ಮೋದಿ ಕೊಂಡಾಡಿದ ಬಿಎಸ್‍ವೈ

ವಿದೇಶ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ದೊರೆಯುತ್ತಿರುವ ಅದ್ಭುತ ಪ್ರತಿಕ್ರಿಯೆಗೆ ವಿರೋಧ ಪಕ್ಷದ ನಾಯಕರು ನಿಬ್ಬೆರಗಾಗಿದ್ದಾರೆ. ಅವರು ಭಾರತವನ್ನು ಜಾಗತಿಕವಾಗಿ ಉಜ್ವಲಗೊಳಿಸಲು ಹೊರಟಿದ್ದು, ಕೇವಲ ಒಂದೂವರೆ ವರ್ಷದಲ್ಲಿ ವಿಶ್ವ ಮಟ್ಟದ ಸಾಧನೆ ಮಾಡಿದ್ದಾರೆ...
ಬಿ.ಎಸ್. ಯಡಿಯೂರಪ್ಪ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ
ಬಿ.ಎಸ್. ಯಡಿಯೂರಪ್ಪ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ

ಬೆಂಗಳೂರು: ವಿದೇಶ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ದೊರೆಯುತ್ತಿರುವ ಅದ್ಭುತ ಪ್ರತಿಕ್ರಿಯೆಗೆ ವಿರೋಧ ಪಕ್ಷದ ನಾಯಕರು ನಿಬ್ಬೆರಗಾಗಿದ್ದಾರೆ. ಅವರು ಭಾರತವನ್ನು ಜಾಗತಿಕವಾಗಿ ಉಜ್ವಲಗೊಳಿಸಲು ಹೊರಟಿದ್ದು, ಕೇವಲ ಒಂದೂವರೆ ವರ್ಷದಲ್ಲಿ ವಿಶ್ವ ಮಟ್ಟದ ಸಾಧನೆ ಮಾಡಿದ್ದಾರೆ ಎಂದು ಸಂಸದ ಬಿ.ಎಸ್. ಯಡಿಯೂರಪ್ಪ ಕೊಂಡಾಡಿದರು.

ಗರುಡ ಮೀಡಿಯಾ ಅಂಡ್ ಪಬ್ಲಿಕೇಷನ್ಸ್ ಪ್ರಕಟಿಸಿರುವ ಪ್ರಧಾನಿ ನರೇಂದ್ರ ಮೋದಿ ವ್ಯಕಿತ್ವ ವಿಶೇಷತೆ ಕುರಿತ ಕನ್ನಡ (ಬಿ.ಕೆ. ರಂಗನಾಥ್) ಮತ್ತು ಇಂಗ್ಲಿಷ್(ಎಸ್ .ಎ.ಹೇಮಂತಕುಮಾರ್) ಅವತರಣಿಕೆಯ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕತೆಯಲ್ಲಿ ಚೇತರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಚೀನಾ, ಅಮೇರಿಕ ಮೊದಲಾದ ಅಭಿವೃದ್ಧಿ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಲಿದೆ. ಅಟಲ್ ಬಿಹಾರಿ ವಾಜಪೇಯಿ ಬಳಿಕ ಸಾಧನೆಯಲ್ಲಿ ಮೋದಿ ಆಶಾಕಿರಣ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

ಇಂಗ್ಲೆಂಡ್, ಅಮೇರಿಕ, ಐರ್ಲೆಂಟ್ ಮೊದಲಾದ ರಾಷ್ಟ್ರಗಳ ಪ್ರವಾಸದ ವೇಳೆ ದೊರೆಯುತ್ತಿರುವ ಪ್ರತಿಕ್ರಿಯೆಕಂಡು ವಿಪಕ್ಷಗಳ ನಾಯಕರು ನಿಬ್ಬೆರಗಾಗಿದ್ದಾರೆ. ಆದರೆ, ದೇಶದ ಯಾವುದೋ ಮೂಲೆಯಲ್ಲಿ ಒಂದು ಸಣ್ಣ ಘಟನೆ ನಡೆದರೂ ಮೋದಿ ಅವರನ್ನು ಗುರಿ ಮಾಡಲಾಗುತ್ತಿದೆ. ಅಭಿವೃದ್ಧಿ ಸಹಿಸದವರು ಪ್ರತಿ ಹಜ್ಜೆಯಲ್ಲೂ ಅಡಚಣೆಗೆ ಮುಂದಾಗುತ್ತಿದ್ದಾರೆ. ಸಾಧನೆಯ ಹಾದಿಯಲ್ಲಿ ಇಂತಹ ಎಷ್ಟೇ ಸವಾಲುಗಳು ಎದುರಾದರೂ ಸಮರ್ಥವಾಗಿ ನಿಭಾಯಿಸಲು ಮೋದಿ ಶಕ್ತರಾಗಿದ್ದಾರೆ ಎಂದು ಬಿಎಸ್‍ವೈ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಅರಕೆರೆ ಜಯರಾಂ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಮೋದಿ ಅವರನ್ನು ಕೇವಲ ಋಣಾತ್ಮಕ ದೃಷ್ಟಿಕೋನದಲ್ಲಿ ನೋಡುತ್ತಿವೆ. ನೆಹರೂ ಆದಿಯಾಗಿ ಎಲ್ಲ ಕಾಲದಲ್ಲೂ ಅಸಹಿಷ್ಣುತೆ ಇತ್ತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com