ದರ್ಶನ್ ಡೈಲಾಗ್ ಹೊಡೆಯುತ್ತಾ ಜಿಗಿದು ಕಾಲು ಮುರಿದುಕೊಂಡ ಬಾಲಕ!

ಅವನಿನ್ನು ಆರು ವರ್ಷದ ಬಾಲಕ. ಆದರೂ ಚಿತ್ರ ನಟ ದರ್ಶನ್ ಕಟ್ಟಾ ಅಭಿಮಾನಿ. ಮಾತ್ತೆತ್ತಿದರೆ ದರ್ಶನ್, ನಾನು ಜ್ಯೂನಿಯರ್ ದರ್ಶನ್ ಎಂದೆಲ್ಲ ದಿನದ 24 ಗಂಟೆ ಬಡ...
ದರ್ಶನ್, ಕಟ್ಟಡದಿಂದ ಜಿಗಿತ ಹುಡುಗ
ದರ್ಶನ್, ಕಟ್ಟಡದಿಂದ ಜಿಗಿತ ಹುಡುಗ
Updated on
ಕೊಪ್ಪಳ: ಅವನಿನ್ನು ಆರು ವರ್ಷದ ಬಾಲಕ. ಆದರೂ ಚಿತ್ರ ನಟ ದರ್ಶನ್ ಕಟ್ಟಾ ಅಭಿಮಾನಿ. ಮಾತ್ತೆತ್ತಿದರೆ ದರ್ಶನ್, ನಾನು ಜ್ಯೂನಿಯರ್ ದರ್ಶನ್ ಎಂದೆಲ್ಲ ದಿನದ 24 ಗಂಟೆ ಬಡ ಬಡಿಸುತ್ತಾ, ದರ್ಶನ್ ಅನುಕರಣೆ ಮಾಡುತ್ತಾನೆ. ಈಗ ಮಾಳಿಗೆ ಮೇಲಿಂದ ಜಿಗಿದು ಕಾಲು ಮುರಿದುಕೊಂಡಿದ್ದಾನೆ.
ಹೆಸರು ಅಭಿಷೇಕ ಸಂಗನಗೌಡ ಜಕ್ಲಿ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಕಲಕಬಂಡಿ ಗ್ರಾಮದ ನಿವಾಸಿ. ಒಂದನೇ ತರಗತಿ ವಿದ್ಯಾರ್ಥಿ. ದರ್ಶನ ಎಂದರೆ ಪಂಚಪ್ರಾಣ. ಯಾವುದೇ ಚಾನಲ್ ನಲ್ಲಿಯೂ ದರ್ಶನ ಸಿನಿಮಾ ಬಂದರೆ ತಪ್ಪದೇ ನೋಡುತ್ತಾನೆ. ಮಾತು ಮಾತಿಗೂ ದರ್ಶನ್ ಡೈಲಾಗ್ ಬೇರೆ ಹೊಡೆಯುತ್ತಾನೆ. 
ಆಗಿದ್ದೇನು?: ಕಳೆದ ಭಾನುವಾರ ಮನೆಯಲ್ಲಿ ಯಾರು ಇರಲಿಲ್ಲ. ಓಣಿಯ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ಮನೆಯ ಕಾಂಪೌಂಡ್ ಜಿಗಿದ. ಅದನ್ನು ಇತರ ಸ್ನೇಹಿತರು ಜಿಗಿದರು. ಇದರಿಂದ ಆಕ್ರೋಶಗೊಂಡ ಅಭಿಷೇಕ್ ಈ ದರ್ಶನ್ ಮಾಳಿಗೆಯಿಂದ ಜಿಗಿದರೂ ಏನು ಆಗುವುದಿಲ್ಲ ಎಂದು ಬರಬರನೇ ಮಾಳಿಗೆ ಏರಿ ಜಿಗಿದೇ ಬಿಟ್ಟ. ಮಾಳಿಗೆ ಮೇಲಿಂದ ಜಿಗಿದಿದ್ದೇ ತಡ ಆತನ ಕಾಲು ಮುರಿಯಿತು. ಅಳಲು ಪ್ರಾರಂಭಿಸಿದ ತಕ್ಷಣ ಅಕ್ಕ-ಪಕ್ಕದವರು ಹಾಗೂ ಪಾಲಕರು ಸೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕಾಲಿಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಗುಣವಾಗಲು ಇನ್ನು ಕೆಲ ದಿನ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com