ಸಂಸ್ಕೃತಿಜನ್ಯ ರಾಜಕಾರಣ ಹುಟ್ಟುಹಾಕಿದ್ದು ಗಾಂಧಿ

ಮಹಾತ್ಮ ಗಾಂಧೀಜಿ ತಮ್ಮ ಅರಿವಿಗೆ ಬಂದ ಎಲ್ಲವನ್ನು ಒಂದಕ್ಕೊಂದು ಬೆಸೆದು ನೋಡುವ ಸಮಗ್ರದ ದೃಷ್ಟಿಕೋನ ಹೊಂದಿದ್ದರು ಎಂದು ರಂಗಾಯಣ ಮಾಜಿ ನಿರ್ದೇಶಕ ಪ್ರಸನ್ನ ಅಭಿಪ್ರಾಯ ಪಟ್ಟರು...
ಮಹಾತ್ಮ ಗಾಂಧೀಜಿ (ಸಂಗ್ರಹ ಚಿತ್ರ)
ಮಹಾತ್ಮ ಗಾಂಧೀಜಿ (ಸಂಗ್ರಹ ಚಿತ್ರ)

ಬೆಂಗಳೂರು: ಮಹಾತ್ಮ ಗಾಂಧೀಜಿ ತಮ್ಮ ಅರಿವಿಗೆ ಬಂದ ಎಲ್ಲವನ್ನು ಒಂದಕ್ಕೊಂದು ಬೆಸೆದು ನೋಡುವ ಸಮಗ್ರದ ದೃಷ್ಟಿಕೋನ ಹೊಂದಿದ್ದರು ಎಂದು ರಂಗಾಯಣ ಮಾಜಿ ನಿರ್ದೇಶಕ ಪ್ರಸನ್ನ ಅಭಿಪ್ರಾಯ ಪಟ್ಟರು.

ಸಮುದಾಯ ರಂಗತಂಡವು ಮಹಾತ್ಮ ಗಾಂಧಿ ಭಾರತಕ್ಕೆ ಬಂದು ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಏರ್ಪಡಿಸಿದ್ದ `ನಿರಂತರ ಗಾಂಧಿ ಒಂದು ಮುಕ್ತ ಚರ್ಚೆ'ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅವರ ಸಂತನ ಮೌನವನ್ನು ಪ್ರಗತಿಪರರು ಮೌಢ್ಯವೆಂದು ಬಿಂಬಿಸುತ್ತಿದ್ದದ್ದು ಸರಿಯಲ್ಲ. ಸಂವೇದನದ ಪರಿಧಿಗೆ ಬಂದ ವಿಷಯಗಳನ್ನು ಓರೆಗೆ ಹಚ್ಚಿ ನೋಡುತ್ತಿದ್ದ ಅವರು ಓರ್ವ ಸಂತ ಹಾಗೂ ಮೊದಲ ರಾಜಕಾರಣಿ ಎಂಬುದಾಗಿ ವಿಶ್ಲೇಷಿಸಬಹುದು. ಒಂದು ಮಾತನಿಂದ ಇಡೀ ಸಮುದಾಯವನ್ನು ಒಗ್ಗೂಡಿಸುವ ಸಂಸ್ಕೃತಿ ಜನ್ಯ ರಾಜಕಾರಣ ಹುಟ್ಟುಹಾಕಿದರು ಎಂದು ತಿಳಿಸಿದರು.


ಪ್ರಸ್ತುತ ಸಮಾಜದಲ್ಲಿ ಹದಗೆಟ್ಟಿರುವ ವಾತಾವರಣವನ್ನು ನಾವು ನೋಡುತ್ತಿದ್ದೇವೆ. ಅನುಭವಜನ್ಯ ಮತ್ತು ಸಂಸ್ಕೃತಿ ಜನ್ಯ ರಾಜಕಾರಣ ಮಾಡಬೇಕಾದ ತುರ್ತು ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ಕೇಂದ್ರೀಕೃತ ವ್ಯವಸ್ಥೆಗೆ ವಿರುದ್ಧವಾಗಿದ್ದ ಗಾಂಧಿ, ಎಲ್ಲೆಡೆ ಆಡಳಿತ ಸಿಗಬೇಕೆಂಬ ಮಹಾದಾಸೆ ಹೊಂದಿದ್ದರು ಎಂದರು.

ನಾಟಕಕಾರ ಮುಕುಂದ ರಾವ್, ಪೃಥ್ವಿದತ್ತ ಚಂದ್ರಶೋಭಿ, ಅಗ್ರಹಾರ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com