

ಬೆಂಗಳೂರು: ವಿದ್ಯುತ್ ಚಿತಾಗಾರದ ಶುಲ್ಕವನ್ನು ರು.50ರಿಂದ ರು.250ಕ್ಕೆ ಏರಿಸಿದ್ದು, ಇದೇ ದರ ಮುಂದುವರಿಸಲಾಗುವುದು ಎಂದು ಮೇಯರ್ ಮಂಜುನಾಥರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಪ್ರತಿ ಶವ ಸಂಸ್ಕಾರಕ್ಕೆ ಪಾಲಿಕೆಗೆ ರು.1,250 ರಿಂದ ರು.1,350 ವರೆಗೆ ವೆಚ್ಚವಾಗುತ್ತದೆ. ಹಿಂದೆ ಇದ್ದ ಆಡಳಿತಾಧಿಕಾರಿಗಳು ದರ ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಗುಂಡಿ ತೆಗೆಯಲು ರು.500 ರಿಂದ ರು.1 ಸಾವಿರ ಖರ್ಚು ಮಾಡಬೇಕಾಗುತ್ತದೆ. ಈಗಿನ ಸಂದರ್ಭಕ್ಕೆ ರು.250ರ ದರ ಹೆಚ್ಚಾಗುವುದಿಲ್ಲ. ಸಿಬ್ಬಂದಿ ವೇತನ, ಚಿತಾಗಾರಗಳ ನಿರ್ವಹಣೆಗೆ ತಗಲುವ ವೆಚ್ಚ ಲೆಕ್ಕ ಹಾಕಿದರೆ ಶುಲ್ಕ ಹೆಚ್ಚಳ ಹೊರೆಯಾಗುವುದಿಲ್ಲ ಎಂದರು.
ಶುಲ್ಕ ಹೆಚ್ಚಳದಿಂದ ಬಡವರಿಗೆ ಹೊರೆಯಾಗುತ್ತದೆ ಎನ್ನುವುದಾದರೆ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರುವವರು ಶವಸಂಸ್ಕಾರದ ವೇಳೆ ಬಿಪಿಎಲ್
ಕಾರ್ಡ್ ಪ್ರತಿ ತೋರಿಸಿದರೆ ರಿಯಾಯಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಬಿಪಿಎಲ್ ಕಾಡ್ರ್ ದಾರರಿಗೆ ರು.50 ಅಥವಾ ರು.100 ಶುಲ್ಕ ಮಾತ್ರ ನಿಗದಿಪಡಿಸಲಾಗುವುದು ಎಂದರು.
Advertisement