ಕಡಿಮೆ ಮಕ್ಕಳ ಶಾಲೆ ಮಾನ್ಯತೆ ರದ್ದು

ಮುಂದಿನ ಶೈಕ್ಷಣಿಕ ವರ್ಷ (2016-17) ವರ್ಷದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗಲು ಖಾಸಗಿ ಶಾಲೆಯಿಂದ ಕನಿಷ್ಠ 25 ವಿದ್ಯಾರ್ಥಿಗಳು ಇದ್ದರೆ ಮಾತ್ರ ಪರೀಕ್ಷೆಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂದಿನ ಶೈಕ್ಷಣಿಕ ವರ್ಷ (2016-17) ವರ್ಷದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗಲು ಖಾಸಗಿ ಶಾಲೆಯಿಂದ ಕನಿಷ್ಠ 25 ವಿದ್ಯಾರ್ಥಿಗಳು ಇದ್ದರೆ ಮಾತ್ರ ಪರೀಕ್ಷೆಗೆ ಅವಕಾಶ. ಒಂದು ವೇಳೆ 25 ವಿದ್ಯಾರ್ಥಿಗಳಿಗಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿದ್ದಲ್ಲಿ 9ನೇ ತರಗತಿಯ ಪ್ರವೇಶವನ್ನೇ ತಿರಸ್ಕರಿಸಲಾಗುತ್ತದೆ.

2015-16ನೇ ಸಾಲಿಗೆ ಮಾನ್ಯತೆ ಪಡೆದ ಪ್ರೌಢಶಾಲೆಗಳಲ್ಲಿ  ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕನಿಷ್ಟ 25ಕ್ಕಿಂತ ಕಡಿಮೆ ಇದ್ದರೂ ಸಹ ವಿದ್ಯಾರ್ಥಿಗಳ  ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲಾ ಸಂಕೇತ ನೀಡಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಲಿದೆ. ಆದರೆ  2016--17ನೇ ಸಾಲಿನಿಂದ ಅವಕಾಶ ನೀಡದಿರಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಶಿಕ್ಷಣ ಕಾಯ್ದೆ- 1983ರ ಸೆಕ್ಷನ್ 39ರನ್ವಯ ಕ್ರಮಕ್ಕೆ ಮುಂದಾಗುತ್ತಿದ್ದು, 2016-17ನೇ ಸಾಲಿ-ನಿಂದ ಅನ್ವಯವಾಗುವಂತೆ 9ನೇ ತರಗತಿಯ ಮಾನ್ಯತೆ ರದ್ದುಗೊಳಿಸಲಾಗುವುದು. ಖಾಸಗಿ ಪ್ರೌಢಶಾಲೆಗಳಲ್ಲಿ 10ನೇ ತರಗತಿಯ ದಾಖಲಾತಿ ಸಂಖ್ಯೆ ಕನಿಷ್ಠ 25ಕ್ಕಿಂತ ಕಡಿಮೆ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸುವಂತೆ ಸೂಚನೆ ನೀಡಿದೆ.

ಕಾಯ್ದೆಯಲ್ಲಿ ಅವಕಾಶವಿಲ್ಲದಿದ್ದರೂ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕನಿಷ್ಠ ದಾಖಲಾತಿ ಇಲ್ಲದ ಶಾಲಾ ಮಕ್ಕಳನ್ನೂ 2016ರ ಮಾರ್ಚ್ ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲಾ ಅಭ್ಯರ್ಥಿಗಳೆಂದೇ (ರೆಗ್ಯುಲರ್ ಸ್ಟೂಡೆಂಟ್ಸ್) ಪರಿಗಣಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿರುವ ಸರ್ಕಾರ, ಈ ಶಾಲೆಗಳು ಮಾಡಿರುವ ತಪ್ಪಿಗೆ 2016-17ನೇ ಶೈಕ್ಷಣಿಕ ಸಾಲಿನಲ್ಲಿ 9ನೇ ತರಗತಿಗೆ ಯಾವುದೇ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಅವಕಾಶ ನೀಡದೆ ಅವುಗಳ ಮಾನ್ಯತೆ ರದ್ದುಪಡಿಸುವಂತೆ ಆದೇಶಿಸಿದೆ. 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 3 ಸಾವಿರ ಶಾಲೆಗಳು ಮಾನ್ಯತೆ ಇಲ್ಲದೆಯೇ ಪರೀಕ್ಷೆ ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ  ಪರೀಕ್ಷಾ  ಮಂಡಳಿ ಮೊರೆ ಹೋಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com