ಸಿಬ್ಬಂದಿ ಬದಲು ಸೆಕ್ಯುರಿಟಿ ನೇಮಿಸಿಕೊಳ್ಳಬಹುದಲ್ಲ

ಐಪಿಎಸ್ ಅಧಿಕಾರಿಗಳ ಮನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆರ್ಡರ್ಲಿಗಳ ಬದಲಿಗೆ ಖಾಸಗಿ ಸೆಕ್ಯುರಿಟಿ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬಾರದೇಕೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಐಪಿಎಸ್ ಅಧಿಕಾರಿಗಳ ಮನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆರ್ಡರ್ಲಿಗಳ ಬದಲಿಗೆ ಖಾಸಗಿ ಸೆಕ್ಯುರಿಟಿ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬಾರದೇಕೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ತರಬೇತಿ ಹೊಂದಿದ ಕಾನ್ಸ್‍ಟೇಬಲ್ ಗಳನ್ನು ಐಪಿಎಸ್ ಅಧಿಕಾರಿಗಳ ಮನೆಯಲ್ಲಿ ಬಟ್ಟೆ ತೊಳೆಯಲು, ಅಡುಗೆ ಕೆಲಸ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುವುದರಿಂದ ಕಾನ್ಸ್‍ಟೇಬಲ್‍ಗಳಿಗೆ ಅವಮಾನ ಮಾಡಿದಂತಾಗುತ್ತದೆ. ಅಲ್ಲದೇ, ತರಬೇತಿ ಹೊಂದಿದ ಸಿಬ್ಬಂದಿಯನ್ನು ಪರಿಣಿತಿ ಬೇಕಿಲ್ಲದ ಕೆಲಸಕ್ಕೆ ಬಳಸಿಕೊಂಡು ಸಂಪನ್ಮೂಲ ವ್ಯರ್ಥ ಮಾಡಿ
ದಂತಾಗುತ್ತದೆ. ಅದರ ಬದಲು ಅವರನ್ನು ಪೊಲೀಸಿಂಗ್‍ಗೆ ಬಳಸಿದರೆ ತಕ್ಕ ಮಟ್ಟಿಗೆ ಸಿಬ್ಬಂದಿ ಕೊರತೆ ನೀಗಿಸಿದಂತಾಗುತ್ತದೆ. ಇದೇ ಕಾರಣಕ್ಕೆ ಇತ್ತೀಚೆಗೆ ಗೃಹ ಸಚಿವ ಜಿ. ಪರಮೇಶ್ವರ್ ಕೂಡಾ ಆರ್ಡರ್ಲಿಯನ್ನು ರದ್ದುಗೊಳಿಸಲಾಗುತ್ತದೆ ಎಂದಿದ್ದರು.

ಈ ಬಗ್ಗೆ ಇಲಾಖೆಯಲ್ಲಿ ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ. ಐಪಿಎಸ್ ಅಧಿಕಾರಿಗಳ ಮನೆಯಲ್ಲಿ ಕೆಲಸಕ್ಕೆ ಬೇಕಾಗುವ ಸಿಬ್ಬಂದಿಯನ್ನು ಖಾಸಗಿ ಸೆಕ್ಯುರಿಟಿ ಸಂಸ್ಥೆಗಳಿಂದ ನಿಯೋಜಿಸಿಕೊಳ್ಳಬಹುದು. ಇವರಿಗೆ ಅಧಿಕಾರಿಗಳ ಸಂಬಳದಲ್ಲೇ ಹಣ ಬಳಸಿಕೊಳ್ಳಬೇಕು ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ. ಇದರಿಂದ ಮನೆ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಆರ್ಡರ್ಲಿಗಳಾಗಿರುವ ಪೊಲೀಸ್ ಕಾನ್ಸ್‍ಟೇಬಲ್‍ಗಳನ್ನು ಪೊಲೀಸಿಂಗ್ ಕೆಲಸಕ್ಕೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಸುಮಾರು 3000 ಆರ್ಡರ್ಲಿಗಳಿದ್ದಾರೆ.

ಐಪಿಎಸ್, ಐಎಎಸ್ ಅಧಿಕಾರಿಗಳ ಮನೆಗಳಲ್ಲಿ ಇವರು ಮನೆ ಕೆಲಸದವರಂತೆ ದುಡಿಯುತ್ತಿದ್ದಾರೆ. ಮನೆಯಲ್ಲಿ ಕಸ ಬಳಿಯುವುದರಿಂದ ಹಿಡಿದು ಬೇರೆ ಬೇರೆ ಖಾಸಗಿ ಕೆಲಸಗಳಿಗೆ ಬಳಕೆಯಾಗುತ್ತಿದ್ದಾರೆ. ಹಲವಾರು ವರ್ಷಗಳಿಂದ ಈ ಪದ್ಧತಿ ಇದ್ದು ಇದರಿಂದ ಬೇಸತ್ತ ಪೊಲೀಸ್ ಸಿಬ್ಬಂದಿ, ಮಾಧ್ಯಮಗಳ ಮೂಲಕ ಸರ್ಕಾರ, ಸಚಿವರ ಮೇಲೆ ಒತ್ತಡ ಹಾಕಿ ಈ ಪದ್ಧತಿಗೆ ಕೊನೆಯಾಗಲಿ ಎಂದು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಗೃಹ ಸಚಿವ ಪರಮೇಶ್ವರ್ ಆರ್ಡರ್ಲಿ ಪದ್ಧತಿನಿಲ್ಲಿಸುವುದಾಗಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com