• Tag results for ಆಸ್ಪತ್ರೆ

ಬೆಂಗಳೂರು ರೈಲ್ವೆ ಆಸ್ಪತ್ರೆ ಹಾಗೂ ಕೇಂದ್ರಗಳಲ್ಲಿ ಕೋವಿಡ್-19 ಲಸಿಕೆ ಅಭಿಯಾನ ತಾತ್ಕಾಲಿಕ ಸ್ಥಗಿತ 

ಸರ್ಕಾರದಿಂದ ಬೆಂಗಳೂರು ರೈಲ್ವೆ ವಿಭಾಗಕ್ಕೆ ಲಸಿಕೆಗಳ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ರೈಲ್ವೆ ಆಸ್ಪತ್ರೆ ಹಾಗೂ ಅದರ ಕೇಂದ್ರಗಳಲ್ಲಿ ಲಸಿಕೆ ಅಭಿಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

published on : 13th May 2021

ಅಪೋಲೊ ಆಸ್ಪತ್ರೆಗೆ ಕೊಡುಗೆಯಾಗಿ 1,500 ಕೇಕ್ ಕೊಟ್ಟ ಕಿಚ್ಚ ಸುದೀಪ್! ವಿಡಿಯೋ

ಇತ್ತೀಚಿಗಷ್ಟೆ ವೈದ್ಯರು ಹಾಗೂ ಶುಶ್ರೂಷಕರ ಸೇವಾಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ನಟ ಕಿಚ್ಚ ಸುದೀಪ್, ಅಪೋಲೊ ಆಸ್ಪತ್ರೆಗೆ ಸುಮಾರು 1,500 ಕೇಕ್ ಮಾಡಿ ಕಳುಹಿಸಿಕೊಟ್ಟಿದ್ದಾರೆ.

published on : 13th May 2021

ದುಃಖದಲ್ಲೂ ಕೋವಿಡ್ ಆಸ್ಪತ್ರೆ ಪ್ರಾರಂಭಿಸಿ ನೊಂದವರ ಕಣ್ಣೀರೊರೆಸಲು ಮುಂದಾದ ಡಿಸಿಎಂ ಸವದಿ

ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಅಣ್ಣನ ಮಗ ವಿನೋದ್ ಸವದಿ ಬುಧವಾರ ಕೊರೊನಾಗೆ ಬಲಿಯಾಗಿದ್ದು, ಇಡೀ ಕುಟುಂಬ ದುಃಖದಲ್ಲಿದೆ. ಈ ಮಧ್ಯೆ ತಮ್ಮ ಅಣ್ಣನ ಮಗನಿಗೆ ಉಂಟಾದ ಪರಿಸ್ಥಿತಿ ಬೇರೆಯವರಿಗೆ ಬರಬಾರದು ಎಂದು ಲಕ್ಷ್ಮಣ ಸವದಿ ಅವರು ಗುರುವಾರ ಅಥಣಿಯಲ್ಲಿ ಆಕ್ಸಿಜನ್ ಸೆಂಟರ್ ಮತ್ತು ಕೋವಿಡ್ ಚಿಕಿತ್ಸಾ ಆಸ್ಪತ್ರೆ ಸ್ಥಾಪಿಸುವ ಕಾರ್ಯದಲ್ಲಿ ನಿರತರಾಗಿದ್ದು

published on : 13th May 2021

ತೂತುಕುಡಿ ಸ್ಟೆರ್ಲೈಟ್‌ನಲ್ಲಿ ಆಮ್ಲಜನಕ ಉತ್ಪಾದನೆ ಆರಂಭ: ತಿರುನಲ್ವೇಲಿ ಆಸ್ಪತ್ರೆಗೆ 4.82 ಟನ್ ಆಕ್ಸಿಜನ್ ರವಾನೆ

ತೂತುಕುಡಿಯಲ್ಲಿರುವ ವೇದಾಂತ ಕಂಪನಿಯ ಸ್ಟೆರ್ಲೈಟ್‌ ತಾಮ್ರದ ಕಾರ್ಖಾನೆಯಲ್ಲಿ ಆಮ್ಲಜನಕ ಉತ್ಪಾದನೆ ಆರಂಭವಾಗಿದ್ದು, ಉತ್ಪಾದನೆಗೊಂಡ ಆಮ್ಲಜನಕವನ್ನು ಹೊತ್ತ ಮೊದಲ ಟ್ಯಾಂಕರ್‌ ಅನ್ನು ಗುರುವಾರ ತಿರುನಲ್ವೇಲಿ ಆಸ್ಪತ್ರೆಗೆ ರವಾನೆ ಮಾಡಲಾಯಿತು.

published on : 13th May 2021

ಗಂಭೀರ ಸ್ಥಿತಿಯಲ್ಲಿದ್ದ ತನ್ನ ತಾಯಿಯ ಜೀವ ಉಳಿಸಿದ ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಮಗನಿಂದ ಉಚಿತ ವೈದ್ಯ ಸೇವೆ!

