ರಾಜಸ್ವ ಸಂಗ್ರಹದಲ್ಲಿ ಸುಧಾರಣೆ

ಪ್ರಸಕ್ತ ಸಾಲಿನ ಪೂರಕ ಅಂದಾಜುಗಳ 3ನೇ ಕಂತಿನ ಮಂಡನೆಯನ್ನು ಕೈ ಬಿಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿದೆ...
ಸಚಿವ ಟಿ.ಬಿ. ಜಯಚಂದ್ರ
ಸಚಿವ ಟಿ.ಬಿ. ಜಯಚಂದ್ರ

ವಿಧಾನಸಭೆ: ಪ್ರಸಕ್ತ ಸಾಲಿನ ಪೂರಕ ಅಂದಾಜುಗಳ 3ನೇ ಕಂತಿನ ಮಂಡನೆಯನ್ನು ಕೈ ಬಿಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿದೆ.

ಸರ್ಕಾರ ರಾಜಸ್ವ ಸಂಗ್ರಹದಲ್ಲಿ ಸುಧಾರಿಸಿಕೊಂಡಿದ್ದು, ವಿತ್ತೀಯ ಕೊರತೆಯನ್ನು ಸರಿದೂಗಿಸಿಕೊಂಡಿದೆ. ಹೀಗಾಗಿ ಮೂರನೇ ಕಂತಿನ ಪೂರೈಕೆ ಅಂದಾಜು ಮಂಡನೆಯನ್ನು ಕೈಬಿಡಬಹುದು ಎಂದು ಚಿಂತಿಸುತ್ತಿದೆ.

ಸರ್ಕಾರದ ಹಣಕಾಸು ಸ್ಥಿತಿಯ ಮಧ್ಯವಾರ್ಷಿಕ ಪರಿಶೀಲನಾ ವರದಿನಯ್ನು ಸಚಿವ ಜಯಚಂದ್ರ ಶುಕ್ರವಾರ ಸದನದಲ್ಲಿ ಮಂಡಿಸಿದರು. ನಂತರ ಇದನ್ನು ಸದನದಲ್ಲಿ ಅಂಗೀಕರಿಸಲಾಯಿತು.

ಆರ್ಥಿಕ ಹೊಣೆಗಾರಿಗೆ ಅಧಿ ನಿಯಮದ ಪ್ರಕಾರ ವಿತ್ತೀಯ ಕೊರತೆ ಜಿಎಸ್ ಡಿಪಿಯ ಶೇ.3ರ ಮಿತಿಯೊಳಗಿರಬೇಕು. ಅದಕ್ಕೆ ಅನುಗುಣವಾಗಿ ಈ ಸಾಲಿನಲ್ಲಿ ವಿತ್ತೀಯ ಕೊರತೆ ಶೇ.2.75ರಷ್ಟಿದೆ. ಅಂದರೆ, ಬಜೆಟ್ ಸಂದರ್ಭದಲ್ಲಿ ಈ ಸಾಲಿನ ರು.20.220 ಕೋಟಿಗಳೆಂದು ಅಂದಾಜಿಸಲಾಗಿತ್ತು. ಇದಕ್ಕೆ ಹೋಲಿಸಿದರೆ, ಸೆಪ್ಟೆಂಬರ್ ಅಂತ್ಯಕ್ಕೆ ವಿತ್ತೀಯ ಕೊರತೆ ರು.1,256 ಕೋಟಿ ಇದೆ.

ಸೆಪ್ಟೆಂಬರ್ ಅಂತ್ಯಕ್ಕೆ 6 ತಿಂಗಳ ರಾಜಸ್ವ ಜಮೆ ರು.54, 192 ಕೋಟಿ. ಅದರಲ್ಲಿ ಸ್ವಂತ ತೆರಿಗೆ ರಾಜಸ್ವ ರು.35,671 ಕೋಟಿ. ಹಿಂದಿನ ಸಾಲಿಗೆ ಹೋಲಿಸಿದರೆ, ಇದು ಶೇ. 46 ರಷ್ಟಿದೆ. ಅಂದರೆ ಶೇ.11.94 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com