ಆರ್‍ಟಿಇ ಕಾಯ್ದೆ : ತನ್ನ ನಿಯಮ ತಾನೇ ಉಲ್ಲಂಘಿಸಿದ ಸರ್ಕಾರ

ಪ್ರತಿ ವರ್ಷ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾಗುವ ಶೇ.25 ಮಕ್ಕಳ ಪ್ರವೇಶ ಶುಲ್ಕವನ್ನು ಸರ್ಕಾರ ತುಂಬುತ್ತದೆ. ಈ ಶುಲ್ಕ ನಿಯಮದಂತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಗೆ ತಾನೇ ರೂಪಿಸಿ ಕೊಂಡ ನಿಯಮವನ್ನು ಸರ್ಕಾರವೇ ಉಲ್ಲಂಘಿಸಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುವುದು ಸ್ಪಷ್ಟವಾಗಿದೆ. ಆಗಿದ್ದಿಷ್ಟು, ಪ್ರತಿ ವರ್ಷ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾಗುವ ಶೇ.25 ಮಕ್ಕಳ ಪ್ರವೇಶ ಶುಲ್ಕವನ್ನು ಸರ್ಕಾರ ತುಂಬುತ್ತದೆ. ಈ ಶುಲ್ಕ ನಿಯಮದಂತೆ ಪ್ರತಿ ವರ್ಷ ಪರಿಷ್ಕರಣೆಯಾಗಬೇಕು. ಆದರೆ 2012-13 ರಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕ ಮುಂದಿನ ವರ್ಷಗಳಲ್ಲಿ ಪರಿಷ್ಕರಣೆಗೊಂಡಿಲ್ಲ.

ಈ ವಿಚಾರವನ್ನಿಟ್ಟುಕೊಂಡು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಕ್ಯಾಮ್ಸ್  ಕೋರ್ಟ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ. ಕಾಮ್ಸ್ ಸಂಘಟನಾ ಕಾರ್ಯದರ್ಶಿ ಶಶಿಕುಮಾರ್, ರಾಜ್ಯ ಸರ್ಕಾರವು ಒಮ್ಮೆ ನಿಗದಿ ಮಾಡಿದ ಶುಲ್ಕವನ್ನು ಪರಿಷ್ಕರಿಸಿಲ್ಲ. ಸಮಯಕ್ಕೆ ಸರಿಯಾಗಿ ಶುಲ್ಕವನ್ನು ಮರುಪಾವತಿ ಮಾಡುತ್ತಿಲ್ಲ. ಇದು ಸರ್ಕಾರವೇ ರೂಪಿಸಿದ ನಿಯಮದ ಉಲ್ಲಂಘನೆ ಎಂದರು.

2012-13ರ ನಂತರ ಸರ್ಕಾರ ತನ್ನ ನೌಕರರಿಗೆ ಶೇ.35ರಷ್ಟು ಡಿಎ ಹೆಚ್ಚಿಸಿದೆ. ಸರ್ಕಾರದ ವ್ಯಾಪ್ತಿ ಯ ನವೋದಯ ಶಾಲೆಯಲ್ಲಿನ ಪ್ರತಿ ಮಗುವಿಗೆ 81 ಸಾವಿರದಷ್ಟು ವೆಚ್ಚ ಮಾಡುತ್ತದೆ (ಊಟ ವಸತಿ ಸೇರಿ). ಅದೇ ನಮಗೆ ನೀಡುವುದು 11 ಸಾವಿರದಷ್ಟು. ನಾವು ಪ್ರಯಾಣ ಸೇರಿ ಎಲ್ಲಾ ವೆಚ್ಚ ನೀಡಬೇಕೆಂದು ಹೇಳುತ್ತದೆ. ಸರ್ಕಾ-ರದ ವಾದವೇ ಅರ್ಥವಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com