ವಿಧಾನ ಪರಿಷತ್
ಜಿಲ್ಲಾ ಸುದ್ದಿ
ಪರಿಹಾರ ಮಂತ್ರಿ ಯಾರು?
ಎಂಡೋ ಸಂತ್ರಸ್ತರಿಗೆ ನೀಡುವ ಪರಿಹಾರದ ಜವಬ್ದಾರಿ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರೋ ಅಥವಾ ಕಂದಾಯ ಸಚಿವರೋ ಎಂಬ ಗೊಂದಲಕ್ಕೆ ಪರಿಷತ್ ಕಲಾಪ ಸಾಕ್ಷಿಯಾಯಿತು.
ವಿಧಾನ ಪರಿಷತ್: ಎಂಡೋ ಸಂತ್ರಸ್ತರಿಗೆ ನೀಡುವ ಪರಿಹಾರದ ಜವಾಬ್ದಾರಿ ಯಾವ ಸಚಿವರ ಹೆಗಲಿಗೆ ಬರುತ್ತದೆ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರೋ ಅಥವಾ ಕಂದಾಯ ಸಚಿವರೋ ಎಂಬ ಗೊಂದಲಕ್ಕೆ ಪರಿಷತ್ ಕಲಾಪ ಸಾಕ್ಷಿಯಾಯಿತು.
ಶೂನ್ಯ ವೇಳೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಪ್ರಸ್ತಾಪಿಸಿ ಎಂಡೋ ಸಂತ್ರಸ್ತರಿಗೆ 6 ತಿಂಗಳಿಂದ ಪಿಂಚಣಿ ಸಿಕ್ಕಿಲ್ಲ. ಸರ್ಕಾರಕ್ಕೆ ಬುದ್ಧಿ ಹೇಳಿ ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಭಾನಾಯಕ ಎಸ್.ಆರ್.ಪಾಟೀಲ್, ಸಂಬಂಧ ಪಟ್ಟ ಸಚಿವರಿಂದ ಉತ್ತರ ಕೊಡಿಸ ಲಾಗುವುದು ಎಂದರು. ಆಡಳಿತ ಪಕ್ಷದ ಸಚೇತಕ ಆರ್.ವಿ.ವೆಂಕಟೇಶ್ ದನಿಗೂಡಿಸಿ, ನಾಳೆ ಈ ಬಗ್ಗೆ ಸರಿಯಾದ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