ಚಿಮೂಗೆ ತಲೆ ಇನ್ನೂ ಕೆಟ್ಟಿಲ್ಲ: ಚಂಪಾ

ಹಿರಿಯ ಸಾಹಿತಿ ಡಾ. ಚಿದಾನಂದ ಮೂರ್ತಿ ಅವರ ತಲೆ ಇನ್ನೂ ಕೆಟ್ಟಿಲ್ಲ ಎಂಬ ಪ್ರಮಾಣ ಪತ್ರ ನೀಡಬಲ್ಲೆ' ಹೀಗೆಂದು ಸಾಹಿತಿ ಚಂದ್ರಶೇಖರ ಪಾಟೀಲ ವಾಗ್ದಾಳಿ ನಡೆಸಿದರು...
ಸಾಹಿತಿ ಚಂದ್ರಶೇಖರ ಪಾಟೀಲ (ಸಂಗ್ರಹ ಚಿತ್ರ)
ಸಾಹಿತಿ ಚಂದ್ರಶೇಖರ ಪಾಟೀಲ (ಸಂಗ್ರಹ ಚಿತ್ರ)

ಬೆಂಗಳೂರು: ಹಿರಿಯ ಸಾಹಿತಿ ಡಾ. ಚಿದಾನಂದ ಮೂರ್ತಿ ಅವರ ತಲೆ ಇನ್ನೂ ಕೆಟ್ಟಿಲ್ಲ ಎಂಬ ಪ್ರಮಾಣ ಪತ್ರ ನೀಡಬಲ್ಲೆ' ಹೀಗೆಂದು ಸಾಹಿತಿ ಚಂದ್ರಶೇಖರ ಪಾಟೀಲ ವಾಗ್ದಾಳಿ ನಡೆಸಿದರು.

`ಸಾಹಿತಿಗಳು ಅವರವರ ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. ಆದರೆ, ಪ್ರಶಸ್ತಿ ವಾಪ್ಸಿ ಮಾಡುತ್ತಿರುವವರ ಸಾಹಿತಿಗಳ ತಲೆ ಕೆಟ್ಟಿದೆ ಎಂದು ಚಿಮೂ ಹೇಳಿದ್ದಾರೆ. ರಾಜ್ಯದಲ್ಲಿ ನಾನೇ ಮೊದಲಿಗೆ ಪ್ರಶಸ್ತಿ ವಾಪ್ಸಿ ಮಾಡಿದೆ. ಇಂದು ದೇಶಾದ್ಯಂತ ಅಸಹಿಷ್ಣುತೆ ವಿರುದ್ಧ ಹಲವಾರು ಸಾಹಿತಿಗಳು ಪ್ರಶಸ್ತಿ ವಾಪ್ಸಿ ಮಾಡುವ ಮೂಲಕ ಸಾತ್ವಿಕ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಹೀಗಿದ್ದಾಗ ಯಾರಿಗೆ ತಲೆ ಕೆಟ್ಟಿದೆ ಎಂದು ತಿಳಿಯಬೇಕಿದೆ' ಎಂದು ಸುದ್ದಿಗೋಷ್ಠಿಯಲ್ಲಿ ಟಾಂಗ್ ನೀಡಿದರು.

ನಾಳೆ ಸಭೆ: ದೇಶದಲ್ಲಿ ನಡೆಯುತ್ತಿರುವ ಅಸಹಿಷ್ಣುತೆ ಖಂಡಿಸಿ ಪ್ರಶಸ್ತಿಯನ್ನು ಹಿಂದಿರುಗಿಸಿದ ಸಾಹಿತಿಗಳು ನ.22ರಂದು ನಗರದ ಕಬ್ಬನ್ ಉದ್ಯಾನವನದ ಸಚಿ ವಾಲಯ ಕ್ಲಬ್‍ನಲ್ಲಿ ಸಭೆಯನ್ನು ಆಯೋಜಿ ಸಿದ್ದಾರೆ. ಸಾಹಿತಿಗಳಾದ ಕೆ.ಎಸ್. ಭಗವಾನ್, ಸಚ್ಚಿದಾ ನಂದನ್, ಸಾರಾ ಜೋಸೆಫ್, ಶಶಿ ದೇಶಪಾಂಡೆ, ಅರವಿಂದ ಮಾಲಗತ್ತಿ, ರಹಮತ್ ತರೀಕೆರೆ, ಶ್ರೀ
ವಿಜಯ ಕಲ್ಬುರ್ಗಿ, ವೀರಣ್ಣ ಮಡಿ ವಾಳ ಸೇರಿದಂತೆ ಇತರೆ ವಿಚಾರವಾದಿಗಳು ಭಾಗ ವಹಿಸಲಿದ್ದಾರೆ. ದೇಶದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯ ಹತ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾತ್ಯ ತೀತ ಸಂಘಟನೆಗಳು ಒಗ್ಗೂಡು ವ ಮೂಲಕ ಪ್ರಜಾ ಪ್ರಭುತ್ವಕ್ಕೆ ವಿರುದ್ಧವಾದ ಅಸಹಿಷ್ಣುತೆ ಹೋರಾಟಕ್ಕೆ ಬೆಂಬಲ ನೀಡುವಂತೆ ಚಂಪಾ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com