• Tag results for ಚಿರತೆ

ಮೈಸೂರು ಬಳಿ ಚಿರತೆಗಳಿಗೆ ವಿಷ ಪ್ರಶಾನ!

ನಂಜನಗೂಡು ಮತ್ತು ಎಚ್.ಡಿ.ಕೋಟೆ ಬಳಿ 20 ದಿನಗಳ ಅವಧಿಯಲ್ಲಿ ಆರು ಚಿರತೆಗಳಿಗೆ ಇತ್ತೀಚಿಗೆ ವಿಷ ಪ್ರಶಾನ ಮಾಡಲಾಗಿದ್ದು, ದುಷ್ಕರ್ಮಿಗಳು ಕೂಡಲೇ ಪತ್ತೆ ಹಚ್ಚಿ, ಕಠಿಣ ಸಂದೇಶ ರವಾನಿಸಬೇಕು ಎಂದು ಪರಿಸರ ಹೋರಾಟಗಾರರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

published on : 14th June 2021

ಮೈಸೂರಿನಲ್ಲಿ ತಾಯಿ ಮತ್ತು ಎರಡು ಮರಿ ಚಿರತೆಗಳ ಸಾವು: ವಿಷಪ್ರಾಶನದ ಶಂಕೆ

ತಾಯಿ ಮತ್ತು ಎರಡು ಮರಿ ಚಿರತೆಗಳು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಬೆಮೆಲ್ ನಲ್ಲಿ ಎರಡು ದಿನಗಳ ಹಿಂದೆ ತಿರುಗಾಟ ಮಾಡುತ್ತಿದ್ದ ಕುಟುಂಬಸ್ಥರ ಕೈವಾಡವೇ ಚಿರತೆಗಳ ಸಾವಿನ ಹಿಂದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

published on : 22nd May 2021

ಮೈಸೂರಿನ ಬೆಮೆಲ್‍ ಸಂಕೀರ್ಣದಲ್ಲಿ ಐದು ಚಿರತೆಗಳು ಪ್ರತ್ಯಕ್ಷ

ನಗರದ ಹೊರವಲಯದ ಬೆಮೆಲ್‍ ಸಂಕೀರ್ಣದಲ್ಲಿ ಚಿರತೆಯೊಂದು ನಾಲ್ಕು ಪ್ರಾಯದ ಮರಿಗಳೊಂದಿಗೆ ಪ್ರತ್ಯಕ್ಷವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

published on : 20th May 2021

ಬಲೆಗೆ ಸಿಕ್ಕು 42 ಗಂಟೆ ನೋವಿನಿಂದ ನರಳಾಡಿ ಚಿರತೆ ಸಾವು!

 42 ಗಂಟೆಗಳ ಕಾಲ, ಕಾಫಿ ಎಸ್ಟೇಟ್ ಒಂದರಲ್ಲಿ ಬಲೆಗೆ ಸಿಕ್ಕಿಬಿದ್ದ ಚಿರತೆ ಬದುಕುಳಿಯಲು ತೀವ್ರ ಹೋರಾಟ ನಡೆಸಿದರೂ ಸುಮಾರು ಎರಡು ದಿನಗಳ ನಂತರ, ಐದರಿಂದ ಆರು ವರ್ಷದ ಚಿರತೆ ತನ್ನ ಹೋರಾಟದಲ್ಲಿ ವಿಫಲವಾಗಿ ಸಾವನ್ನಪ್ಪಿದೆ.

published on : 30th March 2021

ಉಡುಪಿ: ಆಹಾರ ಹುಡುಕಿ, ನಾಡಿಗೆ ಬಂದು ಮನೆಯಲ್ಲಿ ಬಂಧಿಯಾದ ಚಿರತೆ; ಅರಣ್ಯಾಧಿಕಾರಿಗಳಿಂದ ರಕ್ಷಣೆ

ಆಹಾರ ಹುಡುಕಿ ಬಂದಿದ್ದ ಚಿರತೆಯೊಂದು ಮನೆಯ ಕೋಣೆಯೊಳಗೆ ಬಂಧಿಯಾದ ಘಟನೆ ಬ್ರಹ್ಮಾವರ ತಾಲೂಕಿನ ನೈಲಾಡಿ ಸಮೀಪ ನಡೆದಿದೆ.  

published on : 22nd March 2021

ಹಾಸನ: ಚಿರತೆಯೊಂದಿಗೆ ಸೆಣೆಸಿ ಅಮ್ಮನ ಜೀವ ಉಳಿಸಿದ ಮಗ!

ತಾಯಿಯ ಮೇಲೆರಗಿದ್ದ ಚಿರತೆಯೊಂದಿಗೆ ಹೋರಾಡಿ ಮಗನೊಬ್ಬ ಆಕೆಯ ಪ್ರಾಣ ಕಾಪಾಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆದಿದೆ.

published on : 22nd February 2021

ಕಾರವಾರ: ಮರ ಏರುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಚಿರತೆ ಸಾವು!

