರೋಪಾಲಿಟನ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದ ಆಟೋ ಚಾಲಕ ಸೇರಿ ಇಬ್ಬರಿಗೆ 2 ದಿನಗಳ ಜೈಲು ಶಿಕ್ಷೆ ವಿಧಿಸಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಟ್ರಾಫಿಕ್ ನ್ಯಾಯಾಲಯ (ಎಂಎಂಟಿಸಿ) ತಲಾ ರು.3500 ದಂಡ ವಿಧಿಸಿದೆ. 
ಯಶವಂತಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತ್ರಿವೇಣಿ ನಗರದ ಆಟೋ ಚಾಲಕ ಸರವಣ (38) ಎಂಬಾತ ನ.10ರಂದು ಮದ್ಯಪಾನ ಮಾಡಿ ಆಟೋ ಚಾಲನೆ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. 
ಆರೋಪಿ ವಿರುದ್ಧ ಈ ಹಿಂದೆಯು ಮದ್ಯ ಪಾನ ಮಾಡಿದ್ದ ಕೇಸ್ ದಾಖಲಾಗಿತ್ತು. ಈ ಸಂಬಂಧ ಮದ್ಯಪಾನ ಮಾಡಿ ವಾಹನ ಚಾಲನೆ ಪುನರಾವ ರ್ತನೆ ಮಾಡಿದ್ದರಿಂದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಎಂಎಂಟಿಸಿ ನ್ಯಾಯಾಲಯ ದಂಡ ಹಾಗೂ 2 ದಿನ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com