
ಬೆಂಗಳೂರು: ಹೊಸ ಕಟ್ಟಡಗಳಿಗೆ ನೀರಿನ ಸಂಪರ್ಕ ಪಡೆಯುವವರು ಇನ್ನು ಮುಂದೆ ಹೆಚ್ಚು ಶುಲ್ಕ ಪಾವತಿಸಲು ಸಿದ್ಧರಾಗಬೇಕು. ಏಕೆಂದರೆ ಬೆಂಗಳೂರು ಜಲ ಮಂಡಳಿ ಪ್ರೋರಾಟ ಶುಲ್ಕ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು, ಒಂದು ವೇಳೆ ಇದಕ್ಕೆ ಅನುಮೋದನೆ ದೊರೆತರೆ ಶುಲ್ಕ ಹೆಚ್ಚಾಗಲಿದೆ.
ನಗರ ವ್ಯಾಪ್ತಿಯಲ್ಲಿ ಹೊಸ ವಸತಿ ಕಟ್ಟಡ, ಅಪಾರ್ಟ್ ಮೆಂಟ್, ವಸತಿ ಸಮುಚ್ಚಯ, ವಾಣಿಜ್ಯ ಕಟ್ಟಡಗಳು ಸೇರಿದಂತೆ ಎಲ್ಲ ಮಾದರಿಯ ಕಟ್ಟಡಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಏಕ ಕಂತಿನಲ್ಲಿ ಪಾವತಿಸಲು ಅವಕಾಶವಾಗುವಂತೆ ಶುಲ್ಕ ಹೆಚ್ಚಿಸಲಾಗಿದೆ. ಇದರೊಟ್ಟಿಗೆ ಕೆಲವು ತಿದ್ದುಪಡಿಗಳನ್ನು ಮಾಡಲು ಹೊರಟಿದ್ದು, ಮತ್ತೊಮ್ಮೆ ಸಭೆ ಕರೆದು ಒಪ್ಪಿಗೆ ಪಡೆಯಲು ಮಂಡಳಿ ನಿರ್ಧರಿಸಿದೆ. ಒಂದು ವೇಳೆ ಒಪ್ಪಿಗೆ ಸಿಕ್ಕರೆ ಮುಂದಿನ ವರ್ಷದ ಆರಂಭದಿಂದಲೇ ಜಾರಿಗೆ ಬರಲಿದೆ.
ಈಗ ವಸತಿ ಕಟ್ಟಡಗಳಿಗೆ ನೆಲ ಮತ್ತು ಎರಡು ಅಂತಸ್ತಿನ ಮನೆಗಳ ಚದರ ಮೀಟರ್‍ಗೆ 150, ಅಪಾರ್ಟ್‍ಮೆಂಟ್, ವಸತಿ ಸಮುಚ್ಚಯಗಳಿಗೆ 200, ವಸತಿರಹಿತ, ವಾಣಿಜ್ಯ ಕಟ್ಟಡಗಳಿಗೆ ರು.300 ಶುಲ್ಕ ವಿಧಿಸಲಾಗುತ್ತಿದ್ದು, ಪರಿಷ್ಕರಣೆಯಿಂದ ಇದರ ಪ್ರಮಾಣ ದುಪ್ಪಟ್ಟಾಗಲಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರೋರಾಟ ಹೆಚ್ಚಳ ಮಾಡಿಲ್ಲ. ನೀರಿನ ಸಂಪರ್ಕವನ್ನು ಅಧಿಕೃತಗೊಳಿಸಿ ಸರಿಯಾಗಿ ದರ ಕಟ್ಟಬೇಕು. ಯಾವುದೇ ಅನಧಿಕೃತ ಸಂಪರ್ಕ ಪಡೆದು ಸರ್ಕಾರಕ್ಕೆ ವಂಚಿಸಬಾರದು. ಪ್ರೋರಾಟ ಹೆಚ್ಚಳವಾದಲ್ಲಿ ಜಲಮಂಡಳಿಗೆ ಆದಾಯ ಹೆಚ್ಚಾಗಲಿದ್ದು, ಇದರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಮುಖ್ಯ ಎಂಜಿನಿಯರ್ ಎಸ್. ಕೃಷ್ಣಪ್ಪ ತಿಳಿಸಿದ್ದಾರೆ.
ಎಸ್‍ಟಿಪಿ ಜಾರಿಗೆ ಸಿದ್ಧತೆ: ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹೆಚ್ಚಾದಂತೆ, ಬಳಸಿದ ನೀರು ಕಲುಷಿತಗೊಂಡು ಒಳಚರಂಡಿ ಸೇರುತ್ತಿರುವುದು ಹೆಚ್ಚಾಗಿದೆ. ಇದರ ನಿರ್ವಹಣೆಗೆ ಇನ್ನು ಮುಂದೆ ಐದು ಮನೆಗಳುಳ್ಳ ಎಲ್ಲ ಅಪಾರ್ಟ್‍ಮೆಂಟ್‍ಗಳಲ್ಲೂ ಕಡ್ಡಾಯವಾಗಿ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‍ಟಿಪಿ) ಸ್ಥಾಪಿಸಲು ಬೆಂಗಳೂರು ಜಲಮಂಡಳಿ ಚಿಂತಿಸಿದೆ. ನಗರದಲ್ಲಿ ಸೂಕ್ತ ಒಳಚಂರಡಿ ವ್ಯವಸ್ಥೆ ಇಲ್ಲದಿರುವ ಪರಿಣಾಮ ಅಗತ್ಯಕ್ಕಿಂತ ಹೆಚ್ಚು ಕೊಳಚೆ ನೀರನ್ನು ಶುದಿಟಛೀಕರಣ ಘಟಕಗಳಿಗೆ ಹರಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಎಸ್‍ಟಿಪಿ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ.
Advertisement