ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಭೈರಪ್ಪ ಅವರ ಮೇಲೆ ಕೋಪಗೊಂಡ ಕಾಂಗ್ರೆಸ್ ಕಾರ್ಪೋರೇಟರ್ ಗಳು ಅವರನ್ನು ಕಚೇರಿಯಲ್ಲಿ ಎಳೆದಾಡಿದಲ್ಲದೇ, ಕೊಠಡಿಯಲ್ಲಿ ಕೂಡಿ ಹಾಕಿದ್ದ ಘಟನೆ ಶುಕ್ರವಾರ ನಡೆದಿದೆ.
ಮೇಯರ್ ಭೈರಪ್ಪ ಅವರು ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯನ್ನು ಏಕಾಏಕಿ ಮುಂದೂಡಿದ್ದರು. ಇದರಿಂದ ಮೇಯರ್ ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಕುಪಿತಗೊಂಡ ಕಾಂಗ್ರೆಸ್ ಕಾರ್ಪೋರೇಟರ್ಸ್ ಅವರನ್ನು ಎಳೆದಾಡಿ, ಕೊಠಡಿಯೊಳಗೆ ಕೂಡಿ ಹಾಕಿದ್ದರು.
ಅಷ್ಟರಲ್ಲಿ, ಪೊಲೀಸರು ಆಗಮಿಸಿ ಮೇಯರ್ ಅವರನ್ನು ಕೊಠಡಿಯಿಂದ ಬಿಡಿಸಿ, ಪರಿಸ್ಥಿತಿ ತಿಳಿಗೊಳಿಸಿದರು.