ಜೀವವೈವಿಧ್ಯ ಅನುಕೂಲ ಹರಡಿಸಿ: ಕೆ. ರಬಿಕುಮಾರ್

ನಗೊಯಾ ಒಪ್ಪಂದದ ಪ್ರಕಾರ ಜಗತ್ತಿನ ಎಲ್ಲೆಡೆ ಇರುವ ಜೀವವೈವಿಧ್ಯದ ಅನುಕೂಲಗಳನ್ನು ಜಗತ್ತಿನ ಎಲ್ಲೆಡೆ ತಲುಪಿಸಬೇಕು. ಇದಕ್ಕಾಗಿ ಸಂಬಂಧಿಸಿದ ದೇಶ, ಪ್ರದೇಶಗಳಸಂಪನ್ಮೂಲ ವ್ಯಕ್ತಿಗಳನ್ನು ಒಗ್ಗೂಡಿಸಿ, ಪರಸ್ಪರ ಸಂವಹನ ಮತ್ತು ಜ್ಞಾನ ನಿಮಯಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗೊಯಾ ಒಪ್ಪಂದದ ಪ್ರಕಾರ ಜಗತ್ತಿನ ಎಲ್ಲೆಡೆ ಇರುವ ಜೀವವೈವಿಧ್ಯದ ಅನುಕೂಲಗಳನ್ನು ಜಗತ್ತಿನ ಎಲ್ಲೆಡೆ ತಲುಪಿಸಬೇಕು. ಇದಕ್ಕಾಗಿ ಸಂಬಂಧಿಸಿದ ದೇಶ, ಪ್ರದೇಶಗಳ ಸಂಪನ್ಮೂಲ ವ್ಯಕ್ತಿಗಳನ್ನು ಒಗ್ಗೂಡಿಸಿ, ಪರಸ್ಪರ ಸಂವಹನ ಮತ್ತು ಜ್ಞಾನ ನಿಮಯಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದ ಕಾರ್ಯದರ್ಶಿ ಕೆ. ರಬಿಕುಮಾರ್ ಹೇಳಿದರು.

ನಗರದ ಹೊರವಲಯದಲ್ಲಿ ಆರಂಭಗೊಂಡ ಸಾಂಪ್ರದಾಯಿಕ ಆರೋಗ್ಯ ಜ್ಞಾನತಜ್ಞರ ಅಂತಾರಾಷ್ಟ್ರೀಯ ಸಮಾವೇಶ ಹಾಗೂ ಕಾರ್ಯಾಗಾರವನ್ನು ಸ್ಥಳೀಯ ಆರೋಗ್ಯ ಪರಂಪರೆಗಳ ಪುನರುತ್ಥಾನ ಪ್ರತಿಷ್ಠಾನ (ಎಫ್ಎಲ್‍ಆರ್‍ಎಚ್‍ಟಿ)ದ ಅಂತರ ಜ್ಞಾನ ವಿಶ್ವವಿದ್ಯಾಲಯ, ಯುಎನ್ ಡಿಪಿ ಈಕ್ವೇಟರ್ ಇನಿಶಿಯೇಟಿವ್, ಕಂಪಾಸ್ ಮತ್ತು ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ ಸಂಯುಕ್ತವಾಗಿ ಸಂಘಟಿಸಿವೆ. ಇಪ್ಪತ್ತಕ್ಕೂ ಹೆಚ್ಚು ದೇಶಗಳ ಸಾಂಪ್ರದಾಯಿಕ ಆರೋಗ್ಯ ವಿಜ್ಞಾನ ತಜ್ಞರು ಪಾಲ್ಗೊಂಡಿದ್ದು, ತಮ್ಮಲ್ಲಿರುವ ಪಾರಂಪರಿಕ ತಿಳಿವಳಿಕೆಯ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಜಗತ್ತಿನ ವಿವಿಧ ಜನಾಂಗಗಳ ಹಾಗೂ ಸ್ಥಳೀಯರ ಜೈವಿಕ ಸಾಂಸ್ಕೃತಿಕ ನಂಟು ಅರಿಯುವುದು, ವಂಶವಾಹಿನಿ ಸಂಪನ್ಮೂಲಗಳು ಮತ್ತು ತತ್ಸಂಬಂಧಿ ಪಾರಂಪರಿಕ ಜ್ಞಾನ ಮತ್ತು ಅಭ್ಯಾಸಗಳನ್ನು ಅರಿಯುವ ಪ್ರಯತ್ನದ ಅಂಗವಾಗಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಸಮಾವೇಶವನ್ನು ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಬಿಕುಮಾರ್, ನಗೊಯಾ ಒಪ್ಪಂದದ ಪ್ರಕಾರ, ಜಗತ್ತಿನ ಎಲ್ಲೆಡೆ ಇರುವ ಜೀವವೈವಿಧ್ಯದ ಅನುಕೂಲಗಳನ್ನು ಜಗತ್ತಿನ ಎಲ್ಲೆಡೆ ತಲುಪಿಸಬೇಕು. ಇದಕ್ಕಾಗಿ, ಸಂಬಂಧಿತ ದೇಶ, ಪ್ರದೇಶಗಳ ಸಂಪನ್ಮೂಲ ವ್ಯಕ್ತಿಗಳನ್ನು ಒಗ್ಗೂಡಿಸುವುದು, ಪರಸ್ಪರ ಸಂವಹನ ಹಾಗೂ ವಿನಿಮಯಕ್ಕೆ ವೇದಿಕೆ ಕಲ್ಪಿಸುವುದು. ಅಂಥ ಆಶಯವನ್ನು ಬಿಂಬಿಸುವ ಕಾರ್ಯಾಗಾರ ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ನಡೆದಿದೆ ಎಂದರು.

ಪಾರಂಪರಿಕ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳಲು ಗಡಿ, ನಿಯಮಗಳು ಅಡ್ಡಿಯಾಗಬಾರದು. ಈ ಹಿನ್ನೆಲೆಯಲ್ಲಿ ಜೀವವೈಧ್ಯತೆ ಕುರಿತು ಸರಕಾರಗಳು ಸೂಕ್ತ ಕಾನೂನು ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಯುನೈಟೆಡ್ ನೇಷನ್ಸ್ ಡೆವಲಪ್ ಮೆಂಟ್ ಪ್ರೊಗ್ರಾಮ್ (ಯುಎನ್ ಡಿಪಿ) ಈಕ್ವೇಟ್ ಇನೀಯೇಟಿವ್ ನ ಅಲೆಜಾಂಡ್ರ ಪೆರೊ ಅಭಿಪ್ರಾಯಪಟ್ಟರು.

ಅಂತರ ಜ್ಞಾನ ವಿಶ್ವದ್ಯಾಲಯದ ಕುಲಪತಿ ದರ್ಶನ ಶಂಕರ್, ಜರ್ಮನ್ ಸೊಸೈಟಿ ಫಾರ್ ಇಂಟರ್‍ನ್ಯಾಷನಲ್ ಕೊಪರೇಷನ್ (ಜಿಐಝಡ್)ನ ಎಬಿಎಸ್ ಕ್ಯಾಪಾಸಿಟಿ ಡೆವಲಪ್‍ಮೆಂಟ್ ಇನೀಯೇಟಿವ್‍ನ ಆಂಡ್ರಿಯಾಸ್ ಡ್ರ್ಯೂಸ್, ಮೊರೊಕ್ಕೊ ಸಮುದಾಯ ಪ್ರತಿನಿಧಿ ಲಾತಿಫಾ ದೌಷ್ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com