Chamarajanagara: ಗುಹೆಯೊಳಗೆ ಹೆಣ್ಣು ಚಿರತೆ ಸಾವು!

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ವಿಭಾಗದ ಬಂಡೆಯ ಗುಹೆಯೊಳಗೆ ಹೆಣ್ಣು ಚಿರತೆಯ ಮೃತ ಪಟ್ಟಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
leopard found dead in Chamarajanagara
ಚಿರತೆ ಸಾವು (ಸಂಗ್ರಹ ಚಿತ್ರ)
Updated on

ಚಾಮರಾಜನಗರ: ಬನ್ನೇರುಘಟ್ಟ ಸಫಾರಿ ಮೇಲೆ ಚಿರತೆ ದಾಳಿ ಪ್ರಕರಣ ಹಸಿರಾಗಿರುವಂತೆಯೇ ಅತ್ತ ಚಾಮರಾಜನಗರದಲ್ಲಿ ಹೆಣ್ಣು ಚಿರತೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ವಿಭಾಗದ ಬಂಡೆಯ ಗುಹೆಯೊಳಗೆ ಹೆಣ್ಣು ಚಿರತೆಯ ಮೃತ ಪಟ್ಟಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಹನೂರು ವನ್ಯಜೀವಿ ವಲಯದ ಮೇಕೆದಾಟು ಅರಣ್ಯ ಪ್ರದೇಶದಲ್ಲಿ ಸುಮಾರು ಐದು-ಆರು ವರ್ಷ ವಯಸ್ಸಿನ ಚಿರತೆ ಮೃತ ಪಟ್ಟಿದೆ. ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಆಗಸ್ಟ್ 17 ರಂದು ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಬಂಡೆಯ ಗುಹೆಯೊಳಗೆ ಚಿರತೆ ಮೃತಪಟ್ಟಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶವಪರೀಕ್ಷೆ ವರದಿ ಮಾತ್ರ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಸಾಧ್ಯ ಎಂದು ಅಧಿಕಾರಿ ಹೇಳಿದ್ದಾರೆ.

ಜುಲೈನಲ್ಲಿ, ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಅಭಯಾರಣ್ಯ ವ್ಯಾಪ್ತಿಗೆ ಬರುವ ಕೊತ್ತಲವಾಡಿ ಗ್ರಾಮದ ಬಳಿಯ ಕಲ್ಲಿನ ಕ್ವಾರಿಯಲ್ಲಿ ಚಿರತೆಯ ಮೃತ ಪಟ್ಟಿತ್ತು.

leopard found dead in Chamarajanagara
Bannerghatta ಸಫಾರಿ ವೇಳೆ ಕಾರು ಬೆನ್ನಟ್ಟಿ, ಬಾಲಕನ ಕೈ ಮಾಂಸ ಕಿತ್ತು ಬರುವಂತೆ ಪರಚಿದ ಚಿರತೆ, Video

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com