ಗಂಭೀರ ಸ್ಥಿತಿಯಲ್ಲಿದ್ದ ತನ್ನ ತಾಯಿ ಜೀವ ಉಳಿದ ಮೈಸೂರಿನ ಕೋವಿಡ್ ಆಸ್ಪತ್ರೆಗೆ ಚಂಡೀಗಢದಿಂದ ಹಿಂದಿರುಗಿರುವ ಡಾ. ಹರ್ಷ ಎಂಬುವರು ಸ್ವಯಂಪ್ರೇರಿತರಾಗಿ ಉಚಿತ ಸೇವೆ ಸಲ್ಲಿಸಲು ತೀರ್ಮಾನಿಸಿದ್ದಾರೆ. 

published on : 13th May 2021

ಕೋವಿಡ್ ಗೆ ತಂದೆ ಬಲಿ: ಆಸ್ಪತ್ರೆ ನಿರ್ಲಕ್ಷ್ಯ ಆರೋಪಿಸಿ ಕುಟುಂಬಸ್ಥರಿಂದ 4 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಯಂತ್ರ ಧ್ವಂಸ

ರೈಲ್ವೆ ಆಸ್ಪತ್ರೆಯಲ್ಲಿ ತಮ್ಮ ತಂದೆಯ ಸಾವಿನ ಕುರಿತಂತೆ ತೀವ್ರ ಅಸಮಾಧಾನಗೊಂಡಿದ್ದ ಅವರ ಹೆಣ್ಣುಮಕ್ಕಳು ಐಸಿಯು ವಾರ್ಡ್‌ನಲ್ಲಿದ್ದ ಸುಮಾರು 4 ಲಕ್ಷ ರೂ ಮೌಲ್ಯದ ಆಕ್ಸಿಜನ್ ಯಂತ್ರವನ್ನು ಧ್ವಂಸ ಮಾಡಿದ್ದಾರೆ ಎಂದು ತಿಳಿದುಬಂದಿದೆ.

published on : 13th May 2021

ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ 6 ವೆಂಟಿಲೇಟರ್ ಅಳವಡಿಕೆ: ಸಚಿವ ಡಾ. ಕೆ.ಸುಧಾಕರ್

ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಅಳವಡಿಕೆ ಹಾಗೂ ಅರವಳಿಕೆ ತಜ್ಞರ ನೇಮಕಕ್ಕೆ ಸೂಚಿಸಲಾಗಿದೆ. ಒಟ್ಟು 2,480 ವೈದ್ಯರ ನೇಮಕವೂ ಶೀಘ್ರ ಆಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.

published on : 12th May 2021

ಕೋವಿಡ್-19: ಸೇನಾ ಆಸ್ಪತ್ರೆಗಳಲ್ಲಿ 5 ಸಾವಿರಕ್ಕೂ ಅಧಿಕ ಸೈನಿಕರಿಗೆ ಚಿಕಿತ್ಸೆ!

ಮಾರಕ ಕೊರೋನಾ ವೈರಸ್ ಎರಡನೇ ಅಲೆ ಜನ ಸಾಮಾನ್ಯರ ಮೇಲಷ್ಟೇ ಅಲ್ಲ... ದೇಶ ಕಾಯುವ ನಮ್ಮ ಬಲಿಷ್ಠ ಸೈನಿಕರನ್ನೂ ಹೈರಾಣಾಗಿಸಿದ್ದು ದೇಶದ ಮೂಲೆ ಮೂಲೆಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಸೈನಿಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

published on : 12th May 2021

ಹಾಸಿಗೆ ಬಿಟ್ಟು ಕೊಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ: ಗೌರವ್ ಗುಪ್ತ

ಬಿಬಿಎಂಪಿಯ ಪ್ರತಿ ವಲದಲ್ಲಿರುವ ಸಣ್ಣ ಆಸ್ಪತ್ರೆಗಳ ಮೇಲೆ ನಿಗಾ ವಹಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. 

published on : 12th May 2021

ಗುಣಮುಖರಾದರೂ ಬೆಡ್ ಬಿಟ್ಟುಕೊಡದ ಕೊರೋನಾ ಸೋಂಕಿತರ ವಿರುದ್ಧ ಸಿಎಂ ಯಡಿಯೂರಪ್ಪ ಗರಂ!

