
ರಾಜಸ್ಥಾನ: ಕಾಡಿನಲ್ಲಿ ಕೆಲವು ಪ್ರಾಣಿಗಳು ಪರ ಭಕ್ಷಕ ಪ್ರಾಣಿಗಳ ವಿರುದ್ಧ ಹೋರಾಡಿ ತಮ್ಮನ್ನು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾಗುತ್ತದೆ. ರಾಜಸ್ಥಾನದಲ್ಲಿ ಇಂತಹುದೇ ಘಟನೆ ನಡೆದಿದೆ.
ರಸ್ತೆಯಲ್ಲೇ ಕರುವಿನ ಮೇಲೆ ಹಠಾತ್ ಎಗರಿ, ಅದನ್ನು ಕೊಂದು ತಿನ್ನಲು ಯತ್ನಿಸಿದ ಚಿರತೆಯೊಂದನ್ನು ತಾಯಿ ಹಸು ಬೆದರಿಸಿ ಕಾಡಿಗೆ ಅಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ರಾಜಸ್ಥಾನದಲ್ಲಿ ಸಫಾರಿಯಲ್ಲಿದ್ದ ಜನರ ಗುಂಪೊಂದು ಈ ವಿಡಿಯೋವನ್ನು ಸೆರೆ ಹಿಡಿದಿದೆ. ಕರುವಿನ ಕುತ್ತಿಗೆಗೆ ಚಿರತೆ ಬಾಯಿ ಹಾಕಿದ್ದಾಗ ತಾಯಿ ಆಕಳು ಬಂದು ಅದನ್ನು ರಕ್ಷಿಸಿದೆ. ಬಾಲಿ, ಪಾಲಿ ಎಂದು ಈ ವಿಡಿಯೋಗೆ ಟೈಟಲ್ ನೀಡಲಾಗಿದೆ.
ತಾಯಿ ಹಸುವಿನ ಧೈರ್ಯಕ್ಕೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದು, ಈ ವಿಡಿಯೋಗೆ ಸುಮಾರು 125,000 ಗೂ ಹೆಚ್ಚು ವೀಕ್ಷಣೆ ಹಾಗೂ ಲೈಕ್ ಬಂದಿವೆ.
ಕಳೆದ ತಿಂಗಳು ತಮಿಳುನಾಡಿನ ನೀಲಗಿರಿಯ ರಸ್ತೆಯಲ್ಲಿ ಕರಿ ಚಿರತೆ ರಸ್ತೆಯಲ್ಲಿ ನಡೆಯುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿದ್ದರು.
Advertisement