ಸಂಡೂರಿನಲ್ಲಿ ಚಿರತೆ ದಾಳಿಗೆ ವ್ಯಕ್ತಿ ಬಲಿ

ಮೇಕೆ ಮೇಯಿಸಲು ತೆರಳಿದ್ದ ವ್ಯಕ್ತಿಯನ್ನು ನರಭಕ್ಷಕ ಚಿರತೆ ಬಲಿ ಪಡೆದ ಘಟನೆ ಬುಧವಾರ ಸಂಡೂರು ತಾಲೂಕಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಳ್ಳಾರಿ: ಮೇಕೆ ಮೇಯಿಸಲು ತೆರಳಿದ್ದ  ವ್ಯಕ್ತಿಯನ್ನು ನರಭಕ್ಷಕ ಚಿರತೆ ಬಲಿ ಪಡೆದ ಘಟನೆ ಬುಧವಾರ ಸಂಡೂರು ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ನಡೆದಿದೆ. ಇದರೊಂದಿಗೆ ಕಳೆದ ಎರಡು ತಿಂಗಳಲ್ಲಿ ಚಿರತೆ ದಾಳಿಗೆ ಬಲಿಯಾದವರ ಸಂಖ್ಯೆ ಮೂರಕ್ಕೇರಿದಂತಾಗಿದೆ.

ಚಿರತೆ ದಾಳಿಗೆ ಬಲಿಯಾದ ವಕ್ತಿಯನ್ನು ಭರಮಲಿಂಗಪ್ಪ(52) ಎಂದು ಗುರುತಿಸಲಾಗಿದ್ದು, ಭರಮಲಿಂಗಪ್ಪ ಅವರು ಇಂದು ಬೆಳಗ್ಗೆ ಮೇಕೆಗಳನ್ನು ಮೇಯಿಸಲು ತೆರಳಿದ್ದರು. ಈ ವೇಳೆ ಬೇಟೆಗಾಗಿ ಹೊಂಚು ಹಾಕಿ ಕುಳಿತಿದ್ದು ಚಿರತೆ ಮೇಕೆ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಮೇಕೆಯನ್ನು ರಕ್ಷಿಸಲು ಮುಂದಾದ ಭರಮಲಿಂಗಪ್ಪ ಅವರನ್ನೇ ನರಭಕ್ಷಕ ಚಿರತೆ ಬಲಿ ಪಡೆದಿದೆ.

ಘಟನಾ ಸ್ಥಳಕ್ಕೆ ಸಂಡೂರು ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ತಿಂಗಳು ಅರಣ್ಯಾಧಿಕಾರಿಗಳು ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ನರಭಕ್ಷಕ ಚಿರತೆಯೊಂದನ್ನು ಹತ್ಯೆ ಮಾಡಲಾಗಿತ್ತು.

ಕಳೆದ ತಿಂಗಳಷ್ಟೇ ಚಿರತೆ ದಾಳಿಗೆ ಸುಶೀಲನಗರದ ಮಾಬೂಸಾಬ್(55) ಹಾಗೂ ಪ್ರಕಾಶ್ ನಾಯ್ಕ್(14) ಎಂಬ ಹುಡುಗ ಚಿರತೆ ದಾಳಿಗೆ ಬಲಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com