ಪ್ರಧಾನಿ ಬರ್ತಾರೆ; ಮಾರ್ಗ ಬದಲಾಗಿದೆ ಪ್ರಯಾಣಿಕರೆ

ಬಾಷ್ ಕಂಪನಿ ಹಾಗೂ ನ್ಯಾಸ್ಕಾಮ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಸೋಮವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಾಷ್ ಕಂಪನಿ ಹಾಗೂ ನ್ಯಾಸ್ಕಾಮ್  ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಸೋಮವಾರ ಮತ್ತು ಮಂಗಳವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಗಣ್ಯರು ಸಂಚರಿಸುವ ಈ ಮಾರ್ಗಗಳಲ್ಲಿ ಸಾರ್ವಜನಿಕರ ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ನಿಷೇಧಿಸಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. 
ಸೋಮವಾರ (ಅ.5) ಪಾರ್ಕಿಂಗ್ ನಿಷೇಧಿಸಿದ ರಸ್ತೆಗಳು
-ಬಳ್ಳಾರಿ ರಸ್ತೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದವರೆಗೆ
- ರಮಣ ಮಹರ್ಷಿ ರಸ್ತೆಯ ಮೇಖ್ರಿ ವೃತ್ತದಿಂದ ಕಾವೇರಿ ಜಂಕ್ಷನ್
-ಟಿ.ಚೌಡಯ್ಯ ರಸ್ತೆ, ಕಾವೇರಿ ವೃತ್ತದಿಂದ ವಿಂಡ್ಸರ್ ಮ್ಯಾನರ್ ವೃತ
 -ಕೆ.ಕೆ.ರಸ್ತೆಯಲ್ಲಿ, ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತ
-ಹರೇ ಕೃಷ್ಣ ರಸ್ತೆ, ಶಿವಾನಂದ ವೃತ್ತದಿಂದ ಟ್ರಿಲೈಟ್ ವೃತ್ತ
- ರೇಸ್ ಕೋರ್ಸ್ ರಸ್ತೆ, ಟ್ರಿಲೈಟ್ ವೃತ್ತದಿಂದ ಬಸವೇಶ್ವರ ವೃತ್ತ
-ಮಂಗಳವಾರ (ಅ. 6) ಪಾರ್ಕಿಂಗ್ ನಿಷೇಧಿಸಿದ ರಸ್ತೆಗಳು
- ರೇಸ್ ಕೋರ್ಸ್ ರಸ್ತೆ, ಟ್ರಿಲೈಟ್ ವೃತ್ತದಿಂದ ಬಸವೇಶ್ವರ ವೃತ್ತ
-ಅರಮನೆ ರಸ್ತೆ, ಮಹಾರಾಣಿ ವೃತ್ತದಿಂದ ಹಳೇ ಹೈಗ್ರೌಂಡ್ಸ್ ಪಿಎಸ್ ಜಂಕ್ಷನ್
-ಟಿ.ಚೌಡಯ್ಯ ರಸ್ತೆ, ಕಾವೇರಿ ವೃತ್ತದಿಂದ ರಾಜಭವನ ಜಂಕ್ಷನ್
-ಅಲಿ ಆಸ್ಕರ್ ರಸ್ತೆ, ರಾಜಭವನ ಜಂಕ್ಷನ್‍ನಿಂದ ಇನ್  ಫ್ಯಾಂಟ್ರಿ ರಸ್ತೆ
- ಇನ್ ಫ್ಯಾಂಟ್ರಿ ರಸ್ತೆ, ಅಲಿ ಆಸ್ಕರ್ ಜಂಕ್ಷನ್‍ನಿಂದ ಟ್ರಾಫಿಕ್ ಹೆಡ್‍ಕ್ವಾರ್ಟರ್
- ಕ್ವೀನ್ಸ್ ರಸ್ತೆ, ಬಾಳೆಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತ
- ಕಸ್ತೂರ ಬಾ ರಸ್ತೆ, ಕ್ವೀನ್ಸ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತ
- ಮಲ್ಯ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆರ್‍ಆರ್‍ಎಂಆರ್ ಜಂಕ್ಷನ್
-ಆರ್‍ಆರ್‍ಎಂಆರ್ ರಸ್ತೆ, ರಿಚ್‍ಮಂಡ್ ವೃತ್ತ
- ಹೊಸೂರು ರಸ್ತೆ, ಅಶೋಕನಗರ ಸಿಗ್ನಲ್ ಲೈಟ್‍ನಿಂದ ಯುಕೋ ಬ್ಯಾಂಕ್
- ಸರ್ಜಾಪುರ ರಸ್ತೆ, ಮಡಿವಾಳ ಚೆಕ್ ಪೋಸ್ಟ್-- ಕೋರಮಂಗಲ ವಾಟರ್ ಟ್ಯಾಂಕ್
- ಹಳೇ ವಿಮಾನ ನಿಲ್ದಾಣ ರಸ್ತೆ, ಎಚ್‍ಎಎಲ್ ವಿಮಾನ ನಿಲ್ದಾಣ ದಿಂದ ಎಎಸ್‍ಸಿ ಸೆಂಟರ್
-ಎಂಜಿ ರಸ್ತೆ, ಟ್ರಿನಿಟಿ ವೃತ್ತದಿಂದ ವೆಬ್ಸ್ ಜಂಕ್ಷನ್
- ಕಬ್ಬನ್ ರಸ್ತೆ, ಮಣಿಪಾಲ್ ಸೆಂಟರ್ ನಿಂದ ಸಿಟಿಓ ವೃತ್ತ
- ರಾಜಭವನ ರಸ್ತೆ, ಸಿಟಿಓ ವೃತ್ತದಿಂದ ರಾಜಭವನ
-ಎಲ್‍ಎಚ್ ರಸ್ತೆ, ರಾಜಭವನ ವೃತ್ತದಿಂದ ಬಸವೇಶ್ವರ ವೃತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com