 ಮರಕ್ಕೆ ಹತ್ತುವಾಗ ವಿದ್ಯುತ್ ಸ್ಪರ್ಶಿಸಿ ಚಿರತೆಯೊಂದು ಮೃತಪಟ್ಟಿರುವ ಘಟನೆ ಇಲ್ಲಿನ ಭಟ್ಕಳದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಬೆಲ್ಕೆ  ಮೀಸಲು ಅರಣ್ಯ ಪ್ರದೇಶದ ಮಾಶೆರಿ ಗ್ರಾಮದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ.  

published on : 15th February 2021

ಕೆಆರ್'ಎಸ್ ಬಳಿ ಕೊನೆಗೂ ಬೋನಿಗೆ ಬಿದ್ದ ಚಿರತೆ

ಕೆಆರ್'ಎಸ್ ಅಧಿಕಾರಿಗಳು ಹಾಗೂ ಸ್ಥಳೀಯರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ.

published on : 12th February 2021

ಮಂಗಳೂರು: ಶೌಚಾಲಯದಲ್ಲಿ ಚಿರತೆ, ಶ್ವಾನ 'ಲಾಕ್'!

ಶೌಚಾಲಯದೊಳಗೆ ಚಿರತೆ ಹಾಗೂ ನಾಯಿ ಸೆರೆಯಾಗಿರುವ ಘಟನೆ ಬುಧವಾರ ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ನಡೆದಿದೆ.

published on : 3rd February 2021

ಬೆಂಗಳೂರು: ಬೇಗೂರು ಬಳಿ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ!

ಹಲವು ದಿನಗಳಿಂದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಕೊನೆಗೂ ಅರಣ್ಯ ಹಾಗೂ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಬೇಗೂರು ಗ್ರಾಮದಲ್ಲಿ ಕಳೆದ 9 ದಿನಗಳಿಂದ ಕಾರ್ಯಾಚರಣೆ ನಡೆಸಿ, ಚಿರತೆಯನ್ನು ಬೋನಿಗೆ ಬೀಳಿಸಲಾಗಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

published on : 1st February 2021

ಬೆಂಗಳೂರು: ಎನ್. ಬೇಗೂರಿನಲ್ಲಿ ಮತ್ತೊಂದು ಚಿರತೆ? ಅರಣ್ಯಾಧಿಕಾರಿಗಳಲ್ಲಿ ಆತಂಕ!

ಎನ್.ಬೇಗೂರು ದಕ್ಷಿಣ ವ್ಯಾಪ್ತಿಯ ಪ್ರೆಸ್ಟೀಜ್ ಸಂಗ್ ಪ್ರದೇಶದಲ್ಲಿ ಮತ್ತೊಂದು ಚಿರತೆ ಇದೆೇ ಎಂಬ ಅನುಮಾನ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮೂಡಿದೆ.

published on : 27th January 2021

ಬೆಂಗಳೂರು: ಚಿರತೆ ಪತ್ತೆ ಮಾಡಲು ಡ್ರೋನ್‌, ಕ್ಯಾಮರಗಳ ಮೊರೆಹೋದ ಅರಣ್ಯ ಇಲಾಖೆ

ನಗರದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಅರಣ್ಯ ಇಲಾಖೆಯು ಚಿರತೆಯೊಂದರ ಪತ್ತೆಗಾಗಿ ಡ್ರೋನ್ ಮತ್ತು ಕ್ಯಾಮರಗಳೊಂದಿಗೆ ಸಿದ್ದವಾಗಿದೆ. 

published on : 26th January 2021

ಬೆಂಗಳೂರು: ಬೇಗೂರು, ಕೊಪ್ಪ ಪ್ರದೇಶಗಳಲ್ಲಿ ಚಿರತೆ ಪ್ರತ್ಯಕ್ಷ; ಆತಂಕ ಬೇಡ ಎಂದು ಅಧಿಕಾರಿಗಳು

ನಗರದ ಬೇಗೂರು ಹಾಗೂ ಕೊಪ್ಪದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನರು ಹಾಗೂ ಸ್ಥಳೀಯ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. 

published on : 23rd January 2021

ಕಾರವಾರ: ನಾಯಿ ಹಿಡಿಯಲು ಬಂದು ಕೋಳಿ ಹೊತ್ತೊಯ್ದ ಚಿರತೆ, ಸಿಸಿಟಿವಿ ದೃಶ್ಯ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು!

ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದೆ. ಆಹಾರ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಚಿರತೆಗಳು ನಾಡಿಗೆ ನುಗ್ಗುತ್ತಿರುವುದು ಸಾಮಾನ್ಯವಾಗಿ ಹೋಗಿದೆ.

published on : 21st January 2021

ತುಮಕೂರು: ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಟ್ಟೆಪಾಳ್ಯ ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. 

published on : 21st January 2021
1 2 >