ಕಲಬುರ್ಗಿ ಕುಟುಂಬಕ್ಕೆ ಆರೆಸ್ಸೆಸ್‍ನಿಂದ ಶ್ರದ್ಧಾಂಜಲಿ ಪತ್ರ

ಜಾರ್ಖಂಡ್‍ನ ರಾಂಚಿಯಲ್ಲಿ ಇತ್ತೀಚೆಗೆ ನಡೆದ ಆರ್‍ಎಸ್‍ಎಸ್ ಸಮಾವೇಶದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಸಲ್ಲಿಸಿದ ಶ್ರದ್ಧಾಂಜಲಿ ಪತ್ರವನ್ನು ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರಿಗೆ ಆರ್‍ಎಸ್‍ಎಸ್ ಪ್ರಮುಖ ಶ್ರೀಧರ ನಾಡಿಗೇರ ಸೋಮವಾರ ನೀಡಿದ್ದಾರೆ...
ಎಂಎಂ ಕಲಬುರ್ಗಿ (ಸಂಗ್ರಹ ಚಿತ್ರ)
ಎಂಎಂ ಕಲಬುರ್ಗಿ (ಸಂಗ್ರಹ ಚಿತ್ರ)

ಧಾರವಾಡ: ಜಾರ್ಖಂಡ್‍ನ ರಾಂಚಿಯಲ್ಲಿ ಇತ್ತೀಚೆಗೆ ನಡೆದ ಆರ್‍ಎಸ್‍ಎಸ್ ಸಮಾವೇಶದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಸಲ್ಲಿಸಿದ ಶ್ರದ್ಧಾಂಜಲಿ ಪತ್ರವನ್ನು ಕಲಬುರ್ಗಿ ಅವರ ಪತ್ನಿ  ಉಮಾದೇವಿ ಅವರಿಗೆ ಆರ್‍ಎಸ್‍ಎಸ್ ಪ್ರಮುಖ ಶ್ರೀಧರ ನಾಡಿಗೇರ ಸೋಮವಾರ ನೀಡಿದ್ದಾರೆ.

ಸಮಾವೇಶದಲ್ಲಿ ಡಾ. ಕಲಬುರ್ಗಿ ಅವರ ಹತ್ಯೆ ಖಂಡಿಸಿ ಶ್ರದ್ಧಾಂಜಲಿ ಸಲ್ಲಿಸಿ, ಮೌನಾಚರಣೆ ಮಾಡಲಾಗಿತ್ತು. ಆಗ ಕುಟುಂಬದವರಿಗೆ ಸಾಂತ್ವನದ ಪತ್ರ ಸಿದಟಛಿಪಡಿಸಲಾಗಿತ್ತು. ಇದೀಗ ಕಲಬುರ್ಗಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಾಯಿತು. ಹತ್ಯೆಗೆ ಸಂಬಂಧಿಸಿ ಸಂಘದ ಮೇಲಿನ ಆರೋಪ ಅಸಮಂಜಸ. ಯಾವುದೇ ಆಧಾರಗಳಿಲ್ಲದೇ ಸಂಘಟನೆಪೊದನ್ನು ಈ ರೀತಿ ಆರೋಪ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ಆದಷ್ಟು ಬೇಗ ಕಲಬುರ್ಗಿ ಹಂತಕರನ್ನು ರಾಜ್ಯ ಸರ್ಕಾರ ಬಂಧಿಸಲಿ ಎಂಬುದು ನಮ್ಮ ಆಗ್ರಹ ಎಂದು ಶ್ರೀಧರ ನಾಡಿಗೇರ ಸುದ್ದಿಗಾರರಿಗೆ  ತಿಳಿಸಿದ್ದಾರೆ.

ಈ ವೇಳೆ ಇಷ್ಟು ತಡವಾಗಿ ಶ್ರದ್ಧಾಂಜಲಿ ಪತ್ರ ನೀಡಿದ್ದೇಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶ್ರೀಧರ ನಾಡಿಗೇರ, ತಮಗೆ ಶ್ರದ್ಧಾಂಜಲಿ ಪತ್ರ ತಡವಾಗಿ ಸಿಕ್ಕಿತು. ಹಾಗಾಗಿ ಅವರಿಗೆ ಆ  ಒಪ್ಪಿಸುವುದು ವಿಳಂಬವಾಯಿತು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com