ಒಡಿಶಾ: Airport ನಲ್ಲಿ ಇಬ್ಬರು ಬಾಂಗ್ಲಾದೇಶಿಯರಿಗೆ ಕಿರುಕುಳ; ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ; ವಾಪಸ್ ತೆರಳಿದ ರೋಗಿ!

ಇದಲ್ಲದೆ ಸಂಬಂಧಪಟ್ಟ ಆಸ್ಪತ್ರೆಯು ತೊಂದರೆಯಾಗುವ ಭೀತಿಯಿಂದ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿತು. ಭುವನೇಶ್ವರಕ್ಕೆ ಬಂದಿದ್ದ ಇಬ್ಬರನ್ನು ವಾಪಸ್ ಮುಂಬೈಗೆ ಹಿಂತಿರುಗುವಂತೆ ಒತ್ತಾಯಿಸಲಾಯಿತು ಎಂದು ವರದಿಯಾಗಿದೆ.
ಒಡಿಶಾ: Airport ನಲ್ಲಿ ಇಬ್ಬರು ಬಾಂಗ್ಲಾದೇಶಿಯರಿಗೆ ಕಿರುಕುಳ; ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ; ವಾಪಸ್ ತೆರಳಿದ ರೋಗಿ!
Updated on

ಭುವನೇಶ್ವರ: ವೈದ್ಯಕೀಯ ಚಿಕಿತ್ಸೆಗಾಗಿ ನಗರಕ್ಕೆ ಆಗಮಿಸುತ್ತಿದ್ದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಭಾನುವಾರ ರಾತ್ರಿ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಪಿಐಎ) ತಡೆದಿರುವ ಘಟನೆ ನಡೆಯಿತು.

ಸ್ಥಳೀಯರು ಅವರ ಗುರುತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಂತರ ಅವರನ್ನು ಪೊಲೀಸ್ ಪರಿಶೀಲನೆಗೆ ಒಳಪಡಿಸಲಾಯಿತು. ಇದಲ್ಲದೆ ಸಂಬಂಧಪಟ್ಟ ಆಸ್ಪತ್ರೆಯು ತೊಂದರೆಯಾಗುವ ಭೀತಿಯಿಂದ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿತು. ಭುವನೇಶ್ವರಕ್ಕೆ ಬಂದಿದ್ದ ಇಬ್ಬರನ್ನು ವಾಪಸ್ ಮುಂಬೈಗೆ ಹಿಂತಿರುಗುವಂತೆ ಒತ್ತಾಯಿಸಲಾಯಿತು ಎಂದು ವರದಿಯಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, 49 ಮತ್ತು 35 ವರ್ಷ ವಯಸ್ಸಿನ ಇಬ್ಬರು ಸಹೋದರರು ದುಬೈನಲ್ಲಿ ಚಾಲಕ ಮತ್ತು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಮುಂಬೈಗೆ ಬಂದು ನಂತರ ಒಡಿಶಾಗೆ ಆಗಮಿಸಿದರು. ಹೃದಯಾಘಾತದಿಂದ ಬಳಲುತ್ತಿರುವ ಹಿರಿಯ ಸಹೋದರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿತ್ತು.

ಆಸ್ಪತ್ರೆಯು ವಿಮಾನ ನಿಲ್ದಾಣದಲ್ಲಿ ಅವರನ್ನು ಕರೆ ತರಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿತ್ತು ಎಂದು ವರದಿಯಾಗಿದೆ, ಆದರೆ ಸಂವಹನದ ಕೊರತೆಯಿಂದಾಗಿ ಬರಲಿಲ್ಲ. ಆಂಬ್ಯುಲೆನ್ಸ್ ಬಾರದ ಕಾರಣ, ಇಬ್ಬರೂ ಟ್ಯಾಕ್ಸಿ ಬಾಡಿಗೆಗೆ ಪಡೆಯಲು ಪ್ರಯತ್ನಿಸಿದರು.

ಒಡಿಶಾ: Airport ನಲ್ಲಿ ಇಬ್ಬರು ಬಾಂಗ್ಲಾದೇಶಿಯರಿಗೆ ಕಿರುಕುಳ; ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ; ವಾಪಸ್ ತೆರಳಿದ ರೋಗಿ!
ಬಾಂಗ್ಲಾ ಬಿಕ್ಕಟ್ಟು: '1971ರಲ್ಲೇ ವಶವಾಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ'; ಸಿಲಿಗುರಿ ಕಾರಿಡಾರ್ ಕುರಿತು Sadhguru ಮಾತು!

ಕ್ಯಾಬ್ ಚಾಲಕ ಅವರ ರಾಷ್ಟ್ರೀಯತೆಯ ಬಗ್ಗೆ ವಿಚಾರಿಸಿದಾಗ ಅವರು ಬಾಂಗ್ಲಾದೇಶಿ ನಾಗರಿಕರು ಎಂದು ತಿಳಿದಿದೆ. ಈ ವಿಚಾರವನ್ನು ಅವನು ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಬೇರೆಯವರಿಗೆ ಎಚ್ಚರಿಕೆ ನೀಡಿದನು. ಈ ವೇಳೆ ಸ್ಥಳೀಯರು ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದರು, ಇಬ್ಬರು ಅಕ್ರಮ ವಲಸಿಗರು ಎಂಬ ಅನುಮಾನ ಮೂಡಿತು.

ಅವರನ್ನು ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಪಾಸ್‌ಪೋರ್ಟ್‌ಗಳು ಮತ್ತು ವೀಸಾಗಳು ಸೇರಿದಂತೆ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಲಾಯಿತು. ಆದರೆ ಅವರು ಮಾನ್ಯವಾಗಿವೆ ಎಂದು ಕಂಡುಬಂದಿತು. ಸಂಪೂರ್ಣ ಪರಿಶೀಲನೆಯ ನಂತರ, ಅವರನ್ನು ಬಿಡಲಾಯಿತು ಎಂದು ಉಸ್ತುವಾರಿ ಇನ್ಸ್‌ಪೆಕ್ಟರ್ ರವೀಂದ್ರನಾಥ್ ಮೆಹರ್ ಹೇಳಿದರು.

ಆದಾಗ್ಯೂ, ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಯ ಇತ್ತೀಚಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸ್ಥಳೀಯರ ವರ್ತನೆಯಿಂದಾಗಿ ಖಾಸಗಿ ಆಸ್ಪತ್ರೆ ನಂತರ ಅಸ್ವಸ್ಥ ವ್ಯಕ್ತಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೇರೆ ಯಾವುದೇ ಮಾರ್ಗವಿಲ್ಲದೆ ಸಹೋದರರು ಸೋಮವಾರ ಬೆಳಿಗ್ಗೆ ಮುಂಬೈಗೆ ಮರಳಿದ್ದಾರೆ

ಡಿಸೆಂಬರ್ 24 ರಂದು ಸಂಬಲ್ಪುರದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗನೆಂದು ಶಂಕಿಸಿ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನನ್ನು ದುಷ್ಕರ್ಮಿಗಳ ಗುಂಪೊಂದು ಹೊಡೆದು ಕೊಂದಿತು. ನಂತರ ಈ ಘಟನೆ ನಡೆದಿದೆ. ಒಂದು ದಿನದ ನಂತರ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com