• Tag results for ಪರಿಹಾರ

ನೆರೆ ಸಂತ್ರಸ್ತರಿಗೆ ಮಾದರಿ ಪರಿಹಾರ ಪ್ಯಾಕೇಜ್ ನೀಡಲಾಗಿದೆ- ಆರ್. ಅಶೋಕ್ 

ಪ್ರವಾಹ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಕಟಿಬದ್ಧವಾಗಿದ್ದು,ಇಡೀ ದೇಶಕ್ಕೆ ಮಾದರಿಯಾಗುವಂತಹ ಪರಿಹಾರ ಪ್ಯಾಕೇಜ್ ಅನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.

published on : 12th October 2019

ಪ್ರವಾಹ ಪರಿಹಾರ: ಸರ್ಕಾರ ಸಾಕಷ್ಟು ಮಾಡಿದೆ ಎಂದ ಸಿಎಂ, ಸದನದಿಂದ ಹೊರ ನಡೆದ ಕಾಂಗ್ರೆಸ್

ಪ್ರವಾಹ ಪರಿಹಾರ ಕುರಿತಂತೆ ರಾಜ್ಯ ಸರ್ಕಾರ ಸಾಮರ್ಥ್ಯಕ್ಕೂ ಮೀರಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದು, ಇದಕ್ಕೆ ತೀವ್ರವಾಗಿ ಆಕ್ರೋಶಗೊಂಡ ಕಾಂಗ್ರೆಸ್ ನಾಯಕರು ಸದನದಿಂದ ಹೊರ ನಡೆದ ಪ್ರಸಂಗ ನಡೆಯಿತು. 

published on : 12th October 2019

ಕರ್ನಾಟಕದ ಬಗ್ಗೆ ಪ್ರಧಾನಿ ಮೋದಿಗೆ ನಿರ್ಲಕ್ಷ್ಯ: ವಿರೋಧ ಪಕ್ಷಗಳ ಕಿಡಿ

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದರೇ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೆರೆ ಪರಿಹಾರ ಬಿಡುಗಡೆ ಮಾಡುವಲ್ಲಿ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ವಿರೋಧ ಪಕ್ಷಗಳು ಶುಕ್ರವಾರ ತೀವ್ರವಾಗಿ ಕಿಡಿಕಾರಿವೆ. 

published on : 12th October 2019

ನೆರೆ ಸಂತ್ರಸ್ಥರ ಪರಿಹಾರದ ಮೊತ್ತ ಹೆಚ್ಚಿಸಿದ ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಉಂಟಾದ ಅತಿವೃಷ್ಠಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು. ರೈತರ ಮತ್ತು ಜನಸಾಮಾನ್ಯರ ರಕ್ಷಣೆಗೆ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶುಕ್ರವಾರ ವಿಧಾನ ಸಭೆಯಲ್ಲಿ ಪ್ರಕಟಿಸಿದ್ದಾರೆ.

published on : 11th October 2019

ಕ್ರಿಕೆಟ್ ಬ್ಯಾಟ್ ಕೇಳಿದ್ದ ಗ್ರಾಹಕರಿಗೆ ಕಪ್ಪು ಕೋಟ್ ನೀಡಿದ ಫ್ಲಿಪ್‌ಕಾರ್ಟ್- ಗ್ರಾಹಕ ವೇದಿಕೆಯಿಂದ  1 ಲಕ್ಷ ರೂ ದಂಡ

ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ನ್ನ ಗ್ರಾಹಕರಿಗೆ ಸರಿಯಾದ ಉತ್ಪನ್ನವನ್ನು ತಲುಪಿಸುವಲ್ಲಿ ವಿಫಲವಾದ ಕಾರಣ ಮತ್ತು ಗ್ರಾಹಕರಿಗೆ ತಪ್ಪಾದ ಉತ್ಪನ್ನವನ್ನು ಬದಲಿಸಿ ಕೊಟ್ಟದ್ದಕ್ಕಾಗಿ 1 ಲಕ್ಷ ರೂ.ಗಳ ದಂಡ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.

published on : 11th October 2019

ನೆರೆಯಿಂದಾಗಿ ಹಾನಿಗೊಳಗಾಗಿರುವ ಮನೆಗಳ ರಿಪೇರಿಗೆ ರೂ.5 ಲಕ್ಷ ಪರಿಹಾರ

ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವ ಮಾನದಂಡವನ್ನು ರಾಜ್ಯ ಸರ್ಕಾರ ಬದಲಿಸಿದ್ದು, ಶೇ.25ರಿಂದ ಶೇ.75ರಷ್ಟು ಹಾನಿಯಾಗಿರುವ ಮನೆಗಳಿಗೆ ರೂ.5 ಲಕ್ಷ ಪರಿಹಾರ ಘೋಷಿಸಿದೆ. 

published on : 11th October 2019

ನೆರೆ ಪರಿಹಾರ: ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ವಿಪಕ್ಷಗಳು

ನೆರೆ ಪರಿಹಾರ ಕುರಿತಂತೆ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಗುರುವಾರ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರಿವೆ. 

