ವಿದೇಶಿ ಯುವತಿಗೆ ಲೈಂಗಿಕ ಕಿರುಕುಳ

ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದ ಅಮೆರಿಕ ವಿದ್ಯಾರ್ಥಿನಿ ಮೇಲೆ ಅಲ್ಲಿನ ಸಿಬ್ಬಂದಿಯೇ ಲೈಂಗಿಕ ಕಿರುಕುಳ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದ ಅಮೆರಿಕ ವಿದ್ಯಾರ್ಥಿನಿ ಮೇಲೆ ಅಲ್ಲಿನ ಸಿಬ್ಬಂದಿಯೇ  ಲೈಂಗಿಕ ಕಿರುಕುಳ ನೀಡಿದ್ದಾನೆ. ಚಿಕಿತ್ಸೆ ನೆಪದಲ್ಲಿ ಅನಾಚಾರ ಮಾಡಿದ  ಶುಶ್ರೂಷಕ ಈಗ ಬಂದಿಯಾಗಿದ್ದಾನೆ.

ಕ್ಯಾಲಿಫೋರ್ನಿಯಾದಿಂದ ಮೈಸೂರಿಗೆ 10 ವಿದ್ಯಾರ್ಥಿನಿಯರು ಅಧ್ಯಯನ ಪ್ರವಾಸಕ್ಕೆ ಬಂದಿದ್ದರು. ಈ ಪೈಕಿ 20 ವರ್ಷದ ಯುವತಿಯೊಬ್ಬಳಿಗೆ ನ.6ರಂದು ಹೊಟ್ಟೆ ನೋವು  ಕಾಣಿಸಿಕೊಂಡಿತ್ತು. ಹೀಗಾಗಿ ಆಕೆಯನ್ನು ಬೆಂಗಳೂರು-ಮೈಸೂರು ರಸ್ತೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಚಿಕಿತ್ಸೆ ನಂತರ ಶುಶ್ರೂಷಕ ಸುಮಿತ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆಕೆ  ಆರೋಪಿಸಿದ್ದಳು.

ಸುಮಿತ್ ವಜಾ:
ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಮೇಲ್ಲಹಳ್ಳಿ ನಿವಾಸಿ ಸುಮಿತ್ (24)    ಬಂಧಿತ. ಈತ ಮೈಸೂರು- ಬೆಂಗಳೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ  ಶುಶ್ರೂಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಸುಮಿತ್ ನನ್ನು  ಕೆಲಸದಿಂದ ವಜಾ ಮಾಡಿದೆ. ನವೆಂಬರ್ 6 ರಂದು ತುರ್ತು ಚಿಕಿತ್ಸಾ ಕೊಠಡಿಗೆ ಮಹಿಳಾ ರೋಗಿಯೊಬ್ಬರು ದಾಖಲಾಗಿದ್ದು,  ಅವರಿಗೆ ಮಹಿಳಾ ವೈದ್ಯರು ಚಿಕಿತ್ಸೆ ನೀಡಿದ್ದರು. ಈ ವೇಳೆ  ಪುರುಷ  ಶುಶ್ರೂಷಕರೂ ಇದ್ದರು. ಮರು ದಿನ ಆಕೆ ಆಸ್ಪತ್ರೆಯ ಆಡಳಿತ ಕಚೇರಿಗೆ ಭೇಟಿ ನೀಡಿ,  ತಪಾಸಣೆ ಹಂತದಲ್ಲಿ  ಹಾಜರಿದ್ದ ಪುರುಷ ಶುಶ್ರೂಷಕ ಅನುಚಿತವಾಗಿ ಪರೀಕ್ಷಿಸಿದರು ಎಂದು  ದೂರು ದಾಖಲಿಸಿದರು. ಈ ದೂರನ್ನು ಆಸ್ಪತ್ರೆಯ ಶಿಷ್ಟಾಚಾರ ಅನುಸಾರ ಲೈಂಗಿಕ ದೌರ್ಜನ್ಯ  ಪ್ರಕರಣ ವಿಚಾರಣೆ ಸಮಿತಿ ನೀಡಿದ ವರದಿ ಆಧರಿಸಿ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಈ ಮಾಹಿತಿಯನ್ನು ಕರ್ನಾಟಕ ರಾಜ್ಯ ನರ್ಸಿಂಗ್ ಶಾಲೆ ಗಮನಕ್ಕೂ  ತರಲಾಗಿದೆ. ದೂರುದಾರರಿಗೆ ನ್ಯಾಯ  ಒದಗಿಸಲು ಪೊಲೀಸ್ ತನಿಖೆಗೆ   ಸಂಪೂರ್ಣ ಸಹಕಾರ     ನೀಡುವುದಾಗಿ ಆಸ್ಪತ್ರೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.    

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com