ಕೊರೋನಾ ಸೋಂಕಿನಿಂದ ಗುಣಮುಖರಾದರೂ ಆಸ್ಪತ್ರೆಯಲ್ಲಿಯೇ ಇರುವವರ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

published on : 12th May 2021

ಗೋವಾ ಆಸ್ಪತ್ರೆಯಲ್ಲಿ 26 ಕೋವಿಡ್ ರೋಗಿಗಳು ಸಾವು: ಆಮ್ಲಜನಕ ಕೊರತೆ ಆರೋಪ

26 ಕೋವಿಡ್ -19 ರೋಗಿಗಳು ಗೋವಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಮುಂಜಾನೆ ಸಾವನ್ನಪ್ಪಿದ್ದಾರೆ ಮತ್ತು ನಿಖರವಾದ ಕಾರಣ ತಿಳಿಯಲು ಹೈಕೋರ್ಟ್‌ನಿಂದ ತನಿಖೆಗೆ ಕೋರಿರುವುದಾಗಿ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಂಗಳವಾರ ಹೇಳಿದ್ದಾರೆ. 

published on : 11th May 2021

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸ್ಥಾಪನೆ: ಬೆಳಗಾವಿ ಆಸ್ಪತ್ರೆಯಲ್ಲಿ ಸ್ಥಳೀಯರಿಂದ ವೈದ್ಯರ ಮೇಲೆ ಹಲ್ಲೆ

ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ.

published on : 11th May 2021

ತಿರುಪತಿ: ರೂಯಿಯಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ವ್ಯತ್ಯಯ; 11 ಕೋವಿಡ್-19 ರೋಗಿಗಳು ಸಾವು!

ಆಕ್ಸಿಜನ್ ಪೂರೈಕೆ ವ್ಯತ್ಯಯಗೊಂಡ ಪರಿಣಾಮ ಕೋವಿಡ್-19 ಗೆ ಚಿಕಿತ್ಸೆ ಪಡೆಯುತ್ತಿದ್ದ 11 ಮಂದಿ ಜೀವಕಳೆದುಕೊಂಡಿರುವ ಘಟನೆ ತಿರುಪತಿಯ ಎಸ್ ವಿ ಆರ್ ರೂಯಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ವರದಿಯಾಗಿದೆ. 

published on : 11th May 2021

ಕೋವಿಡ್-19: ಸೋಂಕಿತರ ಆಸ್ಪತ್ರೆ ದಾಖಲು, ಸ್ಥಳಾಂತರ, ಡಿಸ್ಚಾರ್ಜ್ ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು, ಸ್ಥಳಾಂತರ ಮಾಡಲು ಹಾಗೂ ಆಸ್ಪತ್ರೆಗಳಿಂದ ಬಿಡುಗಡೆ ಮಾಡುವ ಕುರಿತು ರಾಜ್ಯ  ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 

published on : 10th May 2021

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್'ಗಳ ಲಭ್ಯತೆ ಸ್ಥಿತಿಗತಿ ತಿಳಿಯಲು ವೆಬ್ ಪೋರ್ಟಲ್ ಆರಂಭ

ಖಾಸಗಿ ಆಸ್ಪತ್ರೆಗಳಲ್ಲಿನ ಕೋವಿಡ್ ರೋಗಿಗಳಿಗೆ ಹಾಸಿಗೆಗಳ ಸ್ಥಿತಿಗತಿಯನ್ನು ಕ್ಷಣಕ್ಷಣಕ್ಕೆ ನೀಡುವ ವೆಬ್ ಪೋರ್ಟಲ್ searchmybed ಗೆ ಭಾನುವಾರ ಚಾಲನೆ ದೊರೆತಿದೆ. 

published on : 10th May 2021
1 2 3 4 5 6 >