ಶ್ರೀಗಂಧದ ಕೊರತೆ ನಿಜ ಎಂದು ಒಪ್ಪಿಕೊಂಡ ಕಾರ್ಖಾನೆ ಅಧ್ಯಕ್ಷೆ : ಕೆಎಸ್‍ಡಿಎಲ್ ಮುಚ್ಚಲ್ಲ

ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಕೆಎಸ್‍ಡಿಎಸ್‍ನ ಅಧ್ಯಕ್ಷ ವೆರೋನಿಕಾ ಕರ್ನೇಲಿಯೋ ಸ್ಪಷ್ಟಪಡಿಸಿದ್ದಾರೆ.
ವೆರೋನಿಕಾ ಕರ್ನೇಲಿಯೋ
ವೆರೋನಿಕಾ ಕರ್ನೇಲಿಯೋ

ಬೆಂಗಳೂರು:  ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‍ಡಿಎಲ್) ಶ್ರೀಗಂಧದ ಕೊರತೆ ಎದುರಿಸುತ್ತಿರುವುದು ನಿಜ. ಈ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳಿಂದ ಗಂಧ ತರಿಸಿಕೊಳ್ಳಲಾಗುತ್ತಿದೆ. ಹಾಗಾಗಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಕೆಎಸ್‍ಡಿಎಸ್‍ನ ಅಧ್ಯಕ್ಷ ವೆರೋನಿಕಾ ಕರ್ನೇಲಿಯೋ ಸ್ಪಷ್ಟಪಡಿಸಿದ್ದಾರೆ.

ಕಾರ್ಖಾನೆಗೆ ಬೇಕಾದಷ್ಟು ಶ್ರೀಗಂಧ ರಾಜ್ಯದಿಂದ ಪೂರೈಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಗಂಧವನ್ನು ಹೊರ ರಾಜ್ಯಗಳಿಂದ ತರಿಸಿಕೊಳ್ಳಲಾಗುತ್ತಿದೆ. ವರ್ಷಕ್ಕೆ 120 ಟನ್ ಶ್ರೀಗಂಧ ಬೇಕಾಗುತ್ತದೆ. ಆದರಿಂದ 2400 ಕೆ.ಜಿ ಎಣ್ಣೆ ತೆಗೆಯಲಾಗುತ್ತದೆ ಸಮಸ್ಯೆ ಸರಿದೂಗಿಸಲಾಗಿದೆ.

ಮುಂದಿನ ವರ್ಷಕ್ಕೂ ಆಗುವಷ್ಟು 2400 ಕೆ.ಜಿ.ಎಣ್ಣೆ ಸಹ ತಯಾರಿಸಿಡಲಾಗಿದೆ. ಹಾಗಾಗಿ ಕಾರ್ಖಾನೆ ಮುಚ್ಚುವ ಪ್ರಶ್ನೆಯೇ ಇಲ್ಲ. ರಾಜ್ಯದ ಮೈಸೂರು, ಶಿವಮೊಗ್ಗ, ಕೇರಳದ ಮಣಿಯೂರು, ತಮಿಳುನಾಡಿನ ಸೇಲಂ ನಿಂದ ಶ್ರೀಗಂಧ ತರಿಸಲಾಗುತ್ತಿದೆ ಎಂದು ತಿಳಿಸಿದರು.

ಕೆಎಸ್‍ಡಿಎಲ್ ಮಾರುಕಟ್ಟೆ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ಸುವರ್ಣ ಕುಮಾರ್ ಮಾತನಾಡಿ, ಈ ಐತಿಹಾಸಿಕ ಮತ್ತು ಹೆಮ್ಮೆಯ ಸಂಸ್ಥೆ 2016ರ ಮೇ 10 ರಂದು 100 ವರ್ಷ ಪೂರೈಸುತ್ತಿದೆ. ಸಂಸ್ಥೆಯು ವರ್ಷ ದಿಂದ ವರ್ಷಕ್ಕೆ ಬೆಳೆಯುತ್ತಿದೆ. 2014-15ನೇ ಸಾಲಿನಲ್ಲಿ ಈ ಸಂಸ್ಥೆಯು ರು. 407 ಕೋಟಿ ವಹಿ ವಾಟು ನಡೆಸಿದ್ದು, ಕಳೆದ ಬಾರಿಗೆ ಹೋಲಿಸಿದರೆ, ಈ ಸಾಲಿನಲ್ಲಿ ಸಂಸ್ಥೆಯು 2014-15ನೇ ಸಾಲಿನಲ್ಲಿ 45.19 ಕೋಟಿ ಲಾಭ ಗಳಿಸಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com