ನೃತ್ಯ ವೈಭವಕೆ ಜನಸಾಗರವೇ ಸೇರಿತ್ತಾ!

ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಎರಡು ದಿನಗಳ ನೃತ್ಯ ಜಾತ್ರೆ ಶನಿವಾರ ಆರಂಭವಾಗಿದ್ದು, ಮೊದಲ ದಿನ...
ವಿವಿಧ ನೃತ್ಯದಲ್ಲಿ ತೊಡಗಿರುವ ಕಲಾವಿದರು
ವಿವಿಧ ನೃತ್ಯದಲ್ಲಿ ತೊಡಗಿರುವ ಕಲಾವಿದರು

ಬೆಂಗಳೂರು: ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಎರಡು ದಿನಗಳ ನೃತ್ಯ ಜಾತ್ರೆ ಶನಿವಾರ ಆರಂಭವಾಗಿದ್ದು, ಮೊದಲ ದಿನ ಜನಸಾಗರವೇ ಸೇರಿತ್ತು!

ಒಂದೆಡೆ ಬಗೆ ಬಗೆಯ ನೃತ್ಯಗಳ ಪ್ರದರ್ಶನ, ಮತ್ತೊಂದೆಡೆ ಭಾರತೀಯ ನೃತ್ಯ ಪ್ರಾಕಾರಗಳ  ಮಾಹಿತಿ ಕಾರ್ಯಾಗಾರ, ಮಗದೊಂದೆಡೆ ಎಲ್ಲಾ ಬಗೆಯ ನೃತ್ಯ ಪರಿಕರಗಳ ಮಾರಾಟ  ಮಳಿಗೆಗಳು ಹೀಗೆ ಭಾರತೀಯ ಶಾಸ್ತ್ರೀಯ ನೃತ್ಯಕ್ಕೆ ಸಂಬಂಧಿಸಿದ ಸಮಗ್ರವೂ ಒಂದೇ ಕಡೆ  ಜಾತ್ರೆ ರೂಪದಲ್ಲಿ ಮಿಳಿತಗೊಂಡಿವೆ.

ವೈಜಯಂತಿ ನೇತೃತ್ವ: ಶಾಂಭವಿ ನೃತ್ಯ ಶಾಲೆಯ ಸಂಸ್ಥಾಪಕಿ ಖ್ಯಾತ ನೃತ್ಯಪಟು ವೈಜಯಂತಿ  ಕಾಶಿಯವರ ನೇತೃತ್ವದಲ್ಲಿ ಎರಡು ದಿನಗಳ ನೃತ್ಯ ಜಾತ್ರೆಯನ್ನು  ಆಯೋಜಿಸಲಾಗಿದೆ. ದೇಶದ  ನಾನಾ ಭಾಗಗಳಿಂದ ನೂರಾರು ನೃತ್ಯಪಟುಗಳು ನಾನಾ ಶೈಲಿಯ ನೃತ್ಯ ಪ್ರದರ್ಶಿಸಿದರೆ, ಈ  ನೃತ್ಯದ ಸೊಬ ಗನ್ನು ಕಣ್ತುಂಬಿಕೊಳ್ಳಲು ಜನರು ಅತ್ಯಂತ ಉತ್ಸಾಹ, ಸಂಭ್ರಮದಿಂದ  ಪಾಲ್ಗೊಳ್ಳುತ್ತಿದ್ದಾರೆ. ಡಾನ್ಸ್ ಜಾತ್ರೆ ಎಂಬುದು ದೇಶದಲ್ಲಿಯೇ ಪ್ರಪ್ರಥಮ ಪರಿಕಲ್ಪನೆ. ಇದೇ  ಮಾದರಿಯಲ್ಲಿ ಪ್ರತಿ ರಾಜ್ಯದಲ್ಲೂ ಸರ್ಕಾರಗಳು ನೃತ್ಯ ಜಾತ್ರೆಗಳನ್ನು ಆಯೋಜಿಸಿದರೆ ಭಾರತೀಯ  ನೃತ್ಯ ಮತ್ತು ಕಲಾ ಪರಂಪರೆ ಹಾಗೂ ನಮ್ಮ ಸಂಸ್ಕೃತಿಗಳನ್ನು ಪರಿಚಯಿಸಿದಂತಾಗುತ್ತದೆ. ಎಲ್ಲ ಕಲೆಗಳ ಸೊಗಡಿನ ಪರಿಚಯವೂ ನಮ್ಮ ಮಕ್ಕಳಿಗೆ ಆಗುತ್ತದೆ.
●ವೈಜಯಂತಿ ಕಾಶಿ ಶಾಂಭವಿ ನೃತ್ಯ ಶಾಲೆ ಸಂಸ್ಥಾಪಕಿ

ನೃತ್ಯಪರಿಕರ ಮಾರಾಟ ಮಳಿಗೆಗಳು
ನೃತ್ಯ ಮಾಡುವವರಿಗೆ ಬೇಕಾದ ಪ್ರಾಕ್ಟೀಸ್ ಸೀರೆ, ಕತ್ತು ಮತ್ತು ಕಿವಿಗೆ ಧರಿಸುವ ಬಗೆ ಬಗೆಯ ನೃತ್ಯದ ಆಭರಣಗಳು, ಬಿಂದಿ, ಲಿಪ್ ಸ್ಟಿಕ್ ಸೇರಿದಂತೆ ಮೇಕಪ್ ಸಾಮಗ್ರಿಗಳು, ಡಾಬು, ಬಳೆ,  ಳ್ಬಳೆ ಹೀಗೆ ಎಲ್ಲಾ ಬಗೆಯ ನೃತ್ಯದ ಪರಿಕರಗಳನ್ನು ಮಾರಾಟ ಮಾಡಲೆಂದೇ 30 ಮಳಿಗೆಗಳನ್ನು  ರೆಯಲಾಗಿದೆ. ಇದಲ್ಲದೆ ರಾಜಸ್ತಾನಿ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳ  ಸ್ತ್ರಗಳು, ಮಧುಬನಿ ಪೇಂಟಿಂಗ್ ಹೀಗೆ ಎಲ್ಲವೂ `ಮುಂದಿನ ಪೀಳಿಗೆ ನೃತ್ಯದಂತಹ ಕಲಾಪ್ರಕಾರ ಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗಲಿ ಎಂಬ ಉದ್ದೇಶ ಒಂದೆಡೆಯಾದರೆ, ಪ್ರತಿಯೊಬ್ಬರಲ್ಲೂ  ಒಂದೊಂದು ಕಲಾ ಪ್ರತಿಭೆ ಅಡಗಿರುತ್ತದೆ. ಆದರೆ, ಕೆಲವರಿಗೆ ಅದಕ್ಕೆ ರೂಪ ಕೊಡುವುದು ಹೇಗೆ  ಬುದು ತಿಳಿದಿರುವುದಿಲ್ಲ. ಇನ್ನು ಕೆಲವರಿಗೆ ನೃತ್ಯದಲ್ಲಿ ಆಸಕ್ತಿ ಇರುತ್ತ ದೆ. ಆದರೆ, ಎಲ್ಲರಿಗೂ  ನೃತ್ಯ ದಲ್ಲಿ ಸಾಧನೆಗೈಯ್ಯಲು ಸಾಧ್ಯವಿಲ್ಲ. ಇಂತಹ ಆಸಕ್ತರು ನೃತ್ಯಕ್ಕೆ ಸಂಬಂಧಿಸಿದ ಇತರೆ  ಉದ್ಯಮದಲ್ಲಿ ತೊಡಗಿಸಿಕೊಳ್ಳಲು ನೆರವಾಗಲಿ ಎಂಬ ಉದ್ದೇಶದಿಂದ ಈ ಡ್ಯಾನ್ಸ್ ಜಾತ್ರೆಯನ್ನು  ಕಳೆದ ಐದು ವರ್ಷಗಳಿಂದ ಏರ್ಪಡಿಸುತ್ತಿದ್ದೇವೆ' ಎಂದು ವೈಜಯಂತಿ ಕಾಶಿ  ವಿವರಿಸಿದರು.

ಕಾರ್ಯಾಗಾರಗಳಿಗೆ ವೇದಿಕೆ: ಕಥಕ್, ಮೋಹಿನಿ ಅಟ್ಟಂ, ಫಿಟ್ ನೆಸ್ ಡ್ಯಾನ್ಸ್, ಕೊನ್ನ ಕ್ಕೊಲ್,  ಸಾಂಪ್ರದಾಯಿಕ ನೃತ್ಯ, ಸಮಕಾಲೀನ ನೃತ್ಯ, ಭರತನಾಟ್ಯ, ಕೂಚಿಪುಡಿ ಹೀಗೆ ನಾನಾ ಬಗೆಯ  ನೃತ್ಯ ಪ್ರಾಕಾರಗಳ ಕುರಿತು ಆಯಾ ನೃತ್ಯ ತಜ್ಞರಿಂದ ಇಡೀ ದಿನ ಪರಿಷತ್‍ನ  ಸಭಾಂಗಣದಲ್ಲಿ ಕಾರ್ಯಾಗಾರ ಗಳನ್ನು ಏರ್ಪಡಿಸಲಾಗಿತ್ತು. ಇಲ್ಲಿ ನೃತ್ಯ ಪಟುಗಳು ಹಾಗೂ  ಅವರ ಪೋಷಕರು ಮತ್ತು ಇತರ ಆಸಕ್ತರು ಶ್ರದ್ಧೆಯಿಂದ ಪಾಲ್ಗೊಂಡು ಮಾಹಿತಿ ಪಡೆದರು. ಈ ಕಾರ್ಯಾಗಾರಗಳು, ನೃತ್ಯ ಸ್ಪರ್ಧೆಗಳು ಮತ್ತು ಮಾರಾಟ ವ್ಯವಸ್ಥೆ ಭಾನುವಾರವೂ ಮುಂದುವರಿಯಲಿದ್ದು ಸಾರ್ವಜನಿಕರಿಗೆ ಪ್ರವೇಶ ಉಚಿತ.

ಜಾತ್ರೆ ವಿಶೇಷತೆ: ಜಾತ್ರೆಯೆಂದರೆ ಬಗೆ ಬಗೆ ಸಿಹಿ ತಿನಿಸುಗಳು, ಆಟಿಕೆಗಳು, ಅಲಂಕಾರಿಕ ವಸ್ತುಗಳು ನೆನಪಿಗೆ ಬರುತ್ತದೆ. ಇಂತಹ ಜಾತ್ರೆಗಳು ಸಾರ್ವಜನಿಕರನ್ನು ಖುಷಿಪಡಿಸಿದರೆ ನೃತ್ಯ  ಜಾತ್ರೆ ಕಲಾರಸಿಕರ ಮನವನ್ನು ಗೆಲ್ಲುವಂತಿತ್ತು. ಚಿತ್ರಕಲಾ ಪರಿಷತ್ ನ ತೆರೆದ ಆವರಣದಲ್ಲಿ  ಳಗ್ಗೆಯಿಂದ ಸಂಜೆಯವರೆಗೆ ನಾನಾ ನೃತ್ಯ ಪಟುಗಳಿಂದ ನೃತ್ಯ ಪ್ರದರ್ಶನ. ಇದರಲ್ಲಿ ಕಥಕ್,  ಭರತನಾಟ್ಯ, ಕುಟಿಯಟ್ಟಂ, ಮಣಿಪುರಿ, ಕೂಚಿಪುಡಿ, ಝುಂಬಾ, ಫಿಟ್ ನೆಸ್ ಡ್ಯಾನ್ಸ್ ಹೀಗೆ ಬಗೆ  ಗೆಯ ನೃತ್ಯ ಸ್ಪರ್ಧೆಗಳು ನಡೆಯುತ್ತಿವೆ. ಜೂನಿಯರ್ಸ್ ಮತ್ತು ಸೀನಿಯರ್ಸ್ ವಿಭಾಗದಲ್ಲಿ  ಒಟ್ಟಾರೆ  8 ತಂಡಗಳು ಭಾಗವಹಿಸುತ್ತಿದ್ದು, ಎರಡು ದಿನಗಳ ಜಾತ್ರೆಯಲ್ಲಿ ಒಟ್ಟಾರೆ ಸುಮಾರು  500 ನೃತ್ಯ ಸ್ಪರ್ಧಿಗಳು ಭಾಗವಹಿಸುತ್ತಿರುವುದು ಜಾತ್ರೆಯ ವಿಶೇಷ. ನೃತ್ಯದಲ್ಲಿ ಏನೇನು  ಕೋರ್ಸ್ ಗಳಿವೆ, ಎಲ್ಲೆಲ್ಲಿ ಲಭ್ಯ ಎಂಬ ಮಾಹಿತಿ ನೀಡಲೆಂದೇ ಅಲೈಯನ್ಸ್ ವಿವಿ ಮಳಿಗೆ ತೆರೆದಿದೆ.  ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಮಳಿಗೆ ತೆರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com