ಹಳಿ ತಪ್ಪಿದ ರೈಲು, ಪ್ರಯಾಣಿಕರು ಸುರಕ್ಷಿತ

ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರಕ್ಕೆ ಬರುವ 76551 ರೈಲು ಚಿಂತಾಮಣಿ ಶ್ರೀನಿವಾಸಪುರ ಮಾರ್ಗ ಮಧ್ಯೆ ಶನಿವಾರ ಬೆಳಗ್ಗೆ ಹಳಿ ತಪ್ಪಿದೆ. ಅದೃಷ್ಟವಶಾತ್ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ...
ಹಳ್ಳಿ ತಪ್ಪಿದ ರೈಲು (ಸಂಗ್ರಹ ಚಿತ್ರ)
ಹಳ್ಳಿ ತಪ್ಪಿದ ರೈಲು (ಸಂಗ್ರಹ ಚಿತ್ರ)

ಕೋಲಾರ: ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರಕ್ಕೆ ಬರುವ 76551 ರೈಲು ಚಿಂತಾಮಣಿ ಶ್ರೀನಿವಾಸಪುರ ಮಾರ್ಗ ಮಧ್ಯೆ ಶನಿವಾರ ಬೆಳಗ್ಗೆ ಹಳಿ ತಪ್ಪಿದೆ. ಅದೃಷ್ಟವಶಾತ್ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಹೀಗಾಗಿ ರೈಲು ಕೋಲಾರಕ್ಕೆ ಬರದೆ ಶ್ರೀನಿವಾಸಪುರದಲ್ಲೇ ನಿಲ್ಲುವಂತಾಗಿದೆ. ಬೆಂಗಳೂರಿನಿಂದ ಬೆಳಗ್ಗೆ 8.15ಕ್ಕೆ ಹೊರಟು ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಮುಖೇನ 11.57ಕ್ಕೆ ಶ್ರೀನಿವಾಸಪುರಕ್ಕೆ ಬಂದು ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 12.30ಕ್ಕೆ ಕೋಲಾರಕ್ಕೆ ಬರಬೇಕಿತ್ತು. ಆದರೆ, ಶ್ರೀನಿವಾಸಪುರ ರೈಲು ನಿಲ್ದಾಣಕ್ಕೆ ಒಂದು ಕಿ.ಮೀ. ಇದೆ ಎನ್ನುವಾಗ ರೈಲಿನ 3 ಮತ್ತು 4ನೇ ಬೋಗಿಗಳು ಹಳಿ ತಪ್ಪಿವೆ. ಆದರೆ, ವಿಷಯ ಚಾಲಕರಿಗೆ ತಿಳಿಯದ ಕಾರಣ ಹಳಿ ತಪ್ಪಿದ ಬೋಗಿಗಳ ಜತೆ ರೈಲು ಚಲಿಸುತ್ತಲೇ ಇತ್ತು. ಆದರೆ, ಮಾರ್ಗಮಧ್ಯೆ ಜನತೆ ನೀಡಿದ ಸುಳಿವಿನಿಂದ ರೈಲನ್ನು ಶ್ರೀನಿವಾಸಪುರ ನಿಲ್ದಾಣದಲ್ಲಿ ನಿಲ್ಲಿಸಲಾಯಿತು.

ರೈಲು ನಿಲುಗಡೆ ವೇಳೆ 3 ಮತ್ತು 4ನೇ ಬೋಗಿಗಳಲ್ಲಿರುವ ಪ್ರಯಾಣಿಕ ರಿಗೆ ಹಳಿತಪ್ಪಿದ ವಿಷಯ ತಿಳಿದು ಗಾಬರಿಯಲ್ಲಿ ಬೋಗಿಯಿಂದ ಕೆಳಗಿಳಿದಿದ್ದಾರೆ. ಹೀಗಾಗಿ ಪ್ರಯಾಣಿಕರು ಬೇರೆ ವಾಹನಗಳ ಮೂಲಕ ಪ್ರಯಾಣ ಮುಂದುವರಿಸಿದ್ದಾರೆ. ರೈಲು ಹಳಿ ತಪ್ಪಲು ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ರೇಲ್ವೆ ಇಲಾಖೆಯ ಹಿರಿಯ ಅಧಿಕಾರಿ ಸಂಜಯ್ ಅಗರವಾಲ್, ಇಂಜನಿಯರ್‍ಗಳಾದ ಲಕ್ಷ್ಮಣ್‍ಸಿಂಗ್, ಹನುಮಂತಪ್ಪ ಇನ್ನಿತರರು ಬೆಂಗಳೂರಿನಿಂದ ವಿಶೇಷ ರೈಲಿನಲ್ಲಿ ಶ್ರೀನಿವಾಸಪುರಕ್ಕೆ ತೆರಳಿದ್ದು, ಶನಿವಾರ ಬೆಳಗ್ಗೆಯೊಳಗೆ ದುರಸ್ತಿ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com