published on : 11th October 2019

ಪ್ರವಾಹ ಪರಿಹಾರ: ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಕುಮಾರಸ್ವಾಮಿ

ಪ್ರವಾಹದಿಂದಾದಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರೈತರ ನಿರೀಕ್ಷೆಗಳನ್ನು ಪೂರೈಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು, ರಾಜ್ಯದ ಆಡಳಿತಾರೂಢ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 

published on : 8th October 2019

ಕೇಂದ್ರದಿಂದ ನಯಾಪೈಸೆ ಕೂಡ ಬಂದಿಲ್ಲ, ಈಗ ಬಂದಿರುವುದು ಹಿಂದಿನ ಸರ್ಕಾರದಲ್ಲಾದ ನಷ್ಟಕ್ಕೆ ಪರಿಹಾರ: ಎಚ್ ಡಿ ದೇವೇಗೌಡ

ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಸುಮಾರು 38000 ಸಾವಿರ ಕೋಟಿ ನಷ್ಟ ಉಂಟಾಗಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ನಯಾಪೈಸೆ‌ ಕೂಡ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

published on : 8th October 2019

ಕಂಬಳಿ ಕೇಳಿದರೆ ಕರ್ಚಿಫ್ ನೀಡಿದ್ದಾರೆ: ಮಧ್ಯಂತರ ಪರಿಹಾರ ಬಿಡುಗಡೆ ಕುರಿತು ಪ್ರಕಾಶ್ ರಾಜ್ ವ್ಯಂಗ್ಯ

ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರಕ್ಕಾಗಿ ಕೇವಲ ರೂ.1,200 ಕೋಟಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ವ್ಯಂಗ್ಯವಾಡಿದ್ದಾರೆ. 

published on : 7th October 2019

'ಅಧಿಕಾರ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ'

ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಮೇಲೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ಹುಚ್ಚರಾಗುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

published on : 7th October 2019

ಪ್ರವಾಹದಿಂದ ಒಟ್ಟಾರೆ ರೂ.35,000 ಕೋಟಿ ನಷ್ಟವಾಗಿದೆ, ಕೇಂದ್ರದ ಬಳಿ ಮತ್ತಷ್ಟು ಪರಿಹಾರ ಕೇಳುತ್ತೇವೆ: ಸಿಎಂ 

ಪ್ರವಾಹದಿಂದ ರಾಜ್ಯದೆಲ್ಲೆಡೆ ಒಟ್ಟಾರೆಯಾಗಿ ರೂ.35,000 ಕೋಟಿ ನಷ್ಟವುಂಟಾಗಿದ್ದು, ಕೇಂದ್ರ ಸರ್ಕಾರದ ಬಳಿ ಮತ್ತಷ್ಟು ಪರಿಹಾರ ಕೇಳಲಾಗುತ್ತೆದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಹೇಳಿದ್ದಾರೆ. 

published on : 6th October 2019

ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಪರಿಹಾರ ಕೊಟ್ಟಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ  

ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕೇಂದ್ರ ಸರ್ಕಾರ ಪರಿಹಾರ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

published on : 6th October 2019

ಪರಿಹಾರ ಪಡೆಯೋಕೆ ಜನರೇ ಬರದಿದ್ದರೆ ನಾವೇನು ಮಾಡೋಣ: ಸಚಿವ ಮಾಧುಸ್ವಾಮಿ ಪ್ರಶ್ನೆ

ನೆರೆಪರಿಹಾರ ಪಡೆಯಲು ಸಂತ್ರಸ್ಥರೆ ಮುಂದೆ ಬರುತ್ತಿಲ್ಲ. ಜನರೇ ಮುಂದೆ ಬರದಿದ್ದರೆ ನಾವೇನು ಮಾಡುವುದಕ್ಕೆ ಆಗುತ್ತದೆ ಎಂದು ಸಚಿವ ಮಾಧುಸ್ವಾಮಿ ಸಂತ್ರಸ್ತರ ಮೇಲೆ ಗೂಬೆ ಕೂರಿಸಿದ್ದಾರೆ.

published on : 5th October 2019

ನೆರೆ ಪರಿಹಾರ ವಿಳಂಬ: ಅನಂತ್ ಕುಮಾರ್ ಪುತ್ರಿಯರ ಹೇಳಿಕೆಗೆ ಬಿಜೆಪಿ ನಾಯಕರು ದಿಗ್ಭ್ರಾಂತ!

ರಾಜ್ಯ ರಾಜಕೀಯ ವಿಚಾರದಲ್ಲಿ ಎಂದಿಗೂ ಮಧ್ಯೆಪ್ರವೇಶಿಸದೇ ಇದ್ದ ದಿವಂಗತ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರ ಪುತ್ರಿಯರು, ರಾಜ್ಯ ನೆರೆ ಪರಿಹಾರ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ದನಿ ಎತ್ತಿರುವುದು ಇದೀಗ ಬಿಜೆಪಿ ನಾಯಕರಲ್ಲಿ ದಿಗ್ಭ್ರಾಂತ ಮೂಡಿಸಿದೆ. 

published on : 5th October 2019
1 2 3 4 5 